Gulbarga Lok Sabha Elections 2019 Exit Poll: ಮೋದಿ ಅಲೆಯಿಂದ ಜಾಧವ್​ಗೆ ಮತ ಚಲಾವಣೆ: ಆದರೂ ಮತ್ತೆ ಮಲ್ಲಿಕಾರ್ಜುನ್​ ಖರ್ಗೆಗೇ ಗೆಲುವು

Lok Sabha Elections 2019 Exit Poll: ಕೇಂದ್ರದ ನೀತಿಗಳ ಪ್ರಚಾರ, ಪುಲ್ವಾಮಾ ದಾಳಿ, ಮೋದಿ-ಷಾ ತಂತ್ರಗಳು, ಕೇಂದ್ರ ನಾಯಕರೇ ಖುದ್ದು ಕ್ಷೇತ್ರದ ಬಗ್ಗೆ ಆಸಕ್ತಿವಹಿಸಿರುವುದು ಜಾಧವ್​ಗೆ ಪ್ಲಸ್​ ಪಾಯಿಂಟ್​ ಆದರೂ 11ನೇ ಬಾರಿ ಖರ್ಗೆ ಪ್ರಯಾಸದ ಗೆಲುವುದು ಸುಳ್ಳಲ್ಲ ಎಂದಿದೆ ಚುನಾವಣಾ ಸಮೀಕ್ಷೆಗಳು. ಆದರೆ ಹಿಂದೆಂದಿಗಿಂತ ಕಡಿಮೆ ಮತಗಳ ಅಂತರದ ಗೆಲುವು ಖರ್ಗೆಯವರದ್ದಾಗಲಿದೆ

Seema.R
Updated:May 19, 2019, 8:37 PM IST
Gulbarga Lok Sabha Elections 2019 Exit Poll: ಮೋದಿ ಅಲೆಯಿಂದ ಜಾಧವ್​ಗೆ ಮತ ಚಲಾವಣೆ: ಆದರೂ ಮತ್ತೆ ಮಲ್ಲಿಕಾರ್ಜುನ್​ ಖರ್ಗೆಗೇ ಗೆಲುವು
ಉಮೇಶ್ ಜಾಧವ್- ಮಲ್ಲಿಕಾರ್ಜುನ ಖರ್ಗೆ
  • Share this:
ಸೋಲಿಲ್ಲದ ಸರದಾರನಾಗಿ ಲೋಕಸಭೆಯಲ್ಲಿ ಮೋದಿ ವಿರುದ್ಧ ಸದನದಲ್ಲಿ ಟೀಕಾ ಪ್ರಹಾರ ನಡೆಸಿದ ನಾಯಕ ಎಂದರೆ ಮಲ್ಲಿಕಾರ್ಜುನ ಖರ್ಗೆ. ಮೋದಿ ಎದುರು ನಿಂತು ಪ್ರಶ್ನಿಸುತ್ತಿದ್ದ ಖರ್ಗೆ ಬಿಜೆಪಿ ನಾಯಕರಿಗೆ ದುಸ್ವಪ್ನವಾಗಿ ಕಾಡಿದವರು. ಖರ್ಗೆಯವರನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದರೆ ಸಂಸತ್ತಿನಲ್ಲಿ ಕಾಂಗ್ರೆಸ್​ ಶಕ್ತಿ ಕುಗ್ಗಲಿದೆ ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿತ್ತು. ಇದಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಷಾ ಕೂಡ ಆಸಕ್ತಿ ತೋರಿದ್ದರು. ಅದಕ್ಕಾಗಿಯೇ ಲೋಕಸಭಾ ಚುನಾವಣೆಯ ಪ್ರಚಾರವನ್ನು ಪ್ರಧಾನಿ ಮೋದಿ ಆರಂಭಿಸಿದ್ದು ಕಲ್ಬುರ್ಗಿಯಿಂದ. ಮಲ್ಲಿಕಾರ್ಜುನ್​ ಖರ್ಗೆಗೆ ಕಠಿಣ ಪೈಪೋಟಿ ನೀಡುವ ಏಕೈಕ ಅಭ್ಯರ್ಥಿ ಉಮೇಶ್​ ಜಾಧವ್​ ಎಂಬುದನ್ನು ಅರಿತ ಬಿಜೆಪಿ, ಆಪರೇಷನ್​ ಮಾಡಿ ಜಾಧವ್​ರನ್ನು ಕಣಕ್ಕಿಳಿಸಿತ್ತು.

ಕಾಂಗ್ರೆಸ್​​ ನಾಯಕನನ್ನು ಪಕ್ಷಾಂತರ ಮಾಡಿ ತಂದು ನಿಲ್ಲಿಸುವ ಮೂಲಕ ಬಿಜೆಪಿ ಕರ್ನಾಟಕದ ಮೈತ್ರಿ ಸರ್ಕಾರಕ್ಕೂ ಕೂಡ ಶಾಕ್​ ನೀಡಿತು. ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರಾಗಿ, ಇನ್ನೇನು ಮುಂದಿನ ಅವಧಿಗೆ ಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಚಿಂಚೋಳಿ ಜನರಿಗೆ ಶಾಸಕ ಉಮೇಶ್​ ಜಾಧವ್​ ಶಾಕ್​ ನೀಡಿದರು. ಕಾಂಗ್ರೆಸ್​ ಬಿಟ್ಟು ಹೋಗುವುದಿಲ್ಲ ಎನ್ನುತ್ತಲೇ ತಮ್ಮ ಪಕ್ಷದ ಹಿರಿ ನಾಯಕನ ಎದುರೇ ಚುನಾವಣೆಯಲ್ಲಿ ತೊಡೆ ತಟ್ಟಿದರು. ಜಾಧವ್​ ಈ ರೀತಿ ಮಾಡಲು ಕಾರಣ ಅವರ ಮಗನ ಮೇಲಿನ ವ್ಯಾಮೋಹ ಎಂಬ ಮಾತು ಕೂಡ ಇದೆ.

ಉತ್ತರ ಕರ್ನಾಟಕದ ಮಹಾನ್​ ನಾಯಕ ಎಂದರೆ ಅದು ಖರ್ಗೆ. ಖರ್ಗೆ ಹೆಸರು ಸಾಧನೆ ಎದುರು ತನ್ನ ಗೆಲುವು ಪ್ರಯಾಸದಾಯಕ ಎಂಬುದು ಕೂಡ ಜಾಧವ್​ ಅರಿವಿದೆ. ಈ ಹಿನ್ನೆಲೆಯಲ್ಲಿ ಅಮಿತ್​ ಷಾ, ಮೋದಿ ತಮ್ಮ ಪ್ರಚಾರ ನಡೆಸಬೇಕು ಎಂದು ಷರತ್ತು ವಿಧಿಸಿದರು. ಮೋದಿ ಅಲೆಯಲ್ಲಿ, ರಾಜ್ಯ ಬಿಜೆಪಿ ನಾಯಕರ ಬೆಂಬಲದೊಂದಿಗೆ ಗೆಲುವಿನ ವಿಶ್ವಾಸ ಹೊಂದಿದ ಜಾಧವ್​ ತಮ್ಮ ರಾಜೀನಾಮೆ ಅಂಗೀಕಾರವಾಗುವ ಮುನ್ನವೇ ಆತ್ಮವಿಶ್ವಾಸದಿಂದ ಚುನಾವಣಾ ಪ್ರಚಾರದಲ್ಲಿ ಭಾಗಿಯಾದವರು. ಖರ್ಗೆ ಉತ್ತರ ಕರ್ನಾಟಕದ ನಾಯಕರಾಗಿ ತಮ್ಮನ್ನು ತಾವು ಬಿಂಬಿಸಿಕೊಂಡಿದ್ದಾರೆ, ಅದನ್ನು ಹೊರತು ಪಡಿಸಿ ಅವರ ಸಾಧನೆ ಶೂನ್ಯ ಎಂದು ಧೈರ್ಯವಾಗಿ ವಾಗ್ದಾಳಿ ನಡೆಸಿದರು.

ಕ್ಷೇತ್ರದಲ್ಲಿ ಜಾಧವ್ ಅಷ್ಟಾಗಿ ಪರಿಚಿತರಲ್ಲದಿದ್ದರೂ,  ಜಾತಿ ಲೆಕ್ಕಾಚಾರದಲ್ಲಿ ಜಾಧವ್​ಗೆ ಪೂರಕ ವಾತಾವರಣ ಇತ್ತು. ಬಂಜಾರ ಹಾಗೂ ಮೇಲ್ವರ್ಗದ ಜನ ನಮ್ಮ ಪರ ಇದ್ದಾರೆ ಎಂಬುದು ಬಿಜೆಪಿಗರ ನಂಬಿಕೆಯಾಗಿತ್ತು. ಅಲ್ಲದೇ ಮೋದಿ, ಷಾ ಚುನಾವಣೆ ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ನಂಬಿದ್ದರು.

ಆದರೆ, ಕೊನೆ ಕ್ಷಣದಲ್ಲಿ ಜಾಧವ್​ ವಿರುದ್ಧ ಹರಿಹಾಯ್ದ ಕಾಂಗ್ರೆಸ್​ ನಾಯಕರು, ಅವರು 60 ಕೋಟಿ ರೂ. ಹಣಕ್ಕೆ ಮಾರಾಟವಾಗಿದ್ದಾರೆ ಎಂದು ದೊಡ್ಡ ಆಪಾದನೆ ಮಾಡಿತು. ಈ ಹೇಳಿಕೆಗಳಿಂದ ಜಾಧವ್​ ಕೂಡ ಗೊಂದಲಕ್ಕೆ ಒಳಗಾಗಿದ್ದು ಸತ್ಯ. ಇದೇ ಕಾರಣದಿಂದಾಗಿ, ಅವರು ತಮ್ಮ ಮಗಳು ಫೇಲ್​ ಆಗಲು ಕಾರಣ ಕಾಂಗ್ರೆಸಿಗರು ಎಂದು ಬೊಟ್ಟು ಮಾಡಿದರು.

ಖರ್ಗೆ ಹಣಿಯಲು ಮೋದಿ ತಂತ್ರ: 

ಕಾಂಗ್ರೆಸ್​ ಬಲಿಷ್ಠ ನಾಯಕರಾಗಿರುವ ಖರ್ಗೆಯನ್ನು ಕೇವಲ ಹಿಂದುಳಿದ ನಾಯಕನಂತೆ ಬಿಂಬಿಸುವ ಕೆಲಸವನ್ನು ಕೂಡ ಬಿಜೆಪಿ ನಾಯಕರು ರೂಪಿಸಿದರು. ಅಲ್ಲದೆ ಖರ್ಗೆ ಅವರ ವಿರೋಧಿಗಳನ್ನು ಪಕ್ಷಕ್ಕೆ ಸೆಳೆಯುವ ಮೂಲಕ ಅವರ ಸೋಲಿಗೆ ಮಾಡಬೇಕಾದ ತಂತ್ರ ರೂಪಿಸಿದರು.ಕಾಂಗ್ರೆಸ್​ ನಾಯಕರಾಗಿದ್ದ ಬಾಬೂರಾವ ಚಿಂಚನಸೂರ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌, ಚಿತ್ತಾಪುರ ಮಾಜಿ ಶಾಸಕ ವಿಶ್ವನಾಥ ಪಾಟೀಲ್‌ ಹೆಬ್ಬಾಳ ಕೂಡ ಬಿಜೆಪಿಗೆ ಸೇರುವ ಮೂಲಕ ಖರ್ಗೆ ವಿರುದ್ಧ ರಣತಂತ್ರ ಹಣಿದಿದ್ದರು. 7 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರಿದ್ದರು, ಹಲವು ಅಸಮಾಧಾನಿತ ಕಾಂಗ್ರೆಸ್ಸಿಗರು ಖರ್ಗೆ ವಿರುದ್ಧ ನಿಂತಿರುವುದು ಸುಳ್ಳಲ್ಲ.

8 ವಿಧಾನಸಭಾ ಕ್ಷೇತ್ರ ಒಳಗೊಂಡ ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಮೂರರಲ್ಲಿ ಬಿಜೆಪಿ, ನಾಲ್ಕರಲ್ಲಿ ಕಾಂಗ್ರೆಸ್​ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್​ ಅಧಿಕಾರ ಹೊಂದಿದೆ.

55 ವರ್ಷಗಳ ಕಾಲ ರಾಜಕೀಯದಲ್ಲಿರುವ ಖರ್ಗೆ ಇದುವರೆಗೂ ಸೋಲಿನ ಮುಖ ಕಾಣದವರು. ಸತತ 10 ಬಾರಿ ಲೋಕಸಭೆ ಗೆದ್ದಿದ್ದು, 2 ಬಾರಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ದಲಿತ ನಾಯಕ ಎಂಬ ಹೆಗ್ಗಳಿಕೆಹೊಂದಿರುವ ಅವರಿಗೆ ಗುಲ್ಬಾರ್ಗದ ಜನರು ಸೋಲಿನ ರುಚಿಯನ್ನೆ ತೋರಿಸಿಲ್ಲ.

ಕ್ಷೇತ್ರಗಳ ಬಲಾಬಲ:

ಕ್ಷೇತ್ರದ ಬಲಾಬಲಗಳ ಹಿನ್ನೆಲೆ ಈ ಬಾರಿ ಜಾಧವ್​ ಖರ್ಗೆಗೆ ಪ್ರಯಾಸದ ಗೆಲುವು ತಂದುಕೊಡುವುದು ಸುಳ್ಳಲ್ಲ. ಬಂಜಾರ, ಲಂಬಾಣಿ, ಲಿಂಗಾಯತ ಮತಗಳು ಜಾಧವ್​ ಕೈ ಹಿಡಿದರೆ, ಮುಸ್ಲಿಂ ಮತ್ತು ದಲಿತ ಮತಗಳು ಕಾಂಗ್ರೆಸ್​ ಕೈ ಹಿಡಿಯಲಿದೆ. ಕುರುಬ ಹಾಗೂ ಕಬಳಿಗ ಮತಗಳಲ್ಲಿ ಶೇ 50 ರಷ್ಟು ಮತ ಜಾಧವ್​ಪರ ಮತಚಲಾವಣೆ ಆಗಿರುವ ಸಾಧ್ಯತೆಯಿದೆ.

ಗುಲ್ಬರ್ಗಾ ಉತ್ತರದಲ್ಲಿ ಕಾಂಗ್ರೆಸ್​ ಶಾಸಕಿ ಇದ್ದು, ಇಲ್ಲಿ ಕಾಂಗ್ರೆಸ್​ಗೆ ಲೀಡ್​ ಬರಲಿದೆ. ಇನ್ನು ಖರ್ಗೆ ಮಗನ ಕ್ಷೇತ್ರ ಚಿತ್ತಾಪುರದಲ್ಲಿ ಕೂಡ ಕಾಂಗ್ರೆಸ್​ಗೆ ಅಧಿಕ ಸಂಖ್ಯೆ ಮತ ಪಡೆಯಲಿದೆ . ಮಾಲೀಕಯ್ಯ ಗುತ್ತೇದಾರ್​ ಖರ್ಗೆ ವಿರುದ್ಧ ನಿಂತಿರುವ ಹಿನ್ನೆಲೆ ಅಫ್ಜಲ್​ಪುರ, ಜೇವರ್ಗಿಯಲ್ಲಿ ಬಿಜೆಪಿಗೆ ಹೆಚ್ಚು ಮತ ಬರಲಿದೆ. ಇನ್ನು ಗುಲ್ಬರ್ಗಾ ದಕ್ಷಿಣ, ಗ್ರಾಮೀಣ, ಗುರುಮಿಠ್ಠಕಲ್​ನಲ್ಲಿ ಸಮಾನವಾಗಿ ಶೇ50:50ರ ಪ್ರಮಾಣದಲ್ಲಿ ಬಿಜೆಪಿ ಕಾಂಗ್ರೆಸ್​ಗೆ ಮತಹಂಚಿಕೆಯಾಗಿರುವ ಸಾಧ್ಯತೆ ಇದೆ.

ಮೋದಿಗಾಗಿ ಮತ:

ದೇಶದಲ್ಲಿರುವ ಮೋದಿ ಅಲೆಯನ್ನು ನೋಡಿ ಕ್ಷೇತ್ರದ ಜನರು ಬಿಜೆಪಿಗೆ ಮತ ಹಾಕಿದ್ದಾರೆ ಹೊರತು ಜಾಧವ್​ಗಾಗಿ ಇಲ್ಲಿ ಮತಚಲಾಯಿಸಿದವರು ಕಡಿಮೆ ಎಂಬ ಮಾತು ಕೇಳಿ ಬಂದಿದೆ. ಕೇಂದ್ರದ ನೀತಿಗಳ ಪ್ರಚಾರ, ಪುಲ್ವಾಮಾ ದಾಳಿ, ಮೋದಿ-ಷಾ ತಂತ್ರಗಳು, ಕೇಂದ್ರ ನಾಯಕರೇ ಖುದ್ದು ಕ್ಷೇತ್ರದ ಬಗ್ಗೆ ಆಸಕ್ತಿವಹಿಸಿರುವುದು ಜಾಧವ್​ಗೆ ಪ್ಲಸ್​ ಪಾಯಿಂಟ್​ ಆದರೂ 11ನೇ ಬಾರಿ ಖರ್ಗೆ ಪ್ರಯಾಸದ ಗೆಲುವುದು ಸುಳ್ಳಲ್ಲ ಎಂದಿದೆ ಚುನಾವಣಾ ಸಮೀಕ್ಷೆಗಳು. ಆದರೆ ಹಿಂದೆಂದಿಗಿಂತ ಕಡಿಮೆ ಮತಗಳ ಅಂತರದಲ್ಲಿ ಪ್ರಯಾಸದ ಗೆಲುವು ಖರ್ಗೆಯವರದ್ದಾಗಲಿದೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'

 
First published:May 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading