ಬೆಂಗಳೂರು (ಸೆ. 16): ಹಟ್ಟಿ ಗಣಿ ಅಧ್ಯಕ್ಷರಾಗಿರುವ ಮಾಜಿ ಶಾಸಕ ಮಾನಪ್ಪ ವಜ್ಜಲ್ (manappa vajjal) ಮಗ ಕಾರು ಪಾರ್ಕಿಂಗ್ ವಿಚಾರಕ್ಕೆ ಪುಂಡಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ವಸಂತನಗರದ ಎಂಬಾಸಿ ಅಪಾರ್ಟ್ಮೆಂಟ್ (embassy apartment) ನಲ್ಲಿ ಈ ಘಟನೆ ನಡೆದಿದ್ದು, ಈ ವೇಳೆ ಉದ್ಯಮಿ ದೀಪಕ್ ರೈ ಮಗ ವಿಕ್ರಮ್ ರೈ ಮೇಲೆ ಹಲ್ಲೆ ನಡೆಸಿದ್ದಾನೆ. ಕಳೆದ ಭಾನುವಾರ ರಾತ್ರಿ ಅಪಾರ್ಟ್ಮೆಂಟ್ನಲ್ಲಿ ಕಾರು ಪಾರ್ಕಿಂಗ್ ವಿಚಾರಕ್ಕೆ ವಿಕ್ರಮ್ ರೈ ಮತ್ತು ಆಂಜನೇಯ ವಜ್ಜಲ್ ನಡುವೆ ಹೊಡೆದಾಟ ನಡೆದಿದೆ. ಈ ಗಲಾಟೆಯಲ್ಲಿ ವಿಕ್ರಮ್ ರೈ ಕಣ್ಣಿನ ಮೇಲ್ಭಾಗಕ್ಕೆ ಗಾಯವಾಗಿದೆ. ಈ ಪ್ರಕರಣ ಸಂಬಂಧ ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಆಂಜನೇಯ ವಜ್ಜಲ್ ಮತ್ತು ವನೀಶ್ ವಜ್ಜಲ್ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಿಕ್ರಮ್ ರೈ ಸಹ ಠಾಣೆಯಲ್ಲಿ ದೂರು ನೀಡಿದ್ದು, ಇದುವರೆಗೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ನ್ಯೂಸ್ 18ಗೆ ಪೊಲೀಸ್ ಮೂಲಗಳು ತಿಳಿಸಿವೆ.
ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯ
ವಸಂತನಗರದ ಎಂಬೆಸಿ ಹ್ಯಾಬಿಟೆಟ್ ಮಾಜಿ ಶಾಸಕ ಮಾನಪ್ಪ ವಜ್ಜಲ್ ಕುಟುಂಬ ವಾಸ ಮಾಡುತ್ತಿದೆ. ಆದರೆ, ಕಳೆದ ಭಾನುವಾರ ಅಪಾರ್ಟ್ಮೆಂಟ್ನಲ್ಲಿ ಕಾರು ನಿಲ್ಲಿಸುವ ವಿಚಾರಕ್ಕೆ ಉದ್ಯಮಿ ಮಗ ವಿಕ್ರಮ್ ರೈ ಮತ್ತು ಆಂಜನೇಯ ವಜ್ಜಲ್ ನಡುವೆ ಗಲಾಟೆ ನಡೆದಿದೆ. ಮಾತಿನ ಚಕಮಕಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಈ ವೇಳೆ ಅಪಾರ್ಟ್ಮೆಂಟ್ನ ಇತರೆ ಜನರು ಇವರಿಬ್ಬರನ್ನು ತಡೆಯುವ ಯತ್ನ ನಡೆಸಿದರು ವಿಫಲರಾಗಿದ್ದಾರೆ.
ಈ ಹಲ್ಲೆ ಘಟನೆ ಸಂಪೂರ್ಣ ದೃಶ್ಯ ಅಪಾರ್ಟ್ಮೆಂಟ್ನ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಪ್ರಕರಣ ಸಂಬಂಧ ಈಗ ಎರಡು ಕುಟುಂಬದವರು ರಾಜಿಗೆ ಮುಂದಾಗಿದ್ದಾರೆ. ಈ ಬೆನ್ನಲೆ ಹೈ ಗ್ರೌಂಡ್ಸ್ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎನ್ನಲಾಗಿದೆ.
ಇದನ್ನು ಓದಿ: ಮೂಡಿಗೆರೆಯಲ್ಲಿ ಹಿಂದೂಪರ ಸಂಘಟನೆಗಳಿಂದ ಸಂಸದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯಗೆ ಮುತ್ತಿಗೆ
ಈ ಪ್ರಕರಣ ಸಂಬಂಧ ಮಾತನಾಡಿರುವ ಪೊಲೀಸರು, ಘಟನೆ ಕುರಿತು ದೂರು ನೀಡಿದರೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಸಂಜೆ ಎರಡು ಕುಟುಂಬ ಠಾಣೆಗೆ ಬರುವುದಾಗಿ ತಿಳಿಸಿದ್ದಾರೆ. ದೂರು ಕೊಟ್ಟರೇ ಖಂಡಿತ ತೆಗೆದುಕೊಂಡು ತನಿಖೆ ಮಾಡುತ್ತೇವೆ ಎಂದಿದ್ದರು ಎಂದು ಮೂಲಗಳು ನ್ಯೂಸ್ 18 ಕನ್ನಡಕ್ಕೆ ತಿಳಿಸಿದೆ.
ಇನ್ನು ಈ ಸಂಬಂಧ ಸಂಜೆ 6.30ರ ಸುಮಾರಿಗೆ ಠಾಣೆಗೆ ಆಗಮಿಸಿದ ಎರಡು ಕುಟುಂಬ ಸದಸ್ಯರು ದೂರು ದಾಖಲಿಸಿದ್ದಾರೆ. ಇಬ್ಬರ ದೂರಿನನ್ವಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲು ಠಾಣಾ ಪೊಲೀಸರು ಮುಂದಾಗಿದ್ದಾರೆ. ರಾಜಿ ಮಾತು ಕೇಳಿ ಬರುತ್ತಿರುವ ಹಿನ್ನಲೆ ಇದುವರೆಗೂ ಈ ಸಂಬಂಧ ಎಫ್ಐಆರ್ ದಾಖಲಾಗಿಲ್ಲ ಎನ್ನಲಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ