ಬಿಜೆಪಿಯ ರಾಷ್ಟ್ರ ರಾಜ್ಯ ನಾಯಕರೆಲ್ಲರೂ ಪಕ್ಷಾಂತರದ ಪಿತಾಮಹರುಗಳೆ; ಲೇವಡಿ ಮಾಡಿದ ವಿಎಸ್ ಉಗ್ರಪ್ಪ

ಕೇಂದ್ರ ಗೃಹ ಸಚಿವರೂ ಆಗಿರುವ ಅಮಿತ್ ಶಾ ಹೇಳುವುದೊಂದು ಮಾಡುವುದೊಂದು. ಆಪರೇಷನ್ ಕಮಲಕ್ಕೆ ಬಿಜೆಪಿ ರಾಜ್ಯದಲ್ಲಿ ಒಂದು ಸಾವಿರ ಕೋಟಿ ಖರ್ಚು ಮಾಡಿದೆ. ಪ್ರತಿಯೊಬ್ಬ ಶಾಸಕನಿಗೂ 30 ರಿಂದ 40 ಕೋಟಿ ಆಫರ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇಷ್ಟೊಂದು ಅಕ್ರಮ ನಡೆಯುತ್ತಿದ್ದರೂ ನಮ್ಮ ಐಟಿ ಇಲಾಖೆ ಏನು ಮಾಡುತ್ತಿದೆ? ಮೋದಿಯವರೇ ಏಕೆ ಮೌನಿ ಬಾಬಾ ಆಗಿದ್ದೀರ? ಎಂದು ಮಾಜಿ ಸಂಸದ ವಿ.ಎಸ್​. ಉಗ್ರಪ್ಪ ಕುಟುಕಿದ್ದಾರೆ.

MAshok Kumar | news18
Updated:July 13, 2019, 1:29 PM IST
ಬಿಜೆಪಿಯ ರಾಷ್ಟ್ರ ರಾಜ್ಯ ನಾಯಕರೆಲ್ಲರೂ ಪಕ್ಷಾಂತರದ ಪಿತಾಮಹರುಗಳೆ; ಲೇವಡಿ ಮಾಡಿದ ವಿಎಸ್ ಉಗ್ರಪ್ಪ
ವಿ.ಎಸ್​. ಉಗ್ರಪ್ಪ
  • News18
  • Last Updated: July 13, 2019, 1:29 PM IST
  • Share this:
ಬೆಂಗಳೂರು (ಜುಲೈ.13); ಭಾರತೀಯ ರಾಜಕೀಯದಲ್ಲಿ ಪಕ್ಷಾಂತರದ ಹೊಸ ಪರ್ವವನ್ನು ಹುಟ್ಟು ಹಾಕಿದ ಬಿಜೆಪಿಯ ನಾಯಕರೆ ಪಕ್ಷಾಂತರದ ಪಿತಾಮಹರು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಲೇವಡಿ ಮಾಡಿದ್ದಾರೆ.

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಪಕ್ಷಾಂತರ ರಾಜಕಾರಣ ಹಾಗೂ ಆಪರೇಷನ್ ಕಮಲದ ಕುರಿತು ಶನಿವಾರ ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಬಿಜೆಪಿ ಕಳೆದ 1 ವರ್ಷದಲ್ಲಿ ಐದು ಬಾರಿ ಮೈತ್ರಿ ಸರ್ಕಾರವನ್ನು ಉರುಳಿಸುವ ಕೆಲಸಕ್ಕೆ ಮುಂದಾಗಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಭಾರಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೆ ಸರ್ಕಾರ ಉರುಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಗಾಳ ಹಾಕಿದ್ದಾರೆ. ಇವರು ಒಂದರ್ಥದಲ್ಲಿ ಪಕ್ಷಾಂತರದ ಪಿತಾಮಹರು” ಎಂದು ಅವರು ಕಿಡಿಕಾರಿದ್ದಾರೆ.

ಇದನ್ನೂ ಓದಿ : ಸುಪ್ರೀಂ ತೀರ್ಪಿನ ಬಳಿಕ ಮೈತ್ರಿ ನಾಯಕರು ಕೈ-ಕೈ ಮಿಲಾಯಿಸಿದರು ಅಚ್ಚರಿ ಇಲ್ಲ; ವಿ. ಸೋಮಣ್ಣ ಭವಿಷ್ಯ

ಮೋದಿ ಹಾಗೂ ಷಾ ವಿರುದ್ಧ ಹರಿಹಾಯ್ದ ಅವರು, “ಕೇಂದ್ರ ಗೃಹ ಸಚಿವರೂ ಆಗಿರುವ ಅಮಿತ್ ಶಾ ಹೇಳುವುದೊಂದು ಮಾಡುವುದೊಂದು. ಆಪರೇಷನ್ ಕಮಲಕ್ಕೆ ಬಿಜೆಪಿ ರಾಜ್ಯದಲ್ಲಿ ಒಂದು ಸಾವಿರ ಕೋಟಿ ಖರ್ಚು ಮಾಡಿದೆ. ಪ್ರತಿಯೊಬ್ಬ ಶಾಸಕನಿಗೂ 30 ರಿಂದ 40 ಕೋಟಿ ಆಫರ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಇಷ್ಟೊಂದು ಅಕ್ರಮ ನಡೆಯುತ್ತಿದ್ದರೂ ನಮ್ಮ ಐಟಿ ಇಲಾಖೆ ಏನು ಮಾಡುತ್ತಿದೆ? ಮೋದಿಯವರೇ ಏಕೆ ಮೌನಿ ಬಾಬಾ ಆಗಿದ್ದೀರ? ಪ್ರಶ್ನಿಸಿದ ಅವರು, ನೀವು ಮೌನವಹಿಸಿರುವುದನ್ನು ನೋಡಿದರೆ ಈ ಬೆಳವಣಿಗೆಯ ಹಿಂದಿನ ಸೂತ್ರಧಾರ ತಾವೇ ಎಂಬ ಅನುಮಾನ ಮೂಡುತ್ತಿದೆ" ಎಂದು ಶಂಕೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪಕ್ಷಾಂತರ ಮಾಡಿದ ಶಾಸಕರ ಕುರಿತು ಅಸಮಾಧಾನ ವ್ಯಕ್ತಪಡಿಸಿದ ವಿ.ಎಸ್. ಉಗ್ರಪ್ಪ, “ಜೆಡಿಎಸ್ ಪಕ್ಷದ ವಿಶ್ವನಾಥ್ ನಾವು ಬಿಜೆಪಿಗೆ ಬೆಂಬಲ ನೀಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡುತ್ತಾರೆ. ಆಮಿಷಕ್ಕೆ ಒಳಗಾಗುವ ಮೂಲಕ ಇವರೆಲ್ಲ ಪಕ್ಷದ್ರೋಹ ಮಾಡಲು ಹೊರಟಿದ್ದಾರೆ. ಇವರ ತಪ್ಪಿಗೆ ಶಿಕ್ಷೆ ಆಗಲೇಬೇಕು ಎಂದು ಅವರು ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಎಲ್ಲಾ ಶಾಸಕರನ್ನು ಅನರ್ಹಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಸಚಿವ ಎಂಬಿಟಿ ನಾಗರಾಜ್ ಮನವೊಲಿಕೆಗೆ ಯತ್ನ; ಜಿ. ಪರಮೇಶ್ವರ್ ನೇತೃತ್ವದ ಟೀಮ್​ನಿಂದ ಮತ್ತೊಂದು ಸುತ್ತಿನ ಮಾತುಕತೆ

ಅಲ್ಲದೆ ವಿಜಯನಗರ ಶಾಸಕ ಆನಂದ್ ಸಿಂಗ್ ಕುರಿತು ಮಾತನಾಡಿದ ಅವರು, “ಆನಂದ್ ಸಿಂಗ್ ಜನ ಮೆಚ್ಚಿದ ಮಗ ಎಲ್ಲ, ಬದಲಿಗೆ ಅವರು ದಾರಿ ತಪ್ಪಿದ ಮಗ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಒಂದು ದಿನವೂ ಮಾತನಾಡದ ಅವರು ಇಂದು ಬೇರೆ ಪಕ್ಷಕ್ಕೆ ಹೋಗುವ ಸಲುವಾಗಿ ಜಿಂದಾಲ್ ವಿಚಾರವನ್ನು ಅಡಿಪಾಯವಾಗಿ ಬಳಸಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ