HOME » NEWS » State » EX MINISTER TIMMAPURA SAYS BJP NATIONAL LEADERS FINISH BS YEDIYURAPPA POLITICALLY MAK

ಅಂದು ಬಿಎಸ್​ವೈ ಅವರನ್ನು ಜೈಲಿಗೆ ಕಳಿಸಿದ ಸ್ವಪಕ್ಷದವರೇ ಇಂದು ರಾಜಕೀಯವಾಗಿ ಮುಗಿಸಲು ಮುಂದಾಗಿದ್ದಾರೆ; ತಿಮ್ಮಾಪುರ ವ್ಯಂಗ್ಯ!

ಪಾಪಾ ಆರ್​​ಎಸ್​ಎಸ್​ ಹಿನ್ನೆಲೆಯಿಂದ ಬಂದಿರುವ ಈಶ್ವರಪ್ಪನವರನ್ನು ಈಗಾಗಲೇ ಮೂಲೆಗುಂಪು ಮಾಡಲಾಗಿದೆ. ಅವರ ಮುಂದಿನ ಟಾರ್ಗೆಟ್ ಯಡಿಯೂರಪ್ಪನವರೇ ಆಗಿದ್ದು, ಈ ಅನೈತಿಕ ಸರ್ಕಾರದ ಆಯುಷ್ಯ ಹೆಚ್ಚು ದಿನ ಇಲ್ಲ ಎಂದು ತಿಮ್ಮಾಪುರ ಭವಿಷ್ಯ ನುಡಿದಿದ್ದಾರೆ.

MAshok Kumar | news18india
Updated:August 27, 2019, 12:29 PM IST
ಅಂದು ಬಿಎಸ್​ವೈ ಅವರನ್ನು ಜೈಲಿಗೆ ಕಳಿಸಿದ ಸ್ವಪಕ್ಷದವರೇ ಇಂದು ರಾಜಕೀಯವಾಗಿ ಮುಗಿಸಲು ಮುಂದಾಗಿದ್ದಾರೆ; ತಿಮ್ಮಾಪುರ ವ್ಯಂಗ್ಯ!
ಆರ್​.ಬಿ. ತಿಮ್ಮಾಪುರ
  • Share this:
ಬಾಗಲಕೋಟೆ (ಆಗಸ್ಟ್.27); ಸಿಎಂ ಆಗಿದ್ದಾಗ ಹಲವು ಹಗರಣಗಳಲ್ಲಿ ಸಿಲುಕಿ ಜೈಲು ಪಾಲಾಗಿದ್ದ ಯಡಿಯೂರಪ್ಪ 'ತಾನು ಜೈಲಿಗೆ ಹೋಗಲು ಸ್ವಪಕ್ಷೀಯರೇ ಕಾರಣ' ಎಂದು ಹೇಳಿದ್ದರು. ಆದರೆ, ಅಂದು ಬಿಎಸ್​ವೈ ಅವರನ್ನು ಜೈಲಿಗೆ ಕಳಿಸಿದ ಅದೇ ಜನ ಇಂದು ಅವರನ್ನು ರಾಜಕೀಯವಾಗಿ ಮುಗಿಸಲು ಬೇಕಾದ ಎಲ್ಲಾ ಸಿದ್ದತೆಯನ್ನೂ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ತಿಮ್ಮಾಪುರ ವ್ಯಂಗ್ಯವಾಡಿದ್ದಾರೆ.

ಜಮಖಂಡಿಯಲ್ಲಿ ಇಂದು ಪತ್ರಕರ್ತರ ಜೊತೆ ಮಾತನಾಡಿದ ಅವರು, “ಬಿಜೆಪಿ ಪಕ್ಷದಲ್ಲಿ ಪ್ರಸ್ತುತ ಯಡಿಯೂರಪ್ಪನವರ ಪರಿಸ್ಥಿತಿ ತುಂಬಾ ಕಷ್ಟದಲ್ಲಿದೆ. ಸ್ವಪಕ್ಷದವರೇ ಅವರಿಗೆ ತೊಂದರೆ ನೀಡುತ್ತಿದ್ದಾರೆ. ಮೊದಲು ತಾವು ಜೈಲಿಗೆ ಹೋಗಲು ಸ್ವಪಕ್ಷೀಯರೇ ಕಾರಣ ಎಂದು ಸ್ವತಃ ಯಡಿಯೂರಪ್ಪನವರೇ ಹೇಳಿಕೊಂಡಿದ್ದರು. ವಿಪರ್ಯಾಸ ಎಂದರೆ ಅವರನ್ನು ಮತ್ತೆ ಜೈಲಿಗೆ ಕಳುಹಿಸುವ ಹುನ್ನಾರ ಸ್ವಪಕ್ಷೀಯರಿಂದಲೇ ನಡೆಯುತ್ತಿದೆ. ಈ ಭಯ ಯಡಿಯೂರಪ್ಪನವರಿಗೂ ಇದೆ. ಈಗಾಗಲೇ ಸ್ವಪಕ್ಷದವರೇ ಹಳ್ಳ ತೊಡಿದ್ದು ಪಾಪ ಅವರ ಪರಿಸ್ಥಿತಿ ಎಲ್ಲಿಗೆ ಹೋಗಿ ಮುಟ್ಟತ್ತೋ ಗೊತ್ತಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಲು ಮೂವರಿಗೆ ಡಿಸಿಎಂ ಪಟ್ಟ; ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

“ನಾವ್ಯಾರು ಯಡಿಯೂರಪ್ಪನವರನ್ನು ತೆಗೆಯುವ ಕೆಲಸಕ್ಕೆ ಮುಂದಾಗಲ್ಲ. ಯಡಿಯೂರಪ್ಪನವರನ್ನು ತೆಗೆಯಲು ಸ್ವತಃ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಬಿ.ಎಲ್. ಸಂತೋಷ್​ಗೆ ಸುಪಾರಿ ಕೊಟ್ಟಿದ್ದಾರೆ. ಬಿ.ಎಲ್. ಸಂತೋಷ್ ಸಹ ಸೂಪರ್ ಹೀರೋ ತರ ಯಡಿಯೂರಪ್ಪನವರನ್ನು ತೆಗೆಯಲು ಏನು ಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ.

ಪಾಪಾ ಆರ್​​ಎಸ್​ಎಸ್​ ಹಿನ್ನೆಲೆಯಿಂದ ಬಂದಿರುವ ಈಶ್ವರಪ್ಪನವರನ್ನು ಈಗಾಗಲೇ ಮೂಲೆಗುಂಪು ಮಾಡಲಾಗಿದೆ. ಅವರ ಮುಂದಿನ ಟಾರ್ಗೆಟ್ ಯಡಿಯೂರಪ್ಪನವರೇ ಆಗಿದ್ದು, ಈ ಅನೈತಿಕ ಸರ್ಕಾರದ ಆಯುಷ್ಯ ಹೆಚ್ಚು ದಿನ ಇಲ್ಲ” ಎಂದು ತಿಮ್ಮಾಪುರ ಭವಿಷ್ಯ ನುಡಿದಿದ್ದಾರೆ.

ಇದೇ ಸಂದರ್ಭದಲ್ಲಿ ಯಡಿಯೂರಪ್ಪನವರಿಗೆ ಸವಾಲು ಹಾಕಿರುವ ಅವರು, "ಯಡಿಯೂರಪ್ಪನವರು ಹೈಕಮಾಂಡ್​ ಹೇಳಿದಂತೆ ಕೇಳಿಕೊಂಡು ಎಷ್ಟು ದಿನ ಅಧಿಕಾರ ನಡೆಸಲು ಸಾಧ್ಯ. ಅವರಿಗೆ ಶಕ್ತಿ ಇದ್ದರೆ ಹೈಕಮಾಂಡ್ ಅನ್ನು ಧಿಕ್ಕರಿಸಿ ಸ್ವತಂತ್ರ್ಯರಾಗಿ ಅಧಿಕಾರ ನಡೆಸಲಿ. ಇಲ್ಲದಿದ್ದರೆ ಅವರು ಸಿಎಂ ಸ್ಥಾನದಲ್ಲಿ ಇದ್ದರೂ ಉಪಯೋಗವಿಲ್ಲದಂತೆ" ಎಂದಿದ್ದಾರೆ.

(ವರದಿ - ರಾಚಪ್ಪ ಬನ್ನಿದಿನ್ನಿ)ಇದನ್ನೂ ಓದಿ : ಅನರ್ಹ ಶಾಸಕರ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್​ ಒಪ್ಪಿಗೆ

First published: August 27, 2019, 12:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading