ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ ಮಾಜಿ ಸಚಿವರ ಪುತ್ರ; ಡ್ರಗ್ ಪೂರೈಕೆ ಪ್ರಕರಣದಲ್ಲಿ ಮತ್ತೋರ್ವನ ಬಂಧನ

ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದ ಆರೋಪಿ ಆದಿತ್ಯ ಆಳ್ವ ಜೈಲು ಸೇರಿದ್ದು, ಜೈಲು ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೂಚಿಸಲಾಗಿದೆ. ಕೊರೋನಾ ನೆಗೆಟಿವ್ ರಿಪೋರ್ಟ್ ಹಿನ್ನಲೆಯಲ್ಲಿ ಹಾಗು ಅನಾರೋಗ್ಯದ ಹಿನ್ನಲೆ ಜೈಲಿನ ಹಾಸ್ಪಿಟಲ್ ವಾರ್ಡ್ ಗೆ ಶಿಫ್ಟ್​ ಮಾಡಲಾಗಿದೆ. ಚಿಕಿತ್ಸೆ ಬಳಿಕ ಬ್ಯಾರಕ್ ಗೆ ಶಿಫ್ಟ್​ ಮಾಡಲಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದ ತನಿಖೆಯನ್ನು ಸಿಸಿಬಿ ಚುರುಕುಗೊಳಿಸಿದೆ. ಈ ನಡುವೆ ಪ್ರಮುಖ ಆರೋಪಿಗಳಿಗೆ ಡಗ್ಸ್ ಪೂರೈಕೆ ಮಾಡ್ತಿದ್ದ ಫೆಡ್ಲರ್ ಗಳಿಗೂ ಬಿಸಿ ಮುಟ್ಟಿಸಲಾಗುತ್ತಿದೆ. ಲೂಮ್ ಪೆಪ್ಪರ್, ಬೆನಾಲ್ಡ್ ಅಲ್ಲದೇ ಮತ್ತೊಬ್ಬ ಪೆಡ್ಲರ್​ ಈಗ ಅಂದರ್ ಆಗಿದ್ದಾನೆ. ಈ ನಡುವೆ ವಿರೇನ್ ಖನ್ನಾ ಶಿಷ್ಯನನ್ನು ಮತ್ತೆ ಬಾಡಿವಾರೆಂಟ್ ಪಡೆಯಲಾಗಿದೆ. ಹೌದು ಆದಿತ್ಯಾ ಆಳ್ವ ಬಂಧನ ಬೆನ್ನಲ್ಲೇ ಫೆಡ್ಲರ್ ಗಳಿಗೆ ಬಿಸಿ ಮುಟ್ಟಿಸಲು ಸಿಸಿಬಿ ಮುಂದಾಗಿದೆ. ಈ ನಡುವೆ ಹಲವು ಪಾರ್ಟಿಗಳಿಗೆ ಡ್ರಗ್ ಪೂರೈಕೆ ಮಾಡಿದ್ದ ವಿದೇಶಿ ಪ್ರಜೆ ಚಿಡಿಬೈರ್ ಆ್ಯಮರೋಸ್ ಎಂಬಾತನನ್ನು ಸಿಸಿಬಿ ಖೆಡ್ಡಾಗೆ ಬೀಳಿಸಿದೆ.

ಪ್ರಕರಣದ 21 ಆರೋಪಿಯಾದ ಆ್ಯಮರೋಸ್, ಲೂಮ್ ಪೆಪ್ಪರ್ ಹಾಗೂ ಬೊನಾಲ್ಡ್ ಜೊತೆಗೆ ಸೇರಿ  ಡ್ರಗ್ ಸಪ್ಲೇ ಮಾಡುತ್ತಿದ್ದ. ಕೆಲ ಪ್ರತಿಷ್ಠಿತ ಹೋಟೆಲ್ ಪಾರ್ಟಿಗಳಿಗೆ ಡ್ರಗ್ ಸಪ್ಲೈ ಮಾಡಿ  ಹಣ ಪಡೀತಿದ್ದ. ಪ್ರಕರಣ ಬೆಳಕಿಗೆ ಬಂದ ಬಳಿಕ ತಂಗುದಾಣ ಬದಲಿಸಿದ್ದರೂ ಕಸಬು ಬಿಟ್ಟಿರಲಿಲ್ಲ. ಕಳೆದ ಎರಡು ದಿನಗಳ ಹಿಂದೆ ಖಚಿತ ಮಾಹಿತಿ ಪಡೆದು ಹೆಣ್ಣೂರಿನ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದರು. ರೇಡ್ ವೇಳೆ 10 ಗ್ರಾಂ ನಷ್ಟು ಎಸ್​ಎಸ್​ಡಿ  ಡ್ರಗ್ಸ್ ಪತ್ತೆಯಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನು ಓದಿ: Crime News: ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ; ಗರ್ಭಪಾತ ಮಾಡಿಸುವಂತೆ ಒತ್ತಾಯ

ಸದ್ಯ ಆರೋಪಿಯನ್ನ ವಿಚಾರಣೆ ಮಾಡಲಾಗ್ತಿದ್ದು, ಲೂಮ್ ಪೆಪ್ಪರ್ ಗೆ ಸಬ್ ಫೆಡ್ಲರ್ ಆಗಿ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಅಲ್ಲದೇ ಸೆಲಬ್ರೆಟಿಗಳ ಪಾರ್ಟಿಗಳಿಗೆ ಡ್ರಗ್ಸ್ ಪೂರೈಸಿ ಕಮಿಷನ್ ಪಡೀತಿದ್ದ. ಎಮ್ ಡಿಎಂಎ, ಕೊಕೈನ್, ಎಲ್ ಎಸ್ ಡಿ ಡ್ರಗ್ಸ್ ಪೂರೈಕೆ ಮಾಡೋದ್ರಲ್ಲಿ ಆ್ಯಮರೋಸ್ ಎಕ್ಸ್ ಪರ್ಟ್ ಆಗಿದ್ದ. ಸದ್ಯ ವಿಚಾರಣೆ ನಡೀತಿದ್ದು, ಇನ್ನು ಕೆಲವರ ಹೆಸರು ಹೊರಬೀಳುವ ಸಾಧ್ಯತೆ ಇದೆ. ಮತ್ತೊಂದು ಕಡೆ ಅರೋಪಿ  ಆದಿತ್ಯ ಅಗರ್ವಾಲ್​ನನ್ನು ಜನವರಿ 22ರವರೆಗೆ ಸಿಸಿಬಿ ಕಸ್ಟಡಿಗೆ ಪಡೆದಿದೆ.

ವಿರೇನ್ ಖನ್ನ ಅತ್ಮೀಯನಾಗಿರೋ ಆದಿತ್ಯ ಅಗರ್ವಾಲ್, ಬಾಣಸವಾಡಿ ಡ್ರಗ್ಸ್ ಕೇಸ್ ನಲ್ಲಿ  ಅರೆಸ್ಟ್ ಆಗಿದ್ದ. ಸದ್ಯ ಈಗ ಅಗರ್ವಾಲ್ ನನ್ನು ಕಾಟನ್ ಪೇಟೆ ಡ್ರಗ್ಸ್ ಕೇಸ್ ನಲ್ಲಿ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲಾಗಿದೆ. ಆದಿತ್ಯಾ ಅಗರ್ ವಾಲ್ ಮತ್ತು ಆದಿತ್ಯಾ ಆಳ್ವನ ಜೊತೆ ಪಾರ್ಟಿಗಳ ವ್ಯವಹಾರದ ನಂಟಿನ ಸಾಧ್ಯತೆ ಹಿನ್ನಲೆ ವಿಚಾರಣೆ ನಡೆಸಲಾಗ್ತಿದೆ. ಇದರ ಬೆನ್ನಲ್ಲೇ  ಸೋಮವಾರ ಆದಿತ್ಯಾ ಆಳ್ವ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದಾನೆ. ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನಲೆಯಲ್ಲಿ ಸೋಮವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.

ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದ ಆರೋಪಿ ಆದಿತ್ಯ ಆಳ್ವ ಜೈಲು ಸೇರಿದ್ದು, ಜೈಲು ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೂಚಿಸಲಾಗಿದೆ. ಕೊರೋನಾ ನೆಗೆಟಿವ್ ರಿಪೋರ್ಟ್ ಹಿನ್ನಲೆಯಲ್ಲಿ ಹಾಗು ಅನಾರೋಗ್ಯದ ಹಿನ್ನಲೆ ಜೈಲಿನ ಹಾಸ್ಪಿಟಲ್ ವಾರ್ಡ್ ಗೆ ಶಿಫ್ಟ್​ ಮಾಡಲಾಗಿದೆ. ಚಿಕಿತ್ಸೆ ಬಳಿಕ ಬ್ಯಾರಕ್ ಗೆ ಶಿಫ್ಟ್​ ಮಾಡಲಿದ್ದಾರೆ.
Published by:HR Ramesh
First published: