Yadagiri: ಯಾದಗಿರಿಯಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಫಿಯಾ, ಓರ್ವ ಅರೆಸ್ಟ್

ಆರೋಪಿಯು 50 ರಿಂದ 500 ರೂಪಾಯಿವರೆಗೆ ಚಾಕೊಲೇಟ್ ಮಾರಾಟ ಮಾಡುತ್ತಿದ್ದನು. ನಿರ್ದಿಷ್ಟ ಗ್ರಾಹಕರಿಗೆ ಮಾತ್ರ ಗಾಂಜಾ ಮಿಶ್ರಿತ ಚಾಕೊಲೇಟ್ ಮಾಡುತ್ತಿದ್ದನು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  ‌

ವಶಕ್ಕೆ ಪಡೆದ ಗಾಂಜಾ ಮಿಶ್ರಿತ ಚಾಕೊಲೇಟ್

ವಶಕ್ಕೆ ಪಡೆದ ಗಾಂಜಾ ಮಿಶ್ರಿತ ಚಾಕೊಲೇಟ್

  • Share this:
ಯಾದಗಿರಿಯಲ್ಲಿ ಗಾಂಜಾ ಮಾರಾಟ ಮಾಫಿಯಾದ (Ganja Selling Mafia) ಜೊತೆ ಗಾಂಜಾ ಮಿಶ್ರಿತ ಚಾಕೊಲೇಟ್ ಮಾಫಿಯಾ (Ganja Mixed Chocolates) ಎಗ್ಗಿಲ್ಲದೇ ಸಾಗಿದೆ. ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಕಡೆ ಅಬಕಾರಿ ಅಧಿಕಾರಿಗಳು (Excise Officers) ದಾಳಿ ನಡೆಸಿ ಗಾಂಜಾ ಮಾರಾಟಗಾರರಿಗೆ ಅಬಕಾರಿ ಅಧಿಕಾರಿಗಳು ಜೈಲಿಗಟ್ಟಿದ್ದಾರೆ. ಆದರೆ, ಈಗ ಗಾಂಜಾ ಮಾರಾಟ ಮಾಡಿದರೆ ಪೊಲೀಸರ (Police) ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಳ್ಳುತ್ತೇವೆಂದು ಅಕ್ರಮ ದಂಧೆಕೋರರು ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಅಕ್ರಮ ದಂಧೆಗೆ ಮುಂದಾಗಿದ್ದಾರೆ. ಅಬಕಾರಿ ಅಧಿಕಾರಿಗಳು ಎರಡನೇ ಬಾರಿ ಮತ್ತೊಂದೆಡೆ ದಾಳಿ ನಡೆಸಿ ಗಾಂಜಾ ಮಿಶ್ರಿತ ಚಾಕೊಲೇಟ್ ಜಪ್ತಿ ಮಾಡಿದ್ದಾರೆ.

ಮಧ್ಯ ಪ್ರದೇಶದಿಂದ ಚಾಕೊಲೇಟ್ ಖರೀದಿ

ಮಧ್ಯ ಪ್ರದೇಶದಿಂದ ಗಾಂಜಾ ಮಿಶ್ರಿತ ಚಾಕೊಲೇಟ್ ಖರೀದಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಅಬಕಾರಿ ಅಧಿಕಾರಿಗಳು ಪತ್ತೆ ಹಚ್ಚಿ ಆರೋಪಿಯನ್ನು ಜೈಲಿಗಟ್ಟಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದೆ. ಸುರಪುರ ಪಟ್ಟಣದ ಜಲಾಲ್ ಮೊಹಲ್ಲಾ ಬಡಾವಣೆಯಲ್ಲಿ  ಮಧ್ಯ ಪ್ರದೇಶದ ಮೂಲದ ಕನ್ಹಯ್ಯಲಾಲ್ ಟವಾಣಿ ಎಂಬ ಖದೀಮನು ಅಂಗಡಿಯಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದನು.

Excise Officers seized 46 kg ganja mixed chocolates in surapura yadagiri nmpg mrq
ಅಬಕಾರಿ ಅಧಿಕಾರಿಗಳ ತಂಡ ಮತ್ತು ಆರೋಪಿ


ಇದನ್ನೂ ಓದಿ:  Farmers Arrest: ನಿಗದಿತ ಸ್ಥಳದಲ್ಲಿ ಪ್ರತಿಭಟನೆ ಮಾಡದೇ ಇರೋದೇ ಅಪರಾಧವಾಯ್ತು, 72 ರೈತರನ್ನು ಬಂಧಿಸಿದ ಪೊಲೀಸರು!

ಮಧ್ಯ ಪ್ರದೇಶದಿಂದ ಚಾಕೊಲೇಟ್ ಖರೀದಿಸಿ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದನು. ಮಸ್ತನಾ ಮುನಕ್ಕಾ ಮುದ್ರಿತ ಚಾಕೊಲೇಟ್​ಗಳ ಮಾರಾಟ ಮಾಡಿ  ಹಣ ಸಂಪಾದನೆ ಮಾಡುತ್ತಿದ್ದನು. ನಿರ್ದಿಷ್ಟ ಗ್ರಾಹಕರಿಗೆ ಮಾತ್ರ ಚಾಕೊಲೇಟ್ ಮಾರಾಟ ಮಾಡುತ್ತಿದ್ದನು.

ಮದ್ಯ ಸೇವನೆ ಮಾಡದವರಿಂದ ಖರೀದಿ

ಮದ್ಯ ವ್ಯಸನಿಗಳು ಕುಡಿದು ನಶೆ ಲೋಕದಲ್ಲಿ ಜಾರುತ್ತಾರೆ. ಕೆಲ ಜನ ನಶೆ ಆದರೆ ಮನೆಯಲ್ಲಿ ಗೊತ್ತಾಗುತ್ತೆಂದು ಚಾಕೊಲೇಟ್ ಮೊರೆ ಹೋಗಿದ್ದಾರೆ. ಚಾಕೊಲೇಟ್ ಸೇವನೆ ಮಾಡಿ ರಾತ್ರಿ ನಶೆಯಲ್ಲಿ ತೇಲಾಡಲು ನಿರ್ದಿಷ್ಟ ಗ್ರಾಹಕರು ಗಾಂಜಾ ವ್ಯಸನಿಗಳಾಗಿದ್ದರು ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ಅಬಕಾರಿ ಡಿವೈಎಸ್​ಪಿ ಮಲ್ಲಿಕಾರ್ಜುನ್ ರೆಡ್ಡಿ, ಅಬಕಾರಿ ನಿರೀಕ್ಷಕ ಕೇದರನಾಥ್ ನೇತೃತ್ವದಲ್ಲಿ  ಅಬಕಾರಿ ಅಧಿಕಾರಿಗಳ ತಂಡ ದಾಳಿ ನಡೆಸಿ 46 ಕೆಜಿಯ,7,620 ಚಾಕೊಲೇಟ್ ಜಪ್ತಿ ಮಾಡಿ, ಆರೋಪಿ ಕನ್ಹಯ್ಯಲಾಲ್ ಎಂಬಾತನನ್ನು ಬಂಧಿಸಲಾಗಿದೆ.

50 ರಿಂದ 500 ರೂಪಾಯಿವರೆಗೆ ಮಾರಾಟ

ಆರೋಪಿಯು 50 ರಿಂದ 500 ರೂಪಾಯಿವರೆಗೆ ಚಾಕೊಲೇಟ್ ಮಾರಾಟ ಮಾಡುತ್ತಿದ್ದನು. ನಿರ್ದಿಷ್ಟ ಗ್ರಾಹಕರಿಗೆ ಮಾತ್ರ ಗಾಂಜಾ ಮಿಶ್ರಿತ ಚಾಕೊಲೇಟ್ ಮಾಡುತ್ತಿದ್ದನು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  ‌

ಈ ಹಿಂದೆಯೂ ದಾಳಿ ನಡೆದಿತ್ತು

ಇದೇ ತಿಂಗಳು ಅಬಕಾರಿ ಅಧಿಕಾರಿಗಳು ಶಹಾಪುರ ಪಟ್ಟಣದ ಎರಡು ಪಾನ್ ಶಾಪ್ ಮೇಲೆ ದಾಳಿ ನಡೆಸಿ ಗಾಂಜಾ ಮಿಶ್ರಿತ ಚಾಕೊಲೇಟ್ ಜಪ್ತಿ ಮಾಡಿ ಆರೋಪಿಗಳಿಬ್ಬರನ್ನು ಬಂಧಿಸಿದ್ದರು. ಈಗ ಮತ್ತೆ ಸುರಪುರನಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ಗಮ್ಮತ್ತಿನ ಚಾಕೊಲೇಟ್ ಜಪ್ತಿ ಮಾಡಿದ್ದಾರೆ .

Excise Officers seized 46 kg ganja mixed chocolates in surapura yadagiri nmpg mrq
ವಶಕ್ಕೆ ಪಡೆದ ಗಾಂಜಾ ಮಿಶ್ರಿತ ಚಾಕೊಲೇಟ್


Vijayapura: ಚಿಕನ್ ಲೆಗ್​ ಪೀಸ್​​ನಲ್ಲಿ ಗಾಂಜಾ ಇರಿಸಿ ಜೈಲಿನೊಳಗೆ ಸಾಗಿಸ್ತಿದ್ದ ವ್ಯಕ್ತಿ ಅರೆಸ್ಟ್

ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದೊಳಗೆ ಗಾಂಜಾ ಸಾಗಿಸಲು ಪ್ರಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಜ್ವಲ್ ಲಕ್ಷ್ಮಣ್ ಮಬರುಖಾನೆ ಬಂಧಿತ ಆರೋಪಿ. ಬಂಧಿತ ಪ್ರಜ್ವಲ್ ಜೈಲಿನಲ್ಲಿರೋ ಕೈದಿಗಳಿಗೆ ಗಾಂಜಾ ಪೂರೈಕೆ ಮಾಡಲು ಮುಂದಾಗಿದ್ದನು. ಕೈದಿಯೊಬ್ಬರಿಗೆ ಆಹಾರ ನೀಡುತ್ತೇನೆ ಎಂದು ಹೇಳಿ ಪ್ರಜ್ವಲ್ ಬಂದಿದ್ದನು.

ಇದನ್ನೂಓದಿ: Praveen Nattar: ಪ್ರವೀಣ್ ನೆಟ್ಟಾರ್‌ ಹತ್ಯೆ ಕೇಸ್ ಎನ್‌ಐಎಗೆ ಹಸ್ತಾಂತರ, ಕೊಲೆ ಹಿಂದಿದ್ದವರ ಎದೆಯಲ್ಲಿ ಶುರುವಾಗಿದೆ ನಡುಕ!

ಈ ವೇಳೆ ಪೊಲೀಸರು ಪ್ರಜ್ವಲ್ ತಂದಿರುವ ಆಹಾರ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಚಿಕನ್ ಲೆಗ್ ಪೀಸ್​ನಲ್ಲಿ ದಾರದ ಎಳೆ ಕಾಣಿಸಿಕೊಂಡಿದೆ. ಅನುಮಾನದ ಮೇಲೆ ಚಿಕನ್ ಲೆಗ್​ಪೀಸ್​ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದೆ
Published by:Mahmadrafik K
First published: