ಪಾಟಿದಾರ್​ ಸಮುದಾಯವನ್ನು ಓಬಿಸಿಗೆ ಸೇರಿಸಲು ದೇವೇಗೌಡ ಆಗ್ರಹ; ಪ್ರಧಾನಿಗೆ ಪತ್ರ ಬರೆದ ಮಾಜಿ ಪ್ರಧಾನಿ

news18
Updated:September 3, 2018, 8:42 PM IST
ಪಾಟಿದಾರ್​ ಸಮುದಾಯವನ್ನು ಓಬಿಸಿಗೆ ಸೇರಿಸಲು ದೇವೇಗೌಡ ಆಗ್ರಹ; ಪ್ರಧಾನಿಗೆ ಪತ್ರ ಬರೆದ ಮಾಜಿ ಪ್ರಧಾನಿ
news18
Updated: September 3, 2018, 8:42 PM IST
ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 3): ಪಾಟೀದಾರ್​​ ಸಮುದಾಯದ ಮೀಸಲಾತಿಗೆ ಆಗ್ರಹಿಸಿ ಕಳೆದ 9 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವವರ ಬೇಡಿಕೆಗೆ ಸ್ಪಂದಿಸಿ ಪಾಟೀದಾರ್​ ಸಮುದಾಯವನ್ನು ಓಬಿಸಿಗೆ ಸೇರಿಸಲು ಆಗ್ರಹಿಸಿ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಪಾಟೀದಾರ್​ ಸಮುದಾಯದ ಯುವನಾಯಕ ಹಾರ್ದಿಕ್​ ಪಟೇಲ್ 3 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಅವರನ್ನು ಜಾಟ್​ ಸಮುದಾಯದ ಮಾದರಿಯಲ್ಲಿ ಓಬಿಸಿಗೆ ಸೇರಿಸಿ ಎಂದು ಪತ್ರದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ದೇವೇಗೌಡರು ಆಗ್ರಹಿಸಿದ್ದಾರೆ.

ನಾನು ಪ್ರಧಾನಿ ಆಗಿದ್ದ ವೇಳೆ ಓಬಿಸಿಗೆ ಸೇರಿಸುವಂತೆ ಜಾಟ್ ಸಮುದಾಯದವರಿಂದ ಮನವಿ ಬಂದಿತ್ತು. ಆ ವೇಳೆ ಓಬಿಸಿ ಕಮಿಷನ್​ಗೆ ಈ ಬಗ್ಗೆ ವರದಿ ನೀಡಲು ಸೂಚಿಸಿದ್ದೆ. ಕಮಿಷನ್ ಸಹ ಓಬಿಸಿಗೆ ಸೇರಿಸಲು ಶಿಫಾರಸ್ಸು ಮಾಡಿತ್ತು.  ಕಮಿಷನ್ ನೀಡಿದ ವರದಿ ಆಧಾರದ ಮೇಲೆ ಓಬಿಸಿಗೆ ಸೇರಿಸಿದ್ದೆ. ಆದರೆ, ನಮ್ಮ ಸರ್ಕಾರದ ಆದೇಶವನ್ನು ಕೋರ್ಟ್ ತಡೆ ಹಿಡಿದಿತ್ತು. ಕೋರ್ಟ್​ಗೆ ಈ ಬಗ್ಗೆ ಸೂಕ್ತ ದಾಖಲೆ ನೀಡಿ ಓಬಿಸಿಗೆ ಸೇರಿಸಿದ್ದೆ. ಪಾಟೀದಾರ್ ಸಮುದಾಯದ ವಿಚಾರದಲ್ಲಿ ವರದಿ ನೀಡಲು ಆಯೋಗ ರಚಿಸಬೇಕು. ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಕ್ರಮ ಜರುಗಿಸಬೇಕು ಎಂದು ಹೆಚ್.ಡಿ.ದೇವೇಗೌಡ ಒತ್ತಾಯಿಸಿದ್ದಾರೆ.

 
First published:September 3, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ