HOME » NEWS » State » EXPECTATIONS OF KARNATAKA FROM UNION BUDGET 2021 SNVS

Union Budget 2021 – ಈ ಬಜೆಟ್​ನಿಂದ ಕರ್ನಾಟಕದ ನಿರೀಕ್ಷೆಗಳಿವು

ಕೋವಿಡ್, ಬರ, ಪ್ರವಾಹದಿಂದ ಆರ್ಥಿಕವಾಗಿ ಕಂಗೆಟ್ಟಿರುವ ಕರ್ನಾಟಕ ಈ ಬಾರಿಯ ಬಜೆಟ್​ನಲ್ಲಿ ಹಲವು ಅಪೇಕ್ಷೆ, ನಿರೀಕ್ಷೆಗಳಿವೆ. ಮೆಟ್ರೋ ರೈಲು, ಕೃಷ್ಣಾ ಮೇಲ್ದಂಡೆ, ಎತ್ತಿನ ಹೊಳೆ ಮೊದಲಾದ ಯೋಜನೆಗಳಿಗೆ ಬಜೆಟ್​ನಿಂದ ಅನುದಾನದ ನಿರೀಕ್ಷೆ ಇಟ್ಟುಕೊಂಡಿದೆ.

news18
Updated:February 1, 2021, 10:38 AM IST
Union Budget 2021 – ಈ ಬಜೆಟ್​ನಿಂದ ಕರ್ನಾಟಕದ ನಿರೀಕ್ಷೆಗಳಿವು
ಬಿಎಸ್ ಯಡಿಯೂರಪ್ಪ
  • News18
  • Last Updated: February 1, 2021, 10:38 AM IST
  • Share this:
ಬೆಂಗಳೂರು(ಫೆ. 01): ಈ ಬಾರಿಯ ಬಜೆಟ್​ನಿಂದ ಕರ್ನಾಟಕಕ್ಕೆ ಹಲವು ನಿರೀಕ್ಷೆಗಳಿವೆ. ರಾಜ್ಯ ಕೆಲ ಪ್ರಮುಖ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಪುಷ್ಟಿ ಸಿಗುವ ಸಾಧ್ಯತೆ ಇದೆ. ಕೋವಿಡ್ ಬಿಕ್ಕಟ್ಟಿನ ಜೊತೆಗೆ ಪ್ರವಾಹ, ಬರ ಇತ್ಯಾದಿಯಿಂದ ಕಂಗೆಟ್ಟಿರುವ ರಾಜ್ಯ ಈ ಬಾರಿ ವಿಶೇಷ ಆರ್ಥಿಕ ನೆರವಿಗೆ ಮನವಿ ಮಾಡಿಕೊಂಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರುನಾಡಿನ ಎಲ್ಲಾ ಬೇಡಿಕೆಯನ್ನೂ ಈಡೇರಿಸುತ್ತಾರಾ ಎಂದು ಕಾದುನೋಡಬೇಕು.

ಕರ್ನಾಟಕದ ಕೆಲ ನಿರೀಕ್ಷೆಗಳು:

* ನೆರೆ ಪರಿಹಾರಕ್ಕೆ ಬಾಕಿ ಹಣ ಬಿಡುಗಡೆ ಮಾಡುವ ನಿರೀಕ್ಷೆ
* ಕೃಷ್ಣಾ ಮೇಲ್ದಂಡೆ ಯೋಜನೆಗೆ 51,148 ಕೋಟಿ ರೂ ವೆಚ್ಚ
* ಎತ್ತಿನ ಹೊಳೆ ಯೋಜನೆಗೆ 12,912 ಕೋಟಿ ರೂ ವೆಚ್ಚ; ಶೇ. 99 ವೆಚ್ಚ ಭರಿಸುವಂತೆ ಮನವಿ
* ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಬೇಡಿಕೆ
* ಮೆಟ್ರೋ ರೈಲು, ಸಬ್ ಅರ್ಬನ್ ರೈಲು ಯೋಜನೆ* ನಗರ ರಸ್ತೆ ಸಾರಿಗೆ ನಿಗಮಗಳಿಗೆ ಅನುದಾನದ ನಿರೀಕ್ಷೆ
* ಬೃಹತ್, ಸಣ್ಣ ಬಂದರು ಅಭಿವೃದ್ಧಿಗೆ ಆರ್ಥಿಕ ನೆರವು ಇರೀಕ್ಷೆ
* ಕನಿಷ್ಠ ಬೆಂಬಲ ಬೆಲೆಯ ಬಾಕಿ ಹಣ ನಿರೀಕ್ಷೆ

ಪ್ರವಾಹದಿಂದ ಕರ್ನಾಟಕ್ಕೆ ಅಪಾರ ನಷ್ಟವಾಗಿತ್ತು. ಈ ನಷ್ಟದ ಅಂದಾಜು ಮಾಡಿ ರಾಜ್ಯ ಸರ್ಕಾರವು 2,261 ಕೋಟಿ ರೂ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಅದರಲ್ಲಿ ರಾಜ್ಯಕ್ಕೆ ಸಿಕ್ಕಿದ್ದು 1,369 ರೂ ಮಾತ್ರ. ಬಾಕಿ ಹಣವನ್ನು ಬಜೆಟ್​ನಲ್ಲಾದರೂ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಇದನ್ನೂ ಓದಿ: Union Budget 2021 – ಬಹಳ ಮುಖ್ಯ ಎನಿಸುವ ನಾಲ್ಕು ಕ್ಷೇತ್ರಗಳಿಂದ ನಿರೀಕ್ಷೆಗಳಿವು

ಇನ್ನು, ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್ ಪ್ರದೇಶಕ್ಕೆ ಅನುಕೂಲ ಒದಗಿಸುವ ಕೃಷ್ಣಾ ಮೇಲ್ದಂಡೆ ಯೋಜನೆಯ ವೆಚ್ಚವನ್ನು ಭರಿಸುವಂತೆಯೂ ರಾಜ್ಯ ಸರ್ಕಾರ ಮನವಿ ಮಾಡಿದೆ.
Published by: Vijayasarthy SN
First published: February 1, 2021, 10:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories