• Home
  • »
  • News
  • »
  • state
  • »
  • ಜಮೀರ್‌ 420, ಗುಜರಿ ವ್ಯಾಪಾರ ಮಾಡಿ ರಾಜಕಾರಣದಲ್ಲಿ ನಾಟಕ‌ ಮಾಡ್ತಿದ್ದಾನೆ; ರೇಣುಕಾಚಾರ್ಯ ಕಿಡಿ

ಜಮೀರ್‌ 420, ಗುಜರಿ ವ್ಯಾಪಾರ ಮಾಡಿ ರಾಜಕಾರಣದಲ್ಲಿ ನಾಟಕ‌ ಮಾಡ್ತಿದ್ದಾನೆ; ರೇಣುಕಾಚಾರ್ಯ ಕಿಡಿ

ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ

ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ

ಶಾಸಕ ಜಮೀರ್‌ ಅಹಮದ್‌ ಪಾದರಾಯನಪುರ ಗಲಾಟೆಯಲ್ಲಿ ಬಂಧಿಸಲ್ಪಟ್ಟ ಆರೋಪಿಗಳ ಜಾಮೀನಿಗೆ ಸಹಕರಿಸಿದ್ದಾರೆ. ಅಲ್ಲದೆ, ಬಿಡುಗಡೆಗೊಂಡವರನ್ನು ಇಂದು ಪಾದರಾಯನಪುರದಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ.

  • Share this:

ಬೆಂಗಳೂರು (ಜೂನ್‌ 03); ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಓರ್ವ 420, ಗುಜರಿ ವ್ಯಾಪಾರ ಮಾಡಿ ಇದೀಗ ರಾಜಕಾರಣದಲ್ಲಿ ನಾಟಕ ಮಾಡುತ್ತಿದ್ದಾನೆ ಎಂದು ಮಾಜಿ ಸಚಿವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಏಕ ವಚನದಲ್ಲಿ ದಾಳಿ ನಡೆಸಿದ್ದಾರೆ.


ಶಾಸಕ ಜಮೀರ್‌ ಅಹಮದ್‌ ಪಾದರಾಯನಪುರ ಗಲಾಟೆಯಲ್ಲಿ ಬಂಧಿಸಲ್ಪಟ್ಟ ಆರೋಪಿಗಳ ಜಾಮೀನಿಗೆ ಸಹಕರಿಸಿದ್ದಾರೆ. ಅಲ್ಲದೆ, ಬಿಡುಗಡೆಗೊಂಡವರನ್ನು ಇಂದು ಪಾದರಾಯನಪುರದಲ್ಲಿ ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ.


ಈ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, " ಪಾದರಾಯನಪುರ ಗೂಂಡಾಗಳಿಗೆ ಜಮೀರ ಅಹಮ್ಮದ್ ಬೆಂಬಲ ಕೊಡುತ್ತಿದ್ದಾರೆದ. ಜಮೀರ್ ಅಹಮ್ಮದ್ ಶಾಸಕರಾಗಲು ನಾಲಾಯಕ್. ಅವರು ಜನರನ್ನ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆತ ಪಕ್ಕಾ 420. ಗುಜರಿ ವ್ಯಾಪಾರ ಮಾಡಿ ಈಗ ರಾಜಕಾರಣದಲ್ಲಿ ನಾಟಕ ಮಾಡುತ್ತಿದ್ದಾನೆ.


ಜಮೀರ್ ಅರೆ ದಡ್ಡ, ಬುದ್ದಿವಂತ ಅಲ್ಲ.‌ ದೇಶದ್ರೋಹಿಗಳನ್ನ ಪುಂಡರನ್ನ ರಕ್ಷಿಸೋ ಕೆಲಸ ಮಾಡ್ತಿದ್ದಾನೆ. ಹಿಂದೆ ನಡೆದ ಘಟನೆಗೂ ನೇರವಾಗಿ ಜಮೀರ ಅಹಮದ್‌ ಅವರೇ ಕಾರಣ. ಹೀಗಾಗಿ ಜಮೀರ ಅಹಮ್ಮದರನ್ನು ಶಾಸಕ ಸ್ಥಾನದಿಂದ ವಜಾ ಮಾಡಲಿ. ನಾನು ಸಿಎಂ ಭೇಟಿ ಮಾಡಿ ಮನವಿ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.


ಇದನ್ನೂ ಓದಿ : ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಅಥವಾ ದೇವೇಗೌಡ; ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವೇನು?

Published by:MAshok Kumar
First published: