‌Online Scam: ಒಟಿಪಿ ಸಾವಿರಾರು ರೂ ಹಣ ಕಳೆದುಕೊಂಡ ಮಾಜಿ ಡಿಜಿಪಿ- ಕಳೆದುಕೊಂಡ ಹಣ ಎಷ್ಟು ಗೊತ್ತಾ?

Shankar Bidari Lost Money: ತಮ್ಮ ಪ್ಯಾನ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಬೇಕೆಂದು ಮತ್ತು ಹೀಗೆ ಮಾಡಲು ವಿಫಲರಾದರೆ ಅವರ ಬ್ಯಾಂಕ್ ಖಾತೆಯನ್ನು ತಕ್ಷಣವೇ ನಿರ್ಬಂಧಿಸಲಾಗುವುದು ಎಂದು ಬಿದರಿ, ತಮ್ಮ ಮೊಬೈಲ್ ಫೋನ್‌ನಲ್ಲಿ ಸಂದೇಶ ಸ್ವೀಕರಿಸಿದ್ದಾರೆ.

ಮಾಜಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ

ಮಾಜಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ

  • Share this:
ಡಿಜಿಟಲ್‌ ಇಂಡಿಯಾ(Digital India) ಕಲ್ಪನೆ ಸಾಕಾರಗೊಳ್ಳುವಂತೆ ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಆನ್‌ಲೈನ್‌ ವಹಿವಾಟು ಹೆಚ್ಚಾಗುತ್ತಲೇ ಇದೆ. ಶಾಪಿಂಗ್(Shopping), ಫುಡ್‌ ಡೆಲಿವರಿ, ತಿಂಡಿ, ಊಟ ತಿನ್ನಲು, ದುಡ್ಡನ್ನು ಒಬ್ಬರಿಂದ ಇನ್ನೊಬ್ಬರ ಅಕೌಂಟ್‌ಗೆ ಟ್ರಾನ್ಸ್‌ಫರ್‌ ಮಾಡುವುದು - ಹೀಗೆ ಅನೇಕ ಕಾರಣಗಳಿಗೆ ಡೆಬಿಟ್‌ ಕಾರ್ಡ್‌(Debit Card) ಹಾಗೂ ಕ್ರೆಡಿಟ್‌ ಕಾರ್ಡ್‌ (Credit Card)ಬಳಕೆ, ಯುಪಿಐ ಸೇರಿ ಆನ್‌ಲೈನ್‌ ಬಳಕೆ ಹೆಚ್ಚಾಗುತ್ತಲೇ ಇದೆ. ಆನ್‌ಲೈನ್‌ ಬಳಕೆ ಹೆಚ್ಚಾದಂತೆ ಸೈಬರ್‌ ವಂಚನೆಯ(Cyber Crime) ಪ್ರಕರಣಗಳೂ ಹೆಚ್ಚಾಗುತ್ತಲೇ ಇದೆ. ಅನೇಕ ನೆಪಗಳನ್ನೊಡ್ಡಿ ನಿಮಗೆ ಫೋನ್‌ ಮಾಡಿ ನಿಮ್ಮ ಅಕೌಂಟ್‌ ನಂಬರ್‌, ಪಾಸ್‌ವರ್ಡ್‌, ಒಟಿಪಿ(OTP), ಮುಂತಾದ ಖಾಸಗಿ ಮಾಹಿತಿಗಳನ್ನು ಪಡೆದು ನಿಮ್ಮ ಅಕೌಂಟ್‌ನಿಂದ ಹಣ ಎಗರಿಸುವುದು, ಎಟಿಎಂನಲ್ಲಿ ವಂಚನೆ ಮುಂತಾದ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ.

ಮೋಸಕ್ಕೆ ಬಲಿಯಾದ ಪೊಲೀಸ್ ಅಧಿಕಾರಿ

ಪೊಲೀಸರು ಸಹ ಇಂತಹ ವಂಚನೆಗೊಳಗಾಗಬೇಡಿ, ನಿಮ್ಮ ಖಾಸಗಿ ಮಾಹಿತಿಗಳನ್ನು ಯಾರಿಗೂ ನೀಡಬೇಡಿ, ಆನ್‌ಲೈನ್‌ ಶಾಪಿಂಗ್ ವೇಳೆ ಎಚ್ಚರಿಕೆ ಇರಲಿ ಎಂದು ಸಲಹೆ ನೀಡುತ್ತಿರುತ್ತಾರೆ. ಅದರೂ, ಜನ ಇಂತಹ ವಂಚನೆಗೊಳಗಾಗುತ್ತಾರೆ. ಅದೇ ರೀತಿ, ಇತ್ತೀಚೆಗೆ ಪೊಲೀಸ್‌ ಮಾಜಿ ಮಹಾನಿರ್ದೇಶಕರಾಗಿದ್ದವರೇ ಸೈಬರ್‌ ವಂಚನೆಗೊಳಗಾಗಿದ್ದಾರೆ.

ಹೌದು, ಮಾಜಿ ಮಹಾನಿರ್ದೇಶಕ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಡಿಜಿ ಮತ್ತು ಐಜಿಪಿ) ಶಂಕರ್ ಎಂ ಬಿದರಿ ಆನ್‌ಲೈನ್‌ ವಂಚನೆಗೊಳಗಾಗಿದ್ದು, ಖದೀಮರು 89,000 ರೂಪಾಯಿ ದೋಚಿದ್ದಾರೆ. ಈ ಸಂಬಂಧ ಅಕ್ಟೋಬರ್ 11 ರಂದು ಬಿದರಿ ನೀಡಿದ ದೂರಿನ ಆಧಾರದ ಮೇಲೆ ಆಗ್ನೇಯ ಸಿಇಎನ್ ಅಪರಾಧ ಪೊಲೀಸರು ಅಜ್ಞಾತ ದುಷ್ಕರ್ಮಿಗಳ ವಿರುದ್ಧ ವಂಚನೆ ಮತ್ತು ಸೈಬರ್ ಅಪರಾಧದ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ಡೀಲ್ ಮಾಸ್ಟರ್, ಲಾಭ ಇಲ್ಲದೆ ಏನೂ ಮಾಡುವುದಿಲ್ಲ: Zameer khan ಟ್ವೀಟಾಸ್ತ್ರ

ಶಂಕಿತರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಸೆಕ್ಷನ್ 66ಸಿ (ಗುರುತಿನ ಕಳ್ಳತನಕ್ಕೆ ಶಿಕ್ಷೆ) ಮತ್ತು 66ಡಿ (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಕ್ತಿ ವಂಚನೆಗಾಗಿ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ಯಾನ್​ ನಂಬರ್ ಹೆಸರಿನಲ್ಲಿ ದೋಖಾ

ತಮ್ಮ ಪ್ಯಾನ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಬೇಕೆಂದು ಮತ್ತು ಹೀಗೆ ಮಾಡಲು ವಿಫಲರಾದರೆ ಅವರ ಬ್ಯಾಂಕ್ ಖಾತೆಯನ್ನು ತಕ್ಷಣವೇ ನಿರ್ಬಂಧಿಸಲಾಗುವುದು ಎಂದು ಬಿದರಿ, ತಮ್ಮ ಮೊಬೈಲ್ ಫೋನ್‌ನಲ್ಲಿ ಸಂದೇಶ ಸ್ವೀಕರಿಸಿದ್ದಾರೆ.

ಜತೆಗೆ, ಶಂಕರ್‌ ಬಿದರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ತಾನು ಬ್ಯಾಂಕಿನ ಗ್ರಾಹಕ ಸೇವಾ ಘಟಕದ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿ, ನಿಮ್ಮ ಪ್ಯಾನ್‌ ವಿವರಗಳನ್ನು ಅಪ್‌ಡೇಟ್‌ ಮಾಡಬೇಕು ಎಂದು ಹೇಳಿದನು. ಅಲ್ಲದೆ, ನಿಮ್ಮ ಮೊಬೈಲ್‌ಗೆ ಬಂದ ಒನ್‌ ಟೈಮ್‌ ಪಾಸ್‌ವರ್ಡ್‌ (ಒಟಿಪಿ) ಬಹಿರಂಗಪಡಿಸಬೇಕೆಂದು ಆತ ಕೇಳಿಕೊಂಡಿದ್ದಾನೆ. ಆ ವ್ಯಕ್ತಿಯನ್ನು ನಂಬಿದ ಬಿದರಿ ಒಟಿಪಿಯನ್ನು ಆ ವ್ಯಕ್ತಿಗೆ ಬಹಿರಂಗಪಡಿಸಿದರು.

ಇದನ್ನೂ ಓದಿ; ಪೊಲೀಸರ ಕೈಗೆ ತ್ರಿಶೂಲ ನೀಡಿ ಹಿಂಸೆಯ ದೀಕ್ಷೆ ಕೊಟ್ಟು ಬಿಡಿ: ಸಿಎಂ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ನಂತರ ತನ್ನ ಬ್ಯಾಂಕ್‌ ಅಕೌಂಟ್‌ನಿಂದ ಹಣ ಕಡಿತವಾಗಿರುವ ಬಗ್ಗೆ ಶಂಕರ್‌ ಬಿದರಿಗೆ ಸಂದೇಶ ಬಂದಿದ್ದು, ಇದರಿಂದ ತಾನು ಮೋಸ ಹೋಗಿರುವ ಬಗ್ಗೆ ಮಾಜಿ ಪೊಲೀಸ್‌ ಅಧಿಕಾರಿ ತಿಳಿದುಕೊಂಡಿದ್ದಾರೆ. ಸೈಬರ್‌ ವಂಚಕರು ಬಿದರಿ ಖಾತೆಯಿಂದ 89 ಸಾವಿರ ರೂ. ಹಣ ವಂಚನೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
First published: