ಚುನಾವಣೆವರೆಗೂ ಆರೋಗ್ಯ ಕೊಡು ಎಂದು ರಾಯರಲ್ಲಿ ಪ್ರಾರ್ಥಿಸಿದ ದೇವೇಗೌಡರು

news18
Updated:August 28, 2018, 5:58 PM IST
ಚುನಾವಣೆವರೆಗೂ ಆರೋಗ್ಯ ಕೊಡು ಎಂದು ರಾಯರಲ್ಲಿ ಪ್ರಾರ್ಥಿಸಿದ ದೇವೇಗೌಡರು
news18
Updated: August 28, 2018, 5:58 PM IST
ಶರಣಪ್ಪ ಬಾಚಲಾಪುರ, ನ್ಯೂಸ್​ 18 ಕನ್ನಡ

ಬಳ್ಳಾರಿ (ಆ. 28): ಮುಂದೆ ಲೋಕಸಭಾ ಚುನಾವಣೆಯಿರುವುದರಿಂದ ಅಲ್ಲಿವರೆಗೂ ಇದೇ ರೀತಿಯ ಶಕ್ತಿ ಬೇಕು. ಅದಕ್ಕಾಗಿ ಆರೋಗ್ಯ ಕರುಣಿಸುವಂತೆ ರಾಯರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ತಿಳಿಸಿದ್ದಾರೆ.

ಮಂತ್ರಾಲಯದಲ್ಲಿ ನಡೆಯುತ್ತಿರುವ ಗುರು ರಾಘವೇಂದ್ರರ 347ನೇ ಆರಾಧನಾ ಮಹೋತ್ಸವದಲ್ಲಿ ಭಾಗಿಯಾಗಿ ರಾಯರ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಅವರು, ದೇವರಲ್ಲಿ ಆರೋಗ್ಯ ಕರುಣಿಸುವಂತೆ ದೇವರಲ್ಲಿ ಬೇಡಿಕೊಂಡಿದ್ದೇನೆ. ಇಲ್ಲಿಯವರೆಗೂ ರಾಜಕೀಯವಾಗಿ ಎಲ್ಲವನ್ನೂ ಅನುಭವಿಸಿದ್ದೇನೆ. ಮುಂದೆ ಲೋಕಸಭೆ ಚುನಾವಣೆಗೆ ಇದೇ ರೀತಿಯ ಶಕ್ತಿ ಬೇಕು. ಹಾಗಾಗಿ, ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಈ ವೇಳೆ ಹೇಳಿದ್ದಾರೆ.

ನನಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಭ್ರಮೆಯಿಲ್ಲ. ಆದರೆ, ಲೋಕಸಭೆ ಚುನಾವಣೆಗೆ ನಿಲ್ಲುವಂತೆ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಚುನಾವಣೆಗೆ ಇನ್ನೂ 10 ತಿಂಗಳು  ಬಾಕಿಯಿದೆ. ಗುರುಗಳ ಪ್ರೇರಣೆ, ದೇಹದ ಆರೋಗ್ಯವನ್ನು ನೋಡಿಕೊಂಡು ಮುಂದೇನು ಮಾಡುವುದು ಎಂದು ನಿರ್ಧಾರ ಮಾಡುತ್ತೇನೆ. ಹಾಗಾಗಿಯೇ,  ಗುರುಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು.

ರಾಯರ ಸಾನ್ನಿಧ್ಯಕ್ಕೆ ಬಂದು ರಾಜಕೀಯದ ವಿಷಯ ಮಾತನಾಡುವುದಿಲ್ಲ. ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಾಗಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ. ಆದರೆ, ಇದುವರೆಗೂ ಆರ್ಥಿಕ ಭರವಸೆ ಸಿಕ್ಕಿಲ್ಲ ಎಂದಿರುವ ಮಾಜಿ ಪ್ರಧಾನಿ ದೇವೇಗೌಡರು ಒಂದು ದಿನ ಮಂತ್ರಾಲಯದಲ್ಲೇ ಉಳಿದುಕೊಂಡು ರಾಯರ ದರ್ಶನ ಪಡೆಯಲಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ