G Madegowda: ಹಿರಿಯ ರೈತ ಹೋರಾಟಗಾರ, ಮಾಜಿ ಸಚಿವ ಜಿ ಮಾದೇಗೌಡ ಇನ್ನಿಲ್ಲ

ಕಾವೇರಿ ಹೋರಾಟದಲ್ಲಿ ರೈತರ ಧ್ವನಿಯಾಗಿದ್ದವರು ಜಿ ಮಾದೇಗೌಡ

ಜಿ ಮಾದೇಗೌಡ

ಜಿ ಮಾದೇಗೌಡ

 • Share this:
  ಮಂಡ್ಯ (ಜು. 17): ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ರೈತ ಹೋರಾಟಗಾರ, ಮಾಜಿ ಸಚಿವರಾಗಿದ್ದ ಜಿ ಮಾದೇಗೌಡ ಅವರು ಇಂದು ಕೊನೆಯುಸಿರು ಎಳೆದಿದ್ದಾರೆ. 92 ವರ್ಷ ವಯಸ್ಸಿನ ಮಾದೇಗೌಡ ಅವರು ಕಳೆದ  ಹಲವು ದಿನಗಳಿಂದ ಮದ್ದೂರಿನ ಕೆಎಂ ದೊಡ್ಡಿ ಜಿ ಮಾದೇಗೌಡ ಮಲ್ಟಿ ಸ್ಷೆಷಾಲಿಟಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಸೋಂಕಿನಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇಂದು ಸಂಜೆ ಇಹಲೋಕ ತ್ಯಜಿಸಿದ್ದಾರೆ.

  ಮಾದೇಗೌಡರ ಆರೋಗ್ಯ ಪರಿಸ್ಥಿತಿ ಗಂಭೀರಗೊಂಡಿದ್ದ ಹಿನ್ನಲೆ   ಗೃಹ ಸಚಿವ ಬಸವರಾಜ ಬೊಮ್ಮಯಿ, ಮಾಜಿ ಸಿಎಂ ಕುಮಾರಸ್ವಾಮಿ, ನಿರ್ಮಾಲಾನಂದ ಶ್ರೀ, ಡಿಸಿಎಂ ಅಶ್ವತ್ಥ್​ ನಾರಾಯಣ ಎಸ್​ ಎಂ ಕೃಷ್ಣ, ಸಂಸದೆ ಸುಮಲತಾ ಸೇರಿದಂತೆ ಹಲವರು ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದ್ದರು.

  ಕಾವೇರಿ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದ ಜಿ ಮಾದೇಗೌಡ ಅವರು ರಾಜ್ಯದ ನೆಲ ಜಲ, ರೈತರ ದನಿಯಾದವರು. 1959ರಲ್ಲಿ ತಾಲೂಕು ಮಂಡಳಿ ಚುನಾವಣೆ ಮೂಲಕ ತಮ್ಮ ರಾಜಕೀಯ ಆರಂಭಿಸಿದ ಮಾದೇಗೌಡ ಅವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ 1989, 1995ರಲ್ಲಿ 2 ಬಾರಿ ಲೋಕಸಭಾ ಸದಸ್ಯರಾಗಿದ್ದರು. 1980-83ರವರೆಗೆ ಗುಂಡೂರಾವ್‌ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. 89 ವರ್ಷದ ಇಳಿ ವಯಸ್ಸಿನಲ್ಲೂ ಯೂ ಕಾವೇರಿ ನದಿ ನೀರಿನ ವಿಷಯವಾಗಿ ನಿರಂತರ ಹೋರಾಟ ಮಾಡಿ ಮಂಡ್ಯ ರೈತರ ಧ್ವನಿಯಾಗಿದ್ದರು. ಅಷ್ಟೇ ಅಲ್ಲದೇ, ಮಹಾದಾಯಿ ಹೋರಾಟಕ್ಕೂ ಬೆಂಬಲ ನೀಡಿದ್ದ ಅವರು, ರಾಜ್ಯದ ರೈತರ ಹಿತ ಕಾಯಲು ಸದಾ ಸಿದ್ದ ಎಂದಿದ್ದರು.
  ಮಾದೇಗೌಡರ ನಿಧನಕ್ಕೆ ಸಿಎಂ ಬಿಎಸ್​ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

  ಮಾದೇಗೌಡರ ಪಾರ್ಥಿವ ಶರೀರದ  ಅಂತಿಮ ದರ್ಶನಕ್ಕೆ ನಾಳೆ ಮಂಡ್ಯದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಡ್ಯದ ಬಂದಿಗೌಡ ನಿವಾಸದಲ್ಲಿ ಬೆಳಗ್ಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಳಿಕ ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಕೆಎಂ ದೊಡ್ಡಿಗೆ ಪಾರ್ಥಿವ ಶರೀರ ಕೊಂಡೊಯ್ಯಲಾಗುವುದು. ಕೆಎಂ ದೊಡ್ಡಿಯ ಭಾರತಿ ಕಾಲೇಜಿನಲ್ಲಿ ಕೆಲವೊತ್ತು ಅಂತಿಮ ದರ್ಶನಕ್ಕೆ  ವ್ಯವಸ್ಥೆ ಮಾಡಿದ್ದು, ಇದಾದ ಬಳಿಕ ಮಧ್ಯಾಹ್ನ 3 ಗಂಟೆಗೆ ಹನುಮಂತ ನಗರದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು
  Published by:Seema R
  First published: