Drugs Case: ಮಾಜಿ ಸಚಿವರ ಮಗ ದರ್ಶನ್ ಲಮಾಣಿ ನ್ಯಾಯಾಂಗ ಬಂಧನಕ್ಕೆ

ಆರೋಪಿಗಳ ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನಲೆ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು.

news18-kannada
Updated:November 21, 2020, 8:50 PM IST
Drugs Case: ಮಾಜಿ ಸಚಿವರ ಮಗ ದರ್ಶನ್ ಲಮಾಣಿ ನ್ಯಾಯಾಂಗ ಬಂಧನಕ್ಕೆ
ದರ್ಶನ್​ ಲಮಾಣಿ
  • Share this:
ಬೆಂಗಳೂರು (ನ.21): ಡ್ರಗ್ಸ್​ ಪ್ರಕರಣದ ಅಡಿ ಸಿಸಿಬಿ ಪೊಲೀಸರ ಬಂಧನದಲ್ಲಿರುವ ಮಾಜಿ ಸಚಿವ ರುದ್ರಪ್ಪ ಲಮಾಣಿ ಮಗ ದರ್ಶನ್​ ಲಮಾಣಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆರೋಪಿಗಳ ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನಲೆ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ದರ್ಶನ್​ ಸೇರಿ 7 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ 1ನೇ ಎಸಿಎಂಎಂ ನ್ಯಾಯಾಲಯದಿಂದ ಆದೇಶಿಸಿದೆ. ಡ್ರಗ್ ಪೆಡ್ಲರ್ ಗಳಿಗೆ ನೆರವು ನೀಡಿದ ಆರೋಪಗಳಿಗೆ ಸಹಕಾರ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ದರ್ಶನ್ ಲಮಾಣಿಗೆ ಸಿಸಿಬಿ ತೀವ್ರ ವಿಚಾರಣೆ ನಡೆಸಿತ್ತು.  ನವೆಂಬರ್ 4 ರಂದು ಡಾರ್ಕ್ ನೆಟ್ ವೆಬ್ ಮೂಲಕ ನಗರಕ್ಕೆ ಹೈಡ್ರೋ ಗಾಂಜಾ ತರಿಸಿದ್ದ ಸುಜಯ್ ಸುನೀಶ್ ಮತ್ತು ಹೇಮಂತ್ ಅದನ್ನ ಚಾಮರಾಜಪೇಟೆಯ ಫಾರಿನ್ ಪೋಸ್ಟ್ ಆಫೀಸ್ ನಲ್ಲಿ ತೆಗೆದುಕೊಳ್ಳಲು ಪ್ರಯತ್ನ ನಡೆಸಿದ್ದರು. ಆದರೆ ಈ ವೇಳೆ ಸುನೀಶ್ ಮತ್ತು ಹೇಮಂತ್ ಪರಾರಿಯಾಗಿ ಗೋವಾ ಸೇರಿದ್ದು, ಸುಜಯ್ ಪೊಲೀಸರ ಬಲೆಗೆ ಬಿದ್ದಿದ್ದ. ಪ್ರಕರಣದಲ್ಲಿ ಆರೋಪಗಳಿಗೆ ಆಶ್ರಯ ನೀಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು ದರ್ಶನ್ ಲಮಾಣಿಯನ್ನ ಬಂಧಿಸಿದ್ದರು.

ಡಾರ್ಕ್ ನೆಟ್ ಮೂಲಕ ಹೈಡ್ರೋ ಗಾಂಜಾ ಸರಬರಾಜು ಮಾಡಲು ಮುಂದಾಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ಸುಜಯ್ ಆಂಡ್ ಗ್ಯಾಂಗ್ ನ ಕೇಸ್ ಸಿಸಿಬಿಗೆ ವರ್ಗಾವಣೆಯಾಗಿದೆ. ಈ‌ ಹಿಂದೆ ಕೆಂಪೇಗೌಡ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಆದರೆ ಪ್ರಕರಣ ಗಂಭೀರ ಸ್ವರೂಪವಾಗಿದ್ದು ಹೆಚ್ಚಿನ ತನಿಖೆ ಸಲುವಾಗಿ ಸಿಸಿಬಿ ತನಿಖೆಗೆ ವಹಿಸಲಾಗಿದೆ. ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ, ಸುಜಯ್, ಸುನೀಶ್, ಹೇಮಂತ್ ಸೇರಿ ಎಲ್ಲ 8 ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಪ್ರಕರಣದ ವಿಸ್ತೃತ ತನಿಖೆ ಹಾಗೂ ಆರೋಪಿಗಳ ಹೆಚ್ಚಿನ ವಿಚಾರಣೆ ಸಲುವಾಗಿ ಸಿಸಿಬಿ ಪೊಲೀಸರು ಪ್ರಕರಣ ಕೈಗೆತ್ತಿಕೊಂಡಿದ್ದರು.

ಇದನ್ನು ಓದಿ: Rashmika: 2020ರ ನ್ಯಾಷನಲ್​ ಕ್ರಶ್​ ಆದ ರಶ್ಮಿಕಾ ಮಂದಣ್ಣ; ಗೂಗಲ್​ನಲ್ಲಿ ಕೊಡಗಿನ ಕುವರಿ ಹವಾ

ಮಗ ಬಂಧನವಾಗುತ್ತಿದ್ದಂತೆ ಕಳವಳ ವ್ಯಕ್ತಪಡಿಸಿ ಮಾತನಾಡಿದ ಮಾಜಿ ಸಚಿವರು ತಮ್ಮ ಮಗನ ನಡುವಳಿಕೆಯಲ್ಲಿ ನಮಗೆ ಯಾವುದೇ ಅನುಮಾನ ಬಂದಿರಲಿಲ್ಲ. ಆತ ರಾಣೆಬೆನ್ನೂರಿನ ಮನೆಯಲ್ಲಿ ಹೆಚ್ಚಾಗಿ ಇರುತ್ತಿದ್ದ. ಆಗಾಗ್ಗ ಬೆಂಗಳೂರಿಗೆ ಬರುತ್ತಿದ್ದ. ಹೀಗಾಗಿ ಆತನ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಪಾರ್ಸೆಲ್​ ಬಂದಿದೆ ಎಂದು ಬೆಂಗಳೂರಿಗೆ ಬಂದಿದ್ದ. ಈ ವೇಳೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಟಿಬಿ ಮೂಲಕವೇ ಆತನ ಬಂಧನ ವಿಚಾರ ನನಗೆ ತಿಳಿಯಿತು. ಪ್ರಕರಣ ಕುರಿತು ಪೊಲೀಸರನ್ನು ಸಂಪರ್ಕಿಸಿಲ್ಲ. ಪೊಲೀಸರ ತನಿಖೆಗೆ ಸಂಪೂರ್ಣ ತನಿಖೆ ನೀಡುತ್ತೇನೆ ಎಂದಿದ್ದಾರೆ.

ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ‌ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಮಗ ಬಿನೇಶ್​ ಕೂಡ ಇಡಿ ವಶದಲ್ಲಿದ್ದಾರೆ. ಡ್ರಗ್ಸ್​ ಪೆಡ್ಲರ್​ ಅನೂಪ್​ರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಇವರನ್ನು ವಿಚಾರಣೆ ನಡೆಸಲಾಗಿದೆ
Published by: Seema R
First published: November 21, 2020, 8:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading