Student Protest: ಮಹಾರಾಣಿ ಕ್ಲಸ್ಟರ್ ವಿವಿಯಲ್ಲಿ ಪರೀಕ್ಷಾ ಶುಲ್ಕ ಹೆಚ್ಚಳ, ಪ್ರತಿಭಟನೆ ಮಾಡಿದ್ರೆ ಮಾರ್ಕ್ಸ್ ಕಟ್!

ಇಂದು ಒತ್ತಡ ಪೂರ್ವಕವಾಗಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವಂತೆ ಮಾಡಿದ್ದಾರೆ. ಇನ್ನು ಪ್ರತಿಭಟನೆ ಭಾಗಿಯಯಾಗೋ ವಿದ್ಯಾರ್ಥಿಗಳ ಇಂಟರ್ನಲ್ ಮಾರ್ಕ್ಸ್​​ ಅನ್ನು ಕಡಿತಗೊಳಿಸೋದಾಗಿ ಬೆದರಿಕೆ ಹಾಕಿದ್ದಾರೆ.

ಮಹಾರಾಣಿ ಕಾಲೇಜು

ಮಹಾರಾಣಿ ಕಾಲೇಜು

  • Share this:
ಬೆಂಗಳೂರು (ಜು.15): ಪರೀಕ್ಷಾ ಶುಲ್ಕ ಹೆಚ್ಚಳದಿಂದ (Examination Fee Increase) ಬೇಸತ್ತಾ ವಿದ್ಯಾರ್ಥಿಗಳು ಕಳೆದ 2 ದಿನಗಳಿಂದ  ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯವನ್ನು ಬಂದ್ ಮಾಡಲು ಮುಂದಾಗಿದ್ರು. ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದ್ದಕ್ಕೆ  ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದು, ಇಂದು ತರಗತಿ ಬಹಿಷ್ಕರಿಸಿ ವಿದ್ಯಾರ್ಥಿನಿಯರು ಬಂದ್​ಗೆ ಮುಂದಾಗಿದ್ದರು . NSUI ವಿದ್ಯಾರ್ಥಿ ಸಂಘಟನೆಯಿಂದ ವಿದ್ಯಾರ್ಥಿನಿಂದ ಬಂದ್ ಗೆ ಕರೆ ನೀಡಲಾಗಿತ್ತು. ಆದ್ರೆ ಕಾಲೇಜು ಆಡಳಿತ ಮಂಡಳಿ ಅವರು ವಿದ್ಯಾರ್ಥಿಗಳನ್ನು ಬೆದರಿಸಿ, ತರಗತಿಗೆ ಹಾಜರಾಗುವಂತೆ ಒತ್ತಡ ಹೇರಿದ್ದಾರೆ. ಒತ್ತಡ ಪೂರ್ವಕವಾಗಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವಂತೆ ಮಾಡಿದ್ದಾರೆ. ಇನ್ನು ಪ್ರತಿಭಟನೆ ಭಾಗಿಯಯಾಗೋ ವಿದ್ಯಾರ್ಥಿಗಳ ಇಂಟರ್ನಲ್ ಮಾರ್ಕ್ಸ್​​ ಅನ್ನು ಕಡಿತಗೊಳಿಸೋದಾಗಿ ಬೆದರಿಕೆ ಹಾಕಿದ್ದಾರೆ.

ಶುಲ್ಕ ಇಳಿಸಲು ಒಪ್ಪದೇ; ವಿದ್ಯಾರ್ಥಿಗಳಿಗೆ ಬೆದರಿಕೆ

ಬಿಕಾಂ, ಬಿಬಿಎ ಹಾಗೂ ಬಿಎ ಪರೀಕ್ಷಾ ಶುಲ್ಕ ಕಡಿತಕ್ಕೆ ಆಗ್ರಹಿಸಿ ಕಳೆದ 2 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿನಿಯರು ಇಂದು ಕಾಲೇಜು ಬಂದ್​ ಮಾಡಲು ಮುಂದಾಗಿದ್ರು. ಆದ್ರೆ ಕಾಲೇಜು ಆಡಳಿತ ಮಂಡಳಿ ಮಾತ್ರ ವಿದ್ಯಾರ್ಥಿಗಳ ಮನವಿಗೆ ಕಿವಿಗೊಡುತ್ತಿಲ್ಲ. ಪರೀಕ್ಷಾ ಶುಲ್ಕ ಇಳಿಸಲು ಒಪ್ಪದೇ. ಬ್ಲ್ಯಾಕ್​ ಮೇಲ್ ಮಾಡೋ ತಂತ್ರದ ಮೊರೆ ಹೋಗಿದ್ದಾರೆ.

ಮಹಾರಾಣಿ ಕಾಲೇಜು


ಕ್ಲಾಸ್​ಗೆ ಹಾಜರಾಗದಿದ್ರೆ ಅಂಕ ಕಡಿತ ಮಾಡೋದಾಗಿ ಹೇಳಿ ಬಲವಂತವಾಗಿವಿದ್ಯಾರ್ಥಿಗಳನ್ನು ತರಗತಿಗೆ ಹಾಜರಾಗುವಂತೆ ಮಾಡಿದ್ದಾರೆ.

ಪೂರ್ಣ ತಯಾರಿ ಇಲ್ಲದೆ ಎನ್‌ಐಪಿ ಜಾರಿ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಐಪಿ) ಪೂರ್ಣ ತಯಾರಿ ಇಲ್ಲದೆ ಅನುಷ್ಠಾನಕ್ಕೆ ತಂದ ಪರಿಣಾಮ ಉಪನ್ಯಾಸಕರು, ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಕೇಂದ್ರ ಸರ್ಕಾರ 2020ರ ಜುಲೈ 29 ರಂದು ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ. 2021ರ ಆಗಸ್ಟ್‌ನಲ್ಲಿ ಪದವಿ ಕಾಲೇಜುಗಳಲ್ಲಿ ಎನ್‌ಇಪಿ ಅನುಷ್ಠಾನಗೊಳಿಸಿದ ಪ್ರಥಮ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

ಇದನ್ನೂ ಓದಿ: Kurup ಸಿನಿಮಾ ಶೈಲಿಯಲ್ಲಿ ಹತ್ಯೆ; ತನ್ನನ್ನೇ ಹೋಲುವ ವ್ಯಕ್ತಿಯನ್ನ ಬೆಂಕಿ ಹಚ್ಚಿ ಕೊಲೆಗೈದ

ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ತಲೆಬಿಸಿ

ಎನ್ಐಪಿ ಪಠ್ಯಕ್ರಮವನ್ನು ದೇಶದಲ್ಲೇ ಅಳವಡಿಸಿ, ಪರೀಕ್ಷೆ ನಡೆಸಿದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ. ಆದರೆ ಪ್ರಥಮ ಸೆಮಿಸ್ಟರ್ ಪರೀಕ್ಷೆ ಮುಗಿದು ಎರಡು ತಿಂಗಳಾದರೂ ಮೌಲ್ಯಮಾಪನ ನಡೆದಿಲ್ಲ. ಎನ್‌ಐಪಿ ವ್ಯವಸ್ಥೆ ಬಹುಪಾಲು ಸರ್ಕಾರವೇ ನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳ ಕೈ ಕಟ್ಟಿ ಹಾಕಿದೆ. ಉಪನ್ಯಾಸಕರು ಮೌಲ್ಯಮಾಪನದ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಪರದಾಡುತ್ತಿದ್ದಾರೆ.

ಗೊಂದಲದಲ್ಲೇ ನಡೆದಿತ್ತು ಪರೀಕ್ಷೆ

ರಾಜ್ಯದಾದ್ಯಂತ ವಿದ್ಯಾರ್ಥಿಗಳು ಎನ್ಇಪಿ ಅಡಿಯಲ್ಲಿ ಪರೀಕ್ಷೆ ಬರೆದಿದ್ದರು. ಪರೀಕ್ಷೆ ದಿನಾಂಕ ಪ್ರಕಟಿಸಿ ಹಲವು ದಿನಗಳಾದರೂ ಪ್ರವೇಶಪತ್ರ ಸಿಕ್ಕಿರಲಿಲ್ಲ. ವಿದ್ಯಾರ್ಥಿಗಳು ಕಾಲೇಜಿಗೆ ಅಲೆದಾಡಿದರು. ಕೊನೆಯ ದಿನದವರೆಗೂ ಪ್ರವೇಶಪತ್ರ ಸಿಗದೇ ಇದ್ದಾಗ ಅಧ್ಯಾಪಕರೂ ತಬ್ಬಿಬ್ಬಾಗಿದ್ದರು. ಪರೀಕ್ಷೆಯ ದಿನದಂದೇ ಪರೀಕ್ಷಾ ಕೊಠಡಿಯಲ್ಲಿಯೇ ಪ್ರವೇಶಪತ್ರ ವಿತರಿಸಲಾಯಿತು.

ಇದನ್ನೂ ಓದಿ: Anjanadri Hill: ಅಂಜನಾದ್ರಿ ಬೆಟ್ಟಕ್ಕೆ 430 ಮೀಟರ್ ರೋಪ್ ವೇ ನಿರ್ಮಿಸಲು ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು ವಿವಿ ಎಡವಟ್ಟು

ಸ್ನಾತಕೋತ್ತರ ಪದವಿ ಕೋರ್ಸಿಗೆ ಪ್ರವೇಶ ಪಡೆದಿರುವ ಹಲವು ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ (Bengaluru University) ಶಾಕ್​ ಕೊಟ್ಟಿದೆ. ಡಿಸ್ಟಿಂಕ್ಷನ್​ (Distinction) ಪಾಸ್​  ಅದವರನ್ನಯ ಈಗ ನೀವೆಲ್ಲರೂ ಪದವಿಯಲ್ಲಿ ಅನುತ್ತೀರ್ಣರಾಗಿದ್ದೀರಿ ಎಂದು ಹೇಳಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದು ಮೊದಲ ಸೆಮಿಸ್ಟರ್ ಪರೀಕ್ಷೆಗೆ (First Semester Exam) ಶುಲ್ಕ ಪಾವತಿಸಿದ ವಿದ್ಯಾರ್ಥಿಗಳಿಗೆ (Student) ವಿಶ್ವವಿದ್ಯಾಲಯ ನೀವೆಲ್ಲರೂ ಪದವಿಯಲ್ಲಿ ಫೇಲ್ ಆಗಿದ್ದೀರಿ ಹಾಗಾಗಿ ಸ್ನಾತಕೋತ್ತರ ಪದವಿ (Master Degree) ಪ್ರವೇಶಕ್ಕೆ ಅರ್ಹರಲ್ಲ ಎಂದು ಹೇಳಿ ಬೆಂಗಳೂರು ವಿವಿ ಅವರ ದಾಖಲಾತಿಯನ್ನೇ ಅನರ್ಹಗೊಳಿಸಿದೆ. ವಿವಿಯ ಈ ಎಡವಟ್ಟಿನಿಂದ (BU Blunder) ವಿದ್ಯಾರ್ಥಿಗಳು ಆತಂಕಗೊಂಡಿದ್ದು ಆಗಿರುವ ಲೋಪವನ್ನು ತಕ್ಷಣ ಸರಿಪಡಿಸಲು ಆಗ್ರಹಿಸಿದ್ದರು
Published by:Pavana HS
First published: