ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ ಕುಲಕರ್ಣಿ ನ್ಯಾಯಾಂಗ ಬಂಧನ ವಿಸ್ತರಣೆ

ಭೀಮಾತೀರದಿಂದ ಹತ್ಯೆಗೆ ಕಂಟ್ರಿ ಪಿಸ್ತೂಲ್ ಪೂರೈಕೆ ಆರೋಪದಡಿ ನ್ಯಾಯಂಗ ಬಂಧನಲ್ಲಿರುವ ವಿನಯ ಸೋದರ ಮಾವ ಚಂದ್ರಶೇಖರ ಇಂಡಿಗೂ ನಿಯೋಜಿತ ನ್ಯಾಯಾಧೀಶರು ಜ.8ವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಿದೆ.

ಮಾಜಿ ಸಚಿವ ವಿನಯ್ ಕುಲಕರ್ಣಿ

ಮಾಜಿ ಸಚಿವ ವಿನಯ್ ಕುಲಕರ್ಣಿ

  • Share this:
ಧಾರವಾಡ (ಡಿ. 28):: ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾದ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ವಿನಯ ಸೋದರ ಮಾವ ಚಂದ್ರಶೇಖ ಇಂಡಿ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.  ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ಸಾಕ್ಷಿನಾಶ ಸೇರಿದಂತೆ ಕ್ರಿಮಿನಲ್ ಆರೋಪದಡಿ ವಿನಯ ಕುಲಕರ್ಣಿ ಹಾಗೂ ಹತ್ಯೆಗೆ ಶಸ್ತ್ರಾಸ್ತ್ರ ಪೂರೈಕೆ ಆರೋಪದಡಿ ವಿನಯ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿಗೆ ಹಿಂದೆ ನ್ಯಾಯಾಲಯವು ನ್ಯಾಯಾಂಗ ಬಂಧನದ ಆದೇಶ ನೀಡಿತ್ತು. ಡಿ. 7ರಂದು ವಿನಯ ಕುಲಕರ್ಣಿ ವಿಚಾರಣೆ ನ್ಯಾಯಾಲಯ ಡಿ. 21ಕ್ಕೆ ಹಾಗೂ ಡಿ. 21ರಿಂದ ಡಿ. 28ಕ್ಕೆ ಮುಂದೂಡಿತ್ತು. ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ವಿನಯಗೆ ಪುನಃ ಜ.8ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಲಾಗಿದೆ

ಭೀಮಾತೀರದಿಂದ ಹತ್ಯೆಗೆ ಕಂಟ್ರಿ ಪಿಸ್ತೂಲ್ ಪೂರೈಕೆ ಆರೋಪದಡಿ ನ್ಯಾಯಂಗ ಬಂಧನಲ್ಲಿರುವ ವಿನಯ ಸೋದರ ಮಾವ ಚಂದ್ರಶೇಖರ ಇಂಡಿಗೂ ನಿಯೋಜಿತ ನ್ಯಾಯಾಧೀಶರು ಜ.8ವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಿದೆ.

2016 ಜೂ.15 ರಂದು ಯೋಗೇಶಗೌಡನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ೨೦೧೬ರ ಸೆ.೯ರಂದು ರಾಜ್ಯ ಪೊಲೀಸರು ಆರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. 2019ರಲ್ಲಿ ಬಿಜೆಪಿ ಸರ್ಕಾರ ಪ್ರಕರಣ ಸಿಬಿಐಗೆ ವಹಿಸಿದ್ದರು

ಭೂಗತ ಪಾತಕಿ ಬಚ್ಚಾಖಾನ್ ಪೊಲೀಸರ ವಶಕ್ಕೆ

ಇದೇ ವೇಳೆ ಉದ್ಯಮಿಗಳಿಗೆ ಬೇದರಿಕೆ ಹಾಕಿದ ಆರೋಪದಡಿ ಭೂಗತ ಪಾತಕಿ ಬಚ್ಚಾಖಾನ್‌ನ್ನು ನಾಲ್ಕು ದಿನ ಉಪನಗರ ಠಾಣೆ ಪೊಲೀಸರ ವಶಕ್ಕೆ ನೀಡಿ, ಧಾರವಾಡದ ಪ್ರಧಾನ ಜಿಲ್ಲಾ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಜಿಲ್ಲೆಯ ವಿವಿಧ ಉದ್ಯಮಿಗಳಿಗೆ ಬೇದರಿಕೆ ಹಾಕಿದ ಆರೋಪದ ಮೇರೆಗೆ ಮೈಸೂರು ಕಾರಾಗೃಹದಿಂದ ಬಚ್ಚಾಖಾನ್ ಕರೆತಂದ ಉಪನಗರ ಠಾಣೆ ಪೊಲೀಸರು ನ್ಯಾಯಾಲಯದ ಎದುರಿಗೆ ಹಾಜರುಪಡಿಸಿದರು.

ಬಚ್ಚಾಖಾನ್ ಜೈಲಿನಲ್ಲಿ ಯಾರ ಜೊತೆಯೂ ಫೋನ್ ನಲ್ಲಿ ಮಾತನಾಡಿಲ್ಲ. ಹೀಗಾಗಿ ಅವರನ್ನು ಪೊಲೀಸರ ವಶಕ್ಕೆ ನೀಡದಂತೆ ಬಚ್ಚಾಖಾನ್ ಪರ ವಕೀಲರು ವಾದ ಮಂಡಿಸಿದರು.

ಇದನ್ನು ಓದಿ: ಕಾಂಗ್ರೆಸ್​​ಗೆ ಹಿನ್ನಡೆಯಾದ್ರೆ ಬಡವರಿಗೆ ಹಿನ್ನಡೆ; ಗಟ್ಟಿಯಾಗಿ ಧ್ವನಿ ಎತ್ತಿ: ಕಾರ್ಯಕರ್ತರಿಗೆ ಸಿದ್ಧರಾಮಯ್ಯ ಕರೆ

ಬಚ್ಚಾಖಾನ್ ಉದ್ಯಮಿಗಳಿಗೆ ಬೇದರಿಕೆ ಹಾಕಿದ್ದು ಸತ್ಯ. ವಿಚಾರಣೆಗೆ ನಾಲ್ಕು ದಿನ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಮನವಿ ಪುರಸ್ಕರಿಸಿದ ನ್ಯಾಯಾಲಯ ಡಿ.31ರವರೆಗೆ ಬಚ್ಚಾಖಾನ್‌ನ್ನು ಉಪನಗರ ಪೊಲೀಸರ ವಶಕ್ಕೆ ನೀಡಿ, ಡಿ.31ರ ಸಂಜೆ 5ಕ್ಕೆ ನ್ಯಾಯಾಲಯಕ್ಕೆ ಹಾಜರಪಡಿಸುವಂತೆ ಆದೇಶಿಸಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಬಚ್ಚಾಖಾನ್, ನನ್ನ ಹೆಸರಲ್ಲಿ ಯರ‍್ಯಾರೋ ಧಮ್ಕಿ ಹಾಕುತ್ತಿದ್ದಾರೆ. ಆದರೆ ಬೇದರಿಕೆ ಹಾಕಿದವರನ್ನು ಒಳಗೆ ಹಾಕಿ, ವಿಚಾರಣೆ ನಡೆಸುವ ಬದಲಿಗೆ ನನ್ನನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
Published by:Seema R
First published: