ಮೈಸೂರು ಮೈಮುಲ್‌ನಲ್ಲಿ ನೇಮಕಾತಿ ಅಕ್ರಮ; ಹೋರಾಟದ ಎಚ್ಚರಿಕೆ ನೀಡಿರುವ ಸಾರಾ ಮಹೇಶ್

Mysore Mymul News: ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಆಡಿಯೋ ಸಾಕ್ಷಿ ಕೊಟ್ಟಿದ್ದೇವೆ. ಕನಿಷ್ಠ ಆ ಆಡಿಯೋಗಳು ಸತ್ಯವೇ? ಅಥವಾ ಸುಳ್ಳಾ? ಎಂಬುದು ತನಿಖೆ ಮಾಡಿಸಲಿ. ಆ ಆಡಿಯೋದಲ್ಲಿ ಇರೋದು ಸುಳ್ಳಾದ್ರೆ ನಾನು ಬಹಿರಂಗವಾಗಿ ಕ್ಷಮೆ ಕೇಳ್ತಿನಿ ಎಂದೂ ಸಾರಾ ಮಹೇಶ್‌ ಹೇಳಿದ್ದಾರೆ.

ಮಾಜಿ ಸಚಿವ ಸಾ.ರಾ. ಮಹೇಶ್​

ಮಾಜಿ ಸಚಿವ ಸಾ.ರಾ. ಮಹೇಶ್​

  • Share this:
ಮೈಸೂರು; ಪ್ರತಿಷ್ಠಿತ ಮಿಲ್ಕ್‌ ಯೂನಿಯನ್ ಲಿಮಿಟೆಡ್‌ (MYMUl) ನೇಮಕಾತಿಯಲ್ಲಿ ಅಕ್ರಮ ಆರೋಪ ಮಾಡಿರುವ ಮಾಜಿ ಸಚಿವ ಸಾರಾ ಮಹೇಶ್‌ ಮತ್ತೊಮ್ಮೆ ನೇಮಕಾತಿ ಪ್ರಕ್ರಿಯೆ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಉದ್ಯೋಗಾಂಕ್ಷಿಗಳಿಗೆ ಸಂದರ್ಶನ ಆರಂಭವಾದರೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು  ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿರುವ ಶಾಸಕ ಸಾ.ರಾ.ಮಹೇಶ್, "‌ಮೈಮುಲ್‌ನಲ್ಲಿ ಅಕ್ರಮ ನಡೆದಿಲ್ಲ ಎಂಬುದು ನಿಜವಾಗಿದ್ದರೆ, ಪರೀಕ್ಷೆಯ  ಓಎಂಆರ್ ಬಿಡುಗಡೆ ಮಾಡಿ.  ಪರೀಕ್ಷೆ ನಡೆಸಿದ ನಂತರ ಕೀ ಅನ್ಸರ್ ಬಿಡುಗಡೆ ಮಾಡಿ. ಇದ್ಯಾವುದನ್ನೂ ಮಾಡದೆ ಅಕ್ರಮ ನಡೆದಿಲ್ಲ ಅಂತ ಮಾತನಾಡವುದು ಸರಿಯಲ್ಲ.

ಮೈಮುಲ್ ಅಕ್ರಮಕ್ಕೆ ಸಂಬಂಧಿಸಿದಂತೆ ನಾವು ನಾಲ್ಕು ಹಂತದಲ್ಲಿ ಹೋರಾಟ ಮಾಡಿದ್ದೇವೆ. ಮೊದಲು ಸದನದ ಒಳಗೆ ಹೋರಾಟ ಮಾಡಿದ್ದೇವೆ. ನಂತರ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದೇವೆ. ಇದೀಗ ಮಾಧ್ಯಮಗಳ ಮೂಲಕ ಈ ಅಕ್ರಮವನ್ನು ಜನರ ಮುಂದೆ ಇಡಲು ನಾವು ಮುಂದಾಗಿದ್ದೇವೆ. ಸರ್ಕಾರ ಇದ್ಯಾವುದಕ್ಕೂ ಮಣಿಯದಿದ್ದರೆ, ಬೀದಿಗಿಳಿದು ಹೋರಾಟ ನಡೆಸುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.

ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಆಡಿಯೋ ಸಾಕ್ಷಿ ಕೊಟ್ಟಿದ್ದೇವೆ. ಕನಿಷ್ಠ ಆ ಆಡಿಯೋಗಳು ಸತ್ಯವೇ? ಅಥವಾ ಸುಳ್ಳಾ? ಎಂಬುದು ತನಿಖೆ ಮಾಡಿಸಲಿ. ಆ ಆಡಿಯೋದಲ್ಲಿ ಇರೋದು ಸುಳ್ಳಾದ್ರೆ ನಾನು ಬಹಿರಂಗವಾಗಿ ಕ್ಷಮೆ ಕೇಳ್ತಿನಿ ಎಂದೂ ಸಾರಾ ಮಹೇಶ್‌ ಹೇಳಿದ್ದಾರೆ.

ಇದನ್ನೂ ಓದಿ : ಚೀನಾದಿಂದ ತೈವಾನ್‌ ಬೇರ್ಪಡಿಸುವ ಯಾವ ಪ್ರಯತ್ನವನ್ನು ನಾವು ಸಹಿಸುವುದಿಲ್ಲ; ಗುಡುಗಿದ ಡ್ಯ್ರಾಗನ್ ರಾಷ್ಟ್ರ
First published: