ಬೆಳಗಾವಿ(ಮೇ,26)- ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಟ್ಟು ತುಂಬಾ ಜನ ನಮ್ಮ ಜೊತೆಗೆ ಬರ್ತಿದ್ದಾರೆ. ಅವರನ್ನು ಕಾದುಕೊಂಡರೇ ಒಳ್ಳೆಯದು ಎಂದು ಡಿಕೆಶಿಗೆ ಬಿಜೆಪಿ (BJP) ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟಾಂಗ್ ಕೊಟ್ಟರು. ಬಿಜೆಪಿಗೆ ಅಭ್ಯರ್ಥಿ ಸಿಗದ ಹಿನ್ನೆಲೆ ಬಸವರಾಜ ಹೊರಟ್ಟಿರನ್ನ ಬಿಜೆಪಿಗೆ ಸೆಳೆದಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivakumar) ಅರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಳೀನ್ ಕುಮಾರ್ ಕಟೀಲ್ (Nalin Kumar Katil), ಡಿ.ಕೆ.ಶಿವಕುಮಾರ್ ಬಿಟ್ಟು ತುಂಬಾ ಜನ ನಮ್ಮ ಜೊತೆಗೆ ಬರ್ತಿದ್ದಾರೆ. ಅವರನ್ನು ಕಾದುಕೊಂಡರೇ ಒಳ್ಳೆಯದು ಎಂದು ಹೇಳಿದರು. ಈ ವೇಳೆ ಎಷ್ಟು ಜನ ಬರ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಕಾದು ನೋಡಿ ಎಂದು ನಳಿನ್‌ಕುಮಾರ್ ಕಟೀಲ್ ತಿಳಿಸಿದರು.
ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ. ಈಗಾಗಲೇ ನಮ್ಮ ಪೂರ್ಣ ತಯಾರಿಯನ್ನ ಮಾಡಿಕೊಂಡಿದ್ದೇವೆ. ಮೈಸೂರಲ್ಲಿ ಮೊನ್ನೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆ
ಹನುಮಂತ ನಿರಾಣಿ, ಅರುಣ್ ಶಹಾಪುರ, ಬಸವರಾಜ ಹೊರಟ್ಟಿ ಗೆಲ್ಲಲಿದ್ದಾರೆ. ಬಸವರಾಜ ಹೊರಟ್ಟಿ ಹಿರಿಯರು, ವಿಧಾನ ಪರಿಷತ್ ನಲ್ಲಿ ಅನುಭವ ಇದ್ದಂತವರು. ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆ ಆಗಿದ್ದು ನಮ್ಮ ಪಕ್ಷದ ಚಿಹ್ನೆಯಡಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದರು.
ಕಾನೂನಿನ ಪಾಲನೆ ಕರ್ತ ವ್ಯ
ಮಂಗಳೂರಿನಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಳೀನ್, ಈಗಾಗಲೇ ಕಾನೂನಾತ್ಮಕವಾಗಿರೋ, ಸಾಂವಿಧಾನಿಕ ವಿಚಾರವಾಗಿದೆ. ನ್ಯಾಯಾಲಯ ಈಗಾಗಲೇ ತೀರ್ಪು ಕೊಟ್ಟಿದೆ.ಆ ತೀರ್ಪಿನ ಪಾಲನೆ ಮಾಡೋದು ಎಲ್ಲರ ಕರ್ತವ್ಯವಾಗಿದೆ ಎಂದರು.
ಇದನ್ನೂ ಓದಿ: DC Jumps to Reservoir: ಅಧಿಕಾರಿಗಳನ್ನು ಪರೀಕ್ಷಿಸಲು ಸ್ವತಃ ಜಲಾಶಯಕ್ಕೆ ಧುಮುಕಿದ ಜಿಲ್ಲಾಧಿಕಾರಿ
ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷರ ವಿರುದ್ಧ ಸಾಹಿತಿಗಳ ಪತ್ರ ಸಮರ ಹಾಗೂ ಡಿಕೆಶಿ ಹೋರಾಟ ಮಾಡ್ತೀವಿ ಎಂಬ ಹೇಳಿಕೆ ವಿಚಾರಕ್ಕೆ ಬಹಳ ಒಳ್ಳೆಯದು, ಸ್ವಲ್ಪ ದಿವಸ ಹೋರಾಟ ಮಾರ್ಗದಲ್ಲೇ ಇರೋದು ಒಳ್ಳೆಯದು.ಇತಿಹಾಸ ತಿಳಿಸುವಂತಹ ಕೆಲಸ ಕಾರ್ಯ ಆಗಬೇಕು.
ಪರಿಷ್ಕರಣಾ ಸಂದರ್ಭದಲ್ಲಿ ಚರ್ಚೆಗಳು ಸಹಜ
ಇತಿಹಾಸ ತಿಳಿದ್ರೆ ಇತಿಹಾಸ ನಿರ್ಮಾಣ ಮಾಡಬಲ್ಲದು ಅಂತಾ ಇದೆ. ಇತಿಹಾಸ ತಿಳಿಸುವ ಕೆಲಸ ಕಾರ್ಯ ಸಮಿತಿಗಳು ಆಗಾಗ ಮಾಡುತ್ತವೆ. ಹಿಂದೆಯಿಂದ ಪರಿಷ್ಕರಣೆಗಳು ನಡೆಯುತ್ತಾ ಬಂದಿವೆ. ಪರಿಷ್ಕರಣಾ ಸಂದರ್ಭದಲ್ಲಿ ಚರ್ಚೆಗಳು ಸಹಜ ಎಂದು ಹೇಳಿದರು.
ಕಾರ್ಯಕರ್ತರ ಸಭೆ
ಬಳಿಕ ವಾಯುವ್ಯ ಪದವೀಧರ, ಶಿಕ್ಷಕರ ಮತಕ್ಷೇತ್ರದ ಚುನಾವಣೆ ಹಿನ್ನೆಲೆ ಕಾರ್ಯಕರ್ತ ಸಭೆ ಮಾಡಲಾಯಿತು. ಸಭೆಯಲ್ಲಿ ಅಭ್ಯರ್ಥಿಗಳಾದ ಹನುಮಂತ ನಿರಾಣಿ, ಅರುಣ ಶಹಾಪುರ ಭಾಗವಹಿಸಿದ್ದರು. ಬೆಳಗಾವಿ ಸದಾಶಿವ ನಗರದ ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶ ನಡೆಯಿತು.
ಇದನ್ನೂ ಓದಿ: Text Book Row: ಪಠ್ಯಪುಸ್ತಕ ಪರಿಷ್ಕರಣೆ ವಿರೋಧ; ಮೇ 31ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರವೇ ಸಜ್ಜು
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಮಾವೇಶದಲ್ಲಿ ನಾಮಪತ್ರ ಸಲ್ಲಿಕೆ ಗೆ ಬಂದ ಸಚಿವ ಉಮೇಶ ಕತ್ತಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಮಾವೇಶಕ್ಕೆ ಗೈರು ಹಾಜರಾಗಿದ್ದರು. ಸಮಾವೇಶದಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಲಿ,ಮಾಜಿ ಶಾಸಕರು, ಸಂಸದರು ಭಾಗಿಯಾಗಿದ್ದರು. ಈ ಚುನಾವಣೆಯನ್ನು ಕಾಂಗ್ರೆಸ್, ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ