ಸಾರ್ವಜನಿಕರ ಗಮನಕ್ಕೆ!; ಮಿತಿಮೀರಿದ ಸೈಬರ್ ಕ್ರೈಂ ಹಾವಳಿ, 8 ತಿಂಗಳಲ್ಲಿ 7,700 ಪ್ರಕರಣ; ಅಪರಿಚಿತ ಕರೆಗಳ ಬಗ್ಗೆ ಇರಲಿ ಎಚ್ಚರ

ಆಫ್ರಿಕನ್ ಹಾಗೂ ನೈಜೀರಿಯನ್ ಪ್ರಜೆಗಳಿಂದಲೇ ಇಂತಹ ವಂಚನೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸೈಬರ್ ವಂಚನೆಯ ಪ್ರಕರಣದ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಯೂ ಇದೆ. ಹೀಗಾಗಿ ಪೊಲೀಸ್ ಇಲಾಖೆ ಇನ್ನಾದರೂ ಇಂತವರ ಹೆಡೆಮುರಿ ಕಟ್ಟಬೇಕಿದೆ. ಅಲ್ಲದೆ, ಸಾರ್ವಜನಿಕರೂ ಸಹ ಜಾಗ್ರತೆ ವಹಿಸಬೇಕಿದೆ.

MAshok Kumar | news18-kannada
Updated:September 13, 2019, 8:44 AM IST
ಸಾರ್ವಜನಿಕರ ಗಮನಕ್ಕೆ!; ಮಿತಿಮೀರಿದ ಸೈಬರ್ ಕ್ರೈಂ ಹಾವಳಿ, 8 ತಿಂಗಳಲ್ಲಿ 7,700 ಪ್ರಕರಣ; ಅಪರಿಚಿತ ಕರೆಗಳ ಬಗ್ಗೆ ಇರಲಿ ಎಚ್ಚರ
ಅಲ್ಲಿ ಸಿಕ್ಕ ನಂಬರ್ಗೆ ಕರೆ ಮಾಡಿ ನಡೆದ ಘಟನೆ ಬಗ್ಗೆ ಹೇಳಿದ್ದಾರೆ. ದೂರವಾಣಿ ಕರೆಯಲ್ಲಿ ಮಾತನಾಡಿ ವ್ಯಕ್ತಿ ಡೆಬಿಟ್ ಕಾರ್ಡ್ ಮಾಹಿತಿ ಕೇಳಿದ್ದಾನೆ.
  • Share this:
ಬೆಂಗಳೂರು (ಸೆಪ್ಟೆಂಬರ್.13); ರಾಜಧಾನಿಯಲ್ಲಿ ಸೈಬರ್ ಕ್ರೈಂ ಹಾವಳಿ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಪೊಲೀಸರು ಎಷ್ಟೇ ಕಠಿಣ ಕಾನೂನು ಕ್ರಮಗಳನ್ನು ಜಾರಿಗೆ ತಂದರೂ ಸಹ ಸೈಬರ್ ಅಪರಾಧಗಳನ್ನು ತಡೆಗಟ್ಟುವುದು ಸಾಧ್ಯವಾಗುತ್ತಿಲ್ಲ. ಇಲಾಖೆಯೇ ನೀಡುವ ಮಾಹಿತಿಯ ಪ್ರಕಾರ ಕಳೆದ 8 ತಿಂಗಳಲ್ಲಿ ಬರೋಬ್ಬರಿ 7,700 ಸೈಬರ್ ವಂಚನೆ ಪ್ರಕರಣಗಳು ಈವರೆಗೆ ದಾಖಲಾಗಿವೆ. ಪ್ರತಿದಿನ ಸರಾಸರಿಯಾಗಿ 100 ಪ್ರಕರಣಗಳು ದಾಖಲಾಗುತ್ತಲೇ ಇವೆ.

ಸೈಬರ್ ಕಳ್ಳತನದ ಬಗ್ಗೆ ಜಾಗರೂಕರಾಗಿರುವಂತೆ, ಅಪರಿಚಿತರಿಗೆ ನಿಮ್ಮ ಬ್ಯಾಂಕ್ ಅಕೌಂಟ್ ಮಾಹಿತಿ ಹಾಗೂ ಪಿನ್​ಕೋಡ್ ನೀಡದಂತೆ ಪೊಲೀಸರು ಜನರಲ್ಲಿ ಸಾಕಷ್ಟು ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಲೇ ಇದ್ದಾರೆ. ಆದಾಗ್ಯೂ, ನಗರದಲ್ಲಿ ಮೋಸ ಹೋಗುತ್ತಿರುವ ಜನರ ಸಂಖ್ಯೆಯೇನು ಕಡಿಮೆಯಾಗುತ್ತಿಲ್ಲ.

ನೈಜೀರಿಯನ್ ಮಾದರಿಯಲ್ಲಿ ನಿಮ್ಮ ಖಾತೆಗೂ ಕನ್ನ ಹಾಕ್ತಾರೆ ಹುಷಾರ್!

ಬ್ಯಾಂಕ್ ವಹಿವಾಟುಗಳು ಆನ್​ಲೈನ್ ಆದಂದಿನಿಂದ ನೈಜೀರಿಯನ್ ಮಾದರಿಯಲ್ಲಿ ಮೋಸ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ದೊಡ್ಡ ಜಾಲವೇ ನಗರದಲ್ಲಿ ಸೃಷ್ಟಿಯಾಗಿದೆ.

ಬ್ಯಾಂಕ್ ಅಕೌಂಟ್ ಕೆವೈಸಿ ಅಪ್ಡೇಟ್ ಮಾಡಬೇಕು ಅಥವಾ ನಿಮಗೆ ಕೋಟ್ಯಾಂತರ ಬಹುಮಾನ ಬಂದಿದೆ ಎಂದು ಕರೆ ಮಾಡಿ ಆಸೆ ತೋರಿಸಸುವ ಖದೀಮರು ಎಟಿಎಂ ಕಾರ್ಡ್ ವಿವರ ಕದ್ದು ಓಟಿಪಿ ಪಡೆದು ದೋಖಾ ಮಾಡುತ್ತಿದ್ದಾರೆ.

ಆನ್​ಲೈನ್ ಶಾಪಿಂಗ್​ನಲ್ಲಿ ಸ್ಕಿಪಿಂಗ್ ಮಿಷನ್ ಬಳಸಿ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಇದಲ್ಲದೆ, ಬ್ಯುಸಿನೆಸ್ ಹೆಸರಿನಲ್ಲಿ, ಹರ್ಬಲ್ ಪ್ರಾಡಕ್ಟ್ ಹಾಗೂ ಪತಂಜಲಿಯ ನಕಲಿ ವೆಬ್​ಸೈಟ್​ ಮೂಲಕವೂ ವಂಚನೆ ಮಾಡುವ ಬಹುದೊಡ್ಡ ಜಾಲವೇ ನಗರದಲ್ಲಿ ಸೃಷ್ಟಿಯಾಗಿದೆ.

ಆಫ್ರಿಕನ್ ಹಾಗೂ ನೈಜೀರಿಯನ್ ಪ್ರಜೆಗಳಿಂದಲೇ ಇಂತಹ ವಂಚನೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಸೈಬರ್ ವಂಚನೆಯ ಪ್ರಕರಣದ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆಯೂ ಇದೆ. ಹೀಗಾಗಿ ಪೊಲೀಸ್ ಇಲಾಖೆ ಇನ್ನಾದರೂ ಇಂತವರ ಹೆಡೆಮುರಿ ಕಟ್ಟಬೇಕಿದೆ. ಅಲ್ಲದೆ, ಸಾರ್ವಜನಿಕರೂ ಸಹ ಜಾಗ್ರತೆ ವಹಿಸಬೇಕಿದೆ.ಇದನ್ನೂ ಓದಿ : ಡಿಕೆಶಿ ಇಡಿ ಕಸ್ಟಡಿ ಅಂತ್ಯ, ಕೋರ್ಟ್​ಗೆ ಹಾಜರ್; ಜಾಮೀನು ಅಥವಾ ಜೈಲು?; ಇಂದು ನಿರ್ಧಾರವಾಗಲಿದೆ ಮಾಜಿ ಸಚಿವರ ಭವಿಷ್ಯ!

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading