ಮಾಜಿ ಮಾಫಿಯಾ ನಾಯಕ ಮುತ್ತಪ್ಪ ರೈ ಆರೋಗ್ಯ ಗಂಭೀರ; ಮಣಿಪಾಲ್ ಆಸ್ಪತ್ರೆಗೆ ದಾಖಲು

Muthappa Rai Health - ಎರಡು ವರ್ಷದಿಂದ ಕ್ಯಾನ್ಸರ್​ನಿಂದ ಬಳಲುತ್ತಿರುವ ಅವರ ಆರೋಗ್ಯ ಸ್ಥಿತಿ ಇತ್ತೀಚೆಗೆ ವಿಷಮಗೊಂಡಿತ್ತು.

ಮುತ್ತಪ್ಪ ರೈ

ಮುತ್ತಪ್ಪ ರೈ

 • Share this:
  ಬೆಂಗಳೂರು(ಏ. 30): ಮಾಜಿ ಅಂಡರ್​ವರ್ಲ್ಡ್ ಡಾನ್ ಮುತ್ತಪ್ಪ ರೈ ಅವರು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ವರ್ಷದಿಂದ ಕ್ಯಾನ್ಸರ್​ನಿಂದ ಬಳಲುತ್ತಿರುವ ಅವರ ಆರೋಗ್ಯ ಸ್ಥಿತಿ ಇತ್ತೀಚೆಗೆ ವಿಷಮಗೊಂಡಿತ್ತು. ಸಾವು ನೋವಿನ ಮಧ್ಯೆ ಹೋರಾಡುತ್ತಿರುವ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಮುತ್ತಪ್ಪ ರೈ ಅವರು ಒಂದು ಕಾಲದಲ್ಲಿ ಭೂಗತ ಲೋಕವನ್ನು ಆಳಿದರಾದರೂ ಹಲವು ವರ್ಷಗಳಿಂದ ಡಾನ್​ಗಾರಿಕೆ ತ್ಯಜಿಸಿ ಸಮಾಜ ಸೇವೆಗೆ ಅರ್ಪಿಸಿಕೊಂಡಿದ್ದಾರೆ. ಜಯ ಕರ್ನಾಟಕ ಸಂಘಟನೆ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

   ಇದನ್ನೂ ಓದಿ: Rishi Kapoor Passes Away: ಕ್ಯಾನ್ಸರ್​ನಿಂದ ಬಳಲುತ್ತಿದ್ದ ಖ್ಯಾತ ಬಾಲಿವುಡ್​ ನಟ ರಿಷಿ ಕಪೂರ್​ ನಿಧನ!

  2013ರಲ್ಲಿ ಇವರ ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. 2018ರಲ್ಲಿ ಇವರಿಗೆ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಆಗನಿಂದ ಇವರು ತಮ್ಮ ವಿಲ್ ಪವರ್​ನಿಂದಲೇ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡುತ್ತಾ ಬಂದಿದ್ದಾರೆ. ದೇಹಕ್ಕೆ ಐದು ಬುಲೆಟ್ ಬಿದ್ದರೂ ಹೆದರಿರಲಿಲ್ಲ. ಈಗ ಈ ಕ್ಯಾನ್ಸರ್​ಗೆ ಹೆದರುತ್ತೇನೆಯೇ ಎಂದು ಇತ್ತೀಚೆಗೆ ಅವರು ಹೇಳಿದ್ದರು. ಅಂತೆಯೇ, ಅವರು ತಮ್ಮ ಕೊನೆಯ ಉಸಿರುವವರೆಗೂ ಕ್ಯಾನ್ಸರ್ ವಿರುದ್ಧ ಹೋರಾಟ ಮಾಡಿಯೇ ತೀರುತ್ತೇನೆ ಎಂದಿದ್ದರು. ಈಗಲೂ ಅದೇ ಹೋರಾಟದಲ್ಲಿದ್ಧಾರೆ.

  First published: