ಪೋಷಕರ ಮೇಲಿನ ದ್ವೇಷಕ್ಕೆ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಿದ ಆಡಳಿತ ಮಂಡಳಿ 

ಸರ್ಕಾರಿ ಜಾಗದಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಿದೆ. ಜೊತೆಗೆ ವಿದ್ಯಾರ್ಥಿಗಳಿಂದ ನಿಗದಿತ ಶುಲ್ಕಕ್ಕಿಂತ ದುಬಾರಿ ಶುಲ್ಕ ವಸೂಲಿ ಮಾಡುತ್ತಿದೆ ಎಂದು ವಿವಿಧ ಇಲಾಖೆಗಳಿಗೆ ವಿದ್ಯಾರ್ಥಿ ತಂದೆ ಮಲ್ಲಿಕಾರ್ಜುನ್ ಶಾಲೆ ವಿರುದ್ಧ ದೂರು ನೀಡಿ ಕಾನೂನು ಹೋರಾಟ ಮಾಡಿದ್ದರಂತೆ.

ಶಾಲೆ ಚಿತ್ರ

ಶಾಲೆ ಚಿತ್ರ

  • Share this:
ಕೊಡಗು (ಫೆ. 13):  ವಿದ್ಯಾರ್ಥಿಯ ತಂದೆ ಶಾಲೆ ವಿರುದ್ಧವೆ ವಿವಿಧ ಇಲಾಖೆಗಳಿಗೆ ದೂರು ನೀಡಿ ಹೋರಾಟ ನಡೆಸುತ್ತಿದ್ದರು ಎನ್ನೋ ಕಾರಣಕ್ಕೆ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರ ಹಾಕಿರುವ ಘಟನೆ  ಜಿಲ್ಲೆಯ ಕುಶಾಲನಗರ ಸಮೀಪದ ಗಿರುಗೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿರುಗೂರಿನಲ್ಲಿ ಇರುವ ಮಿಳಿಂದ ಎನ್ನುವ ಅನುದಾನಿತ ಶಾಲಾ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಪೋಷಕರು, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ನೂರಾರು ಮುಖಂಡರು ಶಾಲಾ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕ ಹೊಸೂರಿನ ಮಲ್ಲಿಕಾರ್ಜುನ್ ಎಂಬುವರ ಮಗ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ಮಿಳಿಂದ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದಾನೆ. ಈಗ ಏಳನೇ ತರಗತಿಯಲ್ಲಿ ತೇರ್ಗಡೆಯಾಗಿ ಎಂಟನೆ ತರಗತಿಗೆ ದಾಖಲಾಗಬೇಕಾಗಿತ್ತು. ಆದರೆ, ಆ ವಿದ್ಯಾರ್ಥಿಯನ್ನು ಶಾಲಾ ಆಡಳಿತ ಮಂಡಳಿಯು ದಾಖಲಿಸಿಕೊಳ್ಳದೆ ಹೊರ ಹಾಕಿದೆ.ಜನವರಿ ತಿಂಗಳ ಆರಂಭದಿಂದಲೂ ವಿದ್ಯಾರ್ಥಿಯನ್ನು ಶಾಲೆಗೆ ದಾಖಲಿಸಲು ಪೋಷಕರು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ ಆಡಳಿತ ಮಂಡಳಿ ವಿದ್ಯಾರ್ಥಿಯನ್ನು ದಾಖಲಿಸಿಕೊಂಡಿಲ್ಲ. ಹೀಗಾಗಿ ವಿದ್ಯಾರ್ಥಿಯ ಪರವಾಗಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ನೂರಾರು ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ನೂರಾರು ಜನರು ಶಾಲಾವರಣದಲ್ಲಿ ಪ್ರತಿಭಟನೆ ಆರಂಭಿಸುತಿದ್ದಂತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಪಿರಿಯಾಪಟ್ಟಣ ಸಿಪಿಐ ಪ್ರದೀಪ್ ಕುಮಾರ್ ಸೇರಿದಂತೆ ಹತ್ತಾರು ಪೊಲೀಸರು ಸ್ಥಳದಲ್ಲಿ ಜಮಾಯಿಸಿದರು.

ಇದನ್ನು ಓದಿ: ಗ್ರಾಮ ಪಂಚಾಯತ್​ ಚುನಾವಣೆ: ಸಿಪಿ ಯೋಗೇಶ್ವರ್​ ಹುಟ್ಟೂರಿನಲ್ಲಿ ಜಯಭೇರಿ ಬಾರಿಸಿದ ಜೆಡಿಎಸ್​

ಇನ್ನು ಮೈಸೂರಿನಿಂದ ಆಗಮಿಸಿದ್ದ ಡಿಡಿಪಿಐ ಪಾಂಡುರಂಗ ಅವರು ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ವಿದ್ಯಾರ್ಥಿಯನ್ನು ಶಾಲೆಗೆ ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ. ಮೊದಲು ವಿದ್ಯಾರ್ಥಿಯನ್ನು ಶಾಲೆಗೆ ದಾಖಲು ಮಾಡಿಕೊಳ್ಳಬೇಕೆಂದು ಶಾಲೆಗೆ ಭೇಟಿ ನೀಡಿ, ಸಭೆ ನಡೆಸಿ ಶಾಲಾ ಆಡಳಿತ ಮಂಡಳಿಗೆ ಸೂಚಿಸಿದರು. ಆದರೂ ಶಾಲಾ ಆಡಳಿತ ಮಂಡಳಿ ಇದಕ್ಕೆ ಬಗ್ಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಡೇರಾ ಕಮಿಟಿಗೆ ದೂರು ನೀಡಲಾಗುವುದು ಎಂದು ಡಿಡಿಪಿಐ ವಾಪಸ್ಸಾಗಿದ್ದಾರೆ.

ಶಾಲಾ ಆಡಳಿತ ಮಂಡಳಿಯು 9 ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದೆ. ಸರ್ಕಾರಿ ಜಾಗದಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಿದೆ. ಜೊತೆಗೆ ವಿದ್ಯಾರ್ಥಿಗಳಿಂದ ನಿಗದಿತ ಶುಲ್ಕಕ್ಕಿಂತ ದುಬಾರಿ ಶುಲ್ಕ ವಸೂಲಿ ಮಾಡುತ್ತಿದೆ ಎಂದು ವಿವಿಧ ಇಲಾಖೆಗಳಿಗೆ ವಿದ್ಯಾರ್ಥಿ ತಂದೆ ಮಲ್ಲಿಕಾರ್ಜುನ್ ಶಾಲೆ ವಿರುದ್ಧ ದೂರು ನೀಡಿ ಕಾನೂನು ಹೋರಾಟ ಮಾಡಿದ್ದರಂತೆ. ಹೀಗಾಗಿ ಶಾಲಾ ಆಡಳಿತ ಮಂಡಳಿಯು ಆ ವಿದ್ಯಾರ್ಥಿಯನ್ನು ದಾಖಲಿಸಿಕೊಂಡರೆ ಮತ್ತೆ ಶಾಲೆಗೆ ಕಿರುಕುಳ ತಪ್ಪಿದ್ದಲ್ಲ. ಬೇಕಾದರೆ ಜಿಲ್ಲಾಧಿಕಾರಿ ಅಥವಾ ಡೇರಾ ಕಮಿಟಿ ಏನು ನಿರ್ಧಾರ ಮಾಡುತ್ತೋ ಅಥವಾ ಏನು ಶಿಕ್ಷೆ ಕೊಡುತ್ತೋ ಅದಕ್ಕೆ ಬದ್ಧನಾಗಿರುತ್ತೇನೆ ಎನ್ನುತ್ತಿದೆ. ಒಟ್ಟಿನಲ್ಲಿ ಪೋಷಕರ ಮೇಲಿನ ದ್ವೇಷಕ್ಕೆ ಶಾಲಾ ಆಡಳಿತ ಮಂಡಳಿತಯು ವಿದ್ಯಾರ್ಥಿಯನ್ನು ಶಾಲೆಗೆ ದಾಖಲಿಸಿಕೊಳ್ಳದಿರುವುದು ಎಲ್ಲರ ಆಕ್ರೋಶಗೊಳ್ಳುವಂತೆ ಮಾಡಿದೆ.
Published by:Seema R
First published: