News18 India World Cup 2019

Morning Digest: ಆರಂಭವಾಯ್ತ ಚುನಾವಣೋತ್ತರ ಸಮೀಕ್ಷೆ ಟಾಕ್​; ಇಂದು ಒದಲೇಬೇಕಾದ ಸುದ್ದಿಗಳು

ನಿನ್ನೆ ಸಂಜೆಯ ಮೇಲೆ ನಡೆದ ಬೆಳವಣಿಗೆಗಳು, ಇಂದು ಗಮನ ಹರಿಸಲೇಬೇಕಾದ ಸುದ್ದಿಗಳು. ಅವುಗಳ ಬಗ್ಗೆ ಚಿಕ್ಕದಾಗಿ ಬರೆದು ನಿಮ್ಮ ಮುಂದಿಡುತ್ತಿದ್ದೇವೆ. ಒಮ್ಮೆ ಗಮನ ಹರಿಸಿ.

Rajesh Duggumane | news18
Updated:May 20, 2019, 8:24 AM IST
Morning Digest: ಆರಂಭವಾಯ್ತ ಚುನಾವಣೋತ್ತರ ಸಮೀಕ್ಷೆ ಟಾಕ್​; ಇಂದು ಒದಲೇಬೇಕಾದ ಸುದ್ದಿಗಳು
ಸಾಂದರ್ಭಿಕ ಚಿತ್ರ
Rajesh Duggumane | news18
Updated: May 20, 2019, 8:24 AM IST
ಚುನಾವಣೋತ್ತರ ಸಮೀಕ್ಷೆಯ ಟಾಕ್​

ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ಎಲ್ಲ ಕಡೆಗಳಲ್ಲಿ ಮಾತು ಆರಂಭವಾಗಿದೆ. ಎಕ್ಸಿಟ್​ ಪೋಲ್​ ರಾಜ್ಯ ಹಾಗೂ ರಾಷ್ಟ್ರ ಬಿಜೆಪಿ ನಾಯಕರಿಗೆ ಸಿಹಿ ನೀಡಿದೆ. ಆದರೆ, ಇದು ರಾಜ್ಯದ ಮೈತ್ರಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಗ್ಗೆ ಸದ್ಯ ಟಾಕ್​ ಆರಂಭವಾಗಿದೆ. ಮೈತ್ರಿ ನಾಯಕರು ನಾವು ಇದನ್ನು ನಂಬುವುದಿಲ್ಲ ಎಂದು ಹೇಳಿದರೆ, ಬಿಜೆಪಿ ನಾಯಕರು ಸಂಭ್ರಮದಲ್ಲಿದ್ದಾರೆ.

ರಾಜ್ಯದಲ್ಲಿ ಯಾರೆಷ್ಟು ಗೆಲ್ಲಬಹುದು?

ಕರ್ನಾಟಕದಲ್ಲಿ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಬಿಜೆಪಿ ಬರೋಬ್ಬರಿ 15-25 ಸ್ಥಾನಗಳನ್ನ ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳುತ್ತಿವೆ. ನ್ಯೂಸ್18 ಮತ್ತು IPSOS ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ 21-23 ಸ್ಥಾನ ಸಿಗಬಹುದೆಂದು ನಂಬಲಾಗಿದೆ. ಎಬಿಪಿ ನೀಲ್ಸನ್ ಸಮೀಕ್ಷೆಯ ಪ್ರಕಾರ ಬಿಜೆಪಿಗೆ 15 ಮತ್ತು ಮೈತ್ರಿಪಕ್ಷಕ್ಕೆ 13 ಸ್ಥಾನ ಸಿಗುವ ನಿರೀಕ್ಷೆ ಇದೆ. ಐಎಎನ್​ಎಸ್ ಸುದ್ದಿ ಸಂಸ್ಥೆ ಮತ್ತು ಸಿವೋಟರ್ ಸಂಸ್ಥೆಗಳು ನಡೆಸಿದ ಸಮೀಕ್ಷೆಯ ಪ್ರಕಾರ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಲಿದ್ದಾರಂತೆ.

ನಾಗಪುರದಲ್ಲಿ ಬಿಜೆಪಿಗೆ ಕಂಟಕ:

ಹತ್ತಾರು ಕಾರಣಗಳಿಗಾಗಿ ಇಂದು ಇಡೀ ದೇಶದ ಗಮನ ಸೆಳೆಯುತ್ತಿರುವ ಪ್ರಮುಖ ಲೋಕಸಭಾ ಕ್ಷೇತ್ರಗಳ ಪೈಕಿ ಮಹಾರಾಷ್ಟ್ರದ ನಾಗಪುರ ಲೋಕಸಭಾ ಕ್ಷೇತ್ರವೂ ಒಂದು. ಬಿಜೆಪಿಯ ಸೈದ್ಧಾಂತಿಕ ಮುಖವಾಣಿ ಆರ್​ಎಸ್​ಎಸ್​ ಕೇಂದ್ರ ಕಚೇರಿ ಇರುವುದು ಇದೇ ನಾಗಪುರದಲ್ಲಿ. ಆರ್​ಎಸ್​ಎಸ್​ ತನ್ನ ಸಿದ್ಧಾಂತವನ್ನು ಇಡೀ ದೇಶದಾದ್ಯಂತ ಪ್ರಚುರಪಡಿಸುತ್ತಿರುವುದು ಇದೇ ನಾಗಪುರದಿಂದ. ಆದರೆ, ತನ್ನ ಕೇಂದ್ರ ಕಚೇರಿ ಇರುವ ಕ್ಷೇತ್ರದಲ್ಲೇ ಗೆಲುವು ಸಾಧಿಸಲು ಬಿಜೆಪಿ ಸರಿಸುಮಾರು 6 ದಶಕಗಳ ಕಾಲ ಕಾಯಬೇಕಾದದ್ದು ವಿಪರ್ಯಾಸ. ಈಗಲೂ ಇಲ್ಲಿ ಗೆಲುವು ಸಾಧಿಸುವುದು ಬಿಜೆಪಿಗೆ ಅಷ್ಟು ಸುಲಭದ ವಿಚಾರವಲ್ಲ ಎನ್ನಲಾಗಿದೆ.
Loading...

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರುವುದು ಖಚಿತ ಎನ್ನುತ್ತಿದೆ ನ್ಯೂಸ್​ 18-ಐಪಿಎಸ್​ಓಎಸ್​ ಸಮೀಕ್ಷೆ


ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್​ಡಿಎ ಮೈತ್ರಿಕೂಟ 336 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರಲಿದೆ ಎಂದು ನ್ಯೂಸ್​ 18-ಐಪಿಎಸ್​ಓಎಸ್​ ಚುನಾವಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ. ಪ್ರಮುಖ ವಿರೋಧ ಪಕ್ಷದವಾದ ಕಾಂಗ್ರೆಸ್​ ಕೇವಲ 82 ಸ್ಥಾನಗಳನ್ನಷ್ಟೆ ಗಳಿಸಲಿದೆ. ಕಾಂಗ್ರೆಸ್ ಪಾಲಿಗೆ ಕೇರಳ ಹಾಗೂ ಪಂಜಾಬ್​ ರಾಜ್ಯಗಳಿಂದ ಹೆಚ್ಚಿನ ಸ್ಥಾನ ಹರಿದುಬರಲಿದೆ ಎಂದು ಸಮೀಕ್ಷೆ ಸ್ಪಷ್ಟಪಡಿಸಿದೆ. 2014 ಚುನಾವಣೆಯಲ್ಲಿ ಕೇವಲ 44 ಸ್ಥಾನಗಳನ್ನು ಗಳಿಸುವ ಮೂಲಕ ಹೀನಾಯ ಸ್ಥಿತಿಗೆ ತಲುಪಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲೂ ಅಷ್ಟೇನೂ ಗಮನಾರ್ಹ ಸಾಧನೆ ಮಾಡುವ ಸಾಧ್ಯತೆ ಇಲ್ಲ ಎಂದು ತಿಳಿಸಲಾಗಿದೆ.

First published:May 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...