ಸಿದ್ಧಗಂಗಾ ಶ್ರೀ ಭೇಟಿ ಮಾಡಿದ ಮಾಗಡಿ ಬಾಲಕೃಷ್ಣ! BJP ಸೇರುವ ಮುನ್ಸೂಚನೆ?

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಶ್ರೀ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಗಳ ಆಶಿರ್ವಾದ ಪಡೆದಿದ್ದಾರೆ ಮಾಜಿ ಶಾಸಕ ಬಾಲಕೃಷ್ಣ ರಾಜಸಭೆ ಚುನಾವಣೆ ಬಳಿಕ ರಾತ್ರಿ ವೇಳೆ ಸ್ವಾಮಿಜಿ ಭೇಟಿ ಮಾಡಿದ್ದು ಪಕ್ಷ ಬದಲಿಸುವ ನಿರ್ಧಾರಕ್ಕೆ ಸಿದ್ಧಗಂಗಾ ಶ್ರೀ ಮೊರೆ ಹೋದ್ರಾ ಎಂಬ ಚರ್ಚೆ ಪ್ರಾರಂಭವಾಗಿದೆ.

ಶ್ರೀಗಳ ಆಶಿರ್ವಾದ ಪಡೆದ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ

ಶ್ರೀಗಳ ಆಶಿರ್ವಾದ ಪಡೆದ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ

  • Share this:
ರಾಮನಗರ(ಜೂ.12): ಸಿದ್ಧಗಂಗಾ ಶ್ರೀಗಳ (Siddaganga Sri) ಮೊರೆ ಹೋದ ಮಾಗಡಿ ಮಾಜಿ ಶಾಸಕ (Ex MLA) ಪಕ್ಷಾಂತರಕ್ಕೆ ಮುಂದಾದರ ಎಂಬ ಅನುಮಾನ‌ ಮೂಡಿದೆ. ‌ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಶ್ರೀ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಗಳ ಆಶಿರ್ವಾದ ಪಡೆದಿದ್ದಾರೆ ಮಾಜಿ ಶಾಸಕ ಬಾಲಕೃಷ್ಣ ರಾಜಸಭೆ ಚುನಾವಣೆ ಬಳಿಕ ರಾತ್ರಿ ವೇಳೆ ಸ್ವಾಮಿಜಿ ಭೇಟಿ ಮಾಡಿದ್ದು ಪಕ್ಷ ಬದಲಿಸುವ ನಿರ್ಧಾರಕ್ಕೆ ಸಿದ್ಧಗಂಗಾ ಶ್ರೀ ಮೊರೆ ಹೋದ್ರಾ ಎಂಬ ಚರ್ಚೆ ಪ್ರಾರಂಭವಾಗಿದೆ. ಕೆಲ ಕಾಲ ಶ್ರೀಗಳ ಜೊತೆ ಗೌಪ್ಯ ಮಾತುಕತೆ ನಡೆಸಿದ್ದು ಬಿಜೆಪಿ ಸೇರಲು ಶ್ರೀಗಳ ಸಲಹೆಗೆ ಮುಂದಾದ್ರಾ ಬಾಲಕೃಷ್ಣ ಎಂಬ ಚರ್ಚೆ ನಡೆಯುತ್ತಿದೆ. ಕೈ ಗೆ ಗುಡ್ ಬೈ ವದಂತಿ ಬೆನ್ನಲ್ಲೇ ಮಠಕ್ಕೆ ಭೇಟಿ ನೀಡಿರುವ ಬಾಲಕೃಷ್ಣ ನಿನ್ನೆ ರಾತ್ರಿ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಹಲವು ವಿಚಾರದ ಬಗ್ಗೆ ಶ್ರೀಗಳ ಚರ್ಚೆ ನಡೆಸಿ  ಮಾರ್ಗದರ್ಶನ ಪಡೆದಿರುವ ಹೆಚ್.ಸಿ. ಬಾಲಕೃಷ್ಣ ಯಾವ ನಿರ್ಧಾರ ಮಾಡ್ತಾರೆಂಬುದು ಕುತೂಹಲ ಮೂಡಿಸಿದೆ.

ಡಿ.ಕೆ.ಶಿವಕುಮಾರ್ ಗೆ ಬಾಲಕೃಷ್ಣ ಬಹಿರಂಗ ಪತ್ರ, ಪಕ್ಷದಲ್ಲಿ ಗೊಂದಲ :

ರಾಮನಗರ - ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಗೊಂದಲವಾಗಿದ್ದುಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆದು ಕೆಲ ಅಸಮಾಧಾನ ವ್ಯಕ್ತಪಡಿಸಿದ್ದರು.‌

ಕ್ಷೇತ್ರದಲ್ಲಿ ಇರುಸುಮುರುಸು

ನನಗೆ 2023 ಕ್ಕೆ ಕಾಂಗ್ರೆಸ್ ಟಿಕೆಟ್ ಬೇಡ ಎಂದು ಪತ್ರ ಬರೆದಿದ್ದು  ಮಾಜಿ ಸಚಿವ ಹೆಚ್.ಎಂ.ರೇವಣ್ಣ ವಿರುದ್ಧ ಬಾಲಕೃಷ್ಣ ಗರಂ ಆಗಿದ್ದರು. ನಾನು ಮಾಗಡಿಯಲ್ಲಿ ಕಾಂಗ್ರೆಸ್ ಕಟ್ಟುತ್ತಿದ್ದೇನೆ, ಆದರೆ ರೇವಣ್ಣ ಜೆಡಿಎಸ್ ಶಾಸಕ ಎ.ಮಂಜು ಪರವಾಗಿದ್ದಾರೆ. ರೇವಣ್ಣ - ಮಂಜು ತುಂಬಾ ಚೆನ್ನಾಗಿದ್ದಾರೆ.  ರೇವಣ್ಣ ಮಂಜುರನ್ನ ಹೊಗಳುತ್ತಾರೆ, ಮಂಜು ರೇವಣ್ಣ ನನ್ನ ಗುರುಗಳು ಅಂತಾರೆ. ಹಾಗಾಗಿ ನನಗೆ ಕ್ಷೇತ್ರದಲ್ಲಿ ಇರುಸುಮುರುಸಾಗುತ್ತಿದೆ.‌ ರೇವಣ್ಣರಿಗೆ ಪಕ್ಷದ ಟಿಕೆಟ್ ಕೊಡಿ, ನನಗೆ ಬೇಡ ಎಂದು ಬಾಲಕೃಷ್ಣ ಪತ್ರದಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ತಿಳಿಸಿದ್ದಾರೆ.

ಇನ್ನು ನಮ್ಮದು ರಾಷ್ಟ್ರೀಯ ಪಕ್ಷ ಹಲವು ಅವಕಾಶ ಇದೇ, ಹಿಂದೆ ರೇವಣ್ಣ ಎಂಎಲ್ಸಿ ಆಗಿ ಮಂತ್ರಿ ಆಗಿದ್ದರು.‌ ನಾನು ಮಾಗಡಿ ಬಿಟ್ಟು ಹೋಗಲ್ಲ ಎಂದರು. ಇನ್ನು ಬಾಲಕೃಷ್ಣ ಬಿಜೆಪಿ ಸೇರ್ತಾರೆಂಬ ಸುದ್ದಿಗೆ ಈಗ ಮತ್ತಷ್ಟು ರೆಕ್ಕೆಪುಕ್ಕ ಬಂದಿತ್ತು.

ಬಾಲಕೃಷ್ಣ ಗೆ ರೇವಣ್ಣ - ಮಂಜು ತಿರುಗೇಟು :

ಇನ್ನು ಮಾಗಡಿ ಕಾಂಗ್ರೆಸ್ ನಲ್ಲಿ ಗೊಂದಲದ ವಿಚಾರವಾಗಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ ನ್ಯೂಸ್ 18 ಗೆ ಹೇಳಿಕೆ ನೀಡಿದ್ದರು. ನ್ಯೂಸ್ 18 ಕನ್ನಡದ ರಾಮನಗರ ವರದಿಗಾರರ ಜೊತೆ ಮಾತನಾಡಿಜೆಡಿಎಸ್ ಶಾಸಕ ಎ.ಮಂಜು - ಮಾಜಿ ಸಚಿವ ರೇವಣ್ಣ ವಿಚಾರವಾಗಿ ಬಾಲಕೃಷ್ಣ ಆರೋಪ ಮಾಡಿದ್ದರು.

ನಾವು ಕಾಂಗ್ರೆಸ್ ಕಟ್ಟಿರುವ ಜನರು

‌ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಇಬ್ಬರು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಇದರಿಂದ ನನಗೆ ಇರುಸುಮುರುಸಾಗುತ್ತಿದೆ ಎಂದು ಬಾಲಕೃಷ್ಣ ಆರೋಪ ಮಾಡಿದ್ದರು. ಬಾಲಕೃಷ್ಣ ಆರೋಪಕ್ಕೆ ಹೆಚ್.ಎಂ.ರೇವಣ್ಣ ತಿರುಗೇಟು ನೀಡಿ ನಾನು ಈ ವಿಚಾರವಾಗಿ ಈಗ ಏನನ್ನು ಮಾತನಾಡಲ್ಲ,  ಅಧ್ಯಕ್ಷರು ದೆಹಲಿಗೆ ಹೋಗಿದ್ದಾರೆ, ಅವರು ಬರಲಿ ಮಾತನಾಡುತ್ತೇನೆ.  ನಾವು ಕಾಂಗ್ರೆಸ್ ಕಟ್ಟಿರುವ ಜನರು, ಬೇರೆ ವಿಚಾರ ಇಲ್ಲ ಎಂದರು.

ಇದನ್ನೂ ಓದಿ: Kodagu: 70 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಯ್ತು ಅಬಕಾರಿ ಕಟ್ಟಡ; 16 ವರ್ಷ ಕಳೆದ್ರೂ ಉಪಯೋಗಕ್ಕೆ ಬಂದಿಲ್ಲ

ಇನ್ನು ಮಾಗಡಿ ಜೆಡಿಎಸ್ ಶಾಸಕ ಎ.ಮಂಜು ಬಿಡದಿಯಲ್ಲಿ ಮಾತನಾಡಿ ನನ್ನ ರೇವಣ್ಣರ ಸಂಬಂಧ ತಂದೆ ಮಗುವಿನ ಸಂಬಂಧ, ನನಗೆ 2008 ರಲ್ಲಿ ರಾಜಕೀಯ ದೀಕ್ಷೆ ಕೊಟ್ಟರು.  ಇಡೀ ಕ್ಷೇತ್ರವನ್ನ ಬೆಳ್ಳಿತಟ್ಟೆಯಲ್ಲಿಟ್ಟು ಧಾರೆ ಎರೆದು ಕೊಟ್ಟರು.‌ ರೇವಣ್ಣರ ಬಗ್ಗೆ ಇದ್ದ ವಿಷವನ್ನ ಬಾಲಕೃಷ್ಣ ಹೊರಹಾಕಿದ್ದಾರೆ.‌ ರಾಜ್ಯಸಭಾ - ಎಂಎಲ್ಸಿ ಚುನಾವಣೆ ನಡೆಯುತ್ತಿದೆ,  ಈಗ ರೇವಣ್ಣರ ಇಮೇಜ್ ಕುಗ್ಗಿಸಲು ಸಂಚು ಮಾಡಿದ್ದಾರೆ.‌

ಕೆ.ಪಿ.ಸಿ.ಸಿ ಅಧ್ಯಕ್ಷರಿಗೆ ಇವರೇ ಪತ್ರ ಬರೆದು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಬಿಡಲು ಒಂದು ಕಾರಣ ಬೇಕಿದೆ, ಹಾಗಾಗಿ ಈ ಹುನ್ನಾರ ಮಾಡಿದ್ದಾರೆ. ರೇವಣ್ಣನವರು ಸ್ಪರ್ಧೆ ಮಾಡುವ ವಿಚಾರವನ್ನ ಅವರು ಹೇಳಿಲ್ಲ, ನಾನು ಅವರಿಗೆ ಸಪೋರ್ಟ್ ಮಾಡುವ ವಿಚಾರವೂ ಉದ್ಭವಿಸಲ್ಲ.  ರೇವಣ್ಣರ ಫೋಟೋ ವನ್ನ ಕೇವಲ ಆಫೀಸ್ ನಲ್ಲಿ ಇಟ್ಟಿಲ್ಲ, ನನ್ನ ಹೃದಯದ ಅಂತರಾಳದಲ್ಲಿ ಇಟ್ಟುಕೊಂಡಿದ್ದೇನೆ.

ಇದನ್ನೂ ಓದಿ: C M Ibrahim: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ: ಇಬ್ಬರು ಶಾಸಕರಿಗೆ ನೋಟಿಸ್- ಸಿ ಎಂ ಇಬ್ರಾಹಿಂ

ನನಗೆ ರೇವಣ್ಣನವರು ಗುರುಗಳ ಸ್ಥಾನದಲ್ಲಿದ್ದಾರೆ. ಬಾಲಕೃಷ್ಣ ಜೆಡಿಎಸ್ ನಲ್ಲಿದ್ದಾಗ ದೇವೇಗೌಡರನ್ನ, ಕುಮಾರಸ್ವಾಮಿರನ್ನ ನೆನೆಯಲಿಲ್ಲ, ಹಿಂದೆ ಬಿಜೆಪಿ ಯಲ್ಲಿದ್ದರು ಅಲ್ಲಿ ಸಹಾಯ ಮಾಡಿದವರನ್ನ ನೆನೆಯಲಿಲ್ಲ, ಈಗ ಕಾಂಗ್ರೆಸ್ ನಲ್ಲಿ ಯಾರಿಗೂ ಗೌರವ ಕೊಡಲ್ಲ, ಇದು ಪಕ್ಷದ ವರಿಷ್ಠರಿಗೂ ಗೊತ್ತಿದೆ.  ಇದು ಬಾಲಕೃಷ್ಣ ಗೆ ಇರುವ ಚಾಳಿ ಎಂದು ಕಿಡಿಕಾರಿದ್ದರು.‌
Published by:Divya D
First published: