ಹುಲಿ ಬಂತು ಹುಲಿ ಕಥೆ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ಎಂಬ ನಾಟಕ; ಅನುಮಾನಕ್ಕೊಳಗಾದ ಸರದಾರನ ನಡೆ!

ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಎಂಬುದು ಮಾತ್ರ ಹಲವಾರು ಗೊಂದಲಗಳ ಗೂಡಾಗಿ ಪರಿಣಮಿಸಿದೆ. ಅಲ್ಲದೆ, ಮಾಜಿ ಸಚಿವರು ರಾಜೀನಾಮೆ ಮೂಲಕ ಮತ್ತೊಂದು ಸುತ್ತಿನ ನಾಟಕಕ್ಕೆ ಅಣಿಯಾಗಿದ್ದಾರ? ಮೈತ್ರಿ ನಾಯಕರ ಬೆವರಿಳಿಸಲು ಹೀಗೆ ರಾಜೀನಾಮೆ ರೂಪದಲ್ಲಿ ಮತ್ತೊಂದು ನಾಟಕ ಪರ್ವ ಶುರು ಮಾಡಿದ್ದಾರ? ಹೀಗೆ ಹತ್ತಾರು ಪ್ರಶ್ನೆಗಳು ಅವರ ರಾಜೀನಾಮೆ ಬೆನ್ನಿಗೆ ಹುಟ್ಟಿಕೊಂಡಿದೆ.

MAshok Kumar | news18
Updated:July 2, 2019, 2:31 PM IST
ಹುಲಿ ಬಂತು ಹುಲಿ ಕಥೆ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ಎಂಬ ನಾಟಕ; ಅನುಮಾನಕ್ಕೊಳಗಾದ ಸರದಾರನ ನಡೆ!
ರಮೇಶ್ ಜಾರಕಿಹೊಳಿ
  • News18
  • Last Updated: July 2, 2019, 2:31 PM IST
  • Share this:
ರಾಜ್ಯ ರಾಜಕೀಯದಲ್ಲಿ ಸೋಮವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯ ನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿದ್ದರು.

ಶಾಸಕ ಆನಂದ್ ಸಿಂಗ್ ಸ್ವತಃ ಸಭಾಪತಿಯ ಕಚೇರಿಗೆ ಬಂದು ಮುಖತಃ ರಾಜೀನಾಮೆ ಸಲ್ಲಿಸಿ ತೆರಳಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಇಂದು ಮಧ್ಯಾಹ್ನ ತಮ್ಮ ಕಚೇರಿಗೆ ಆಗಮಿಸಿ ಆನಂದ್ ಸಿಂಗ್ ಅವರ ರಾಜೀನಾಮೆ ಪತ್ರವನ್ನು ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೆ, ಅವಶ್ಯಕತೆ ಇದ್ದರೆ ಮತ್ತೊಮ್ಮೆ ಅವರನ್ನು ಕರೆಸಿ ವಿವರಣೆ ಕೇಳುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಒಟ್ಟಲ್ಲಿ ಆನಂದ್ ಸಿಂಗ್ ರಾಜೀನಾಮೆ ಸ್ಪೀಕರ್ ಕಚೇರಿ ತಲುಪಿರುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ.

ಆದರೆ, ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಎಂಬುದು ಮಾತ್ರ ಹಲವಾರು ಗೊಂದಲಗಳ ಗೂಡಾಗಿ ಪರಿಣಮಿಸಿದೆ. ಅಲ್ಲದೆ, ಮಾಜಿ ಸಚಿವರು ರಾಜೀನಾಮೆ ಮೂಲಕ ಮತ್ತೊಂದು ಸುತ್ತಿನ ನಾಟಕಕ್ಕೆ ಅಣಿಯಾಗಿದ್ದಾರ? ಮೈತ್ರಿ ನಾಯಕರ ಬೆವರಿಳಿಸಲು, ಭಯ ಹುಟ್ಟಿಸಲು ಹೀಗೆ ರಾಜೀನಾಮೆ ರೂಪದಲ್ಲಿ ಮತ್ತೊಂದು ಮತ್ತೊಂದು ನಾಟಕ ಪರ್ವ ಶುರು ಮಾಡಿದ್ದಾರ?  ಅವರ ರಾಜೀನಾಮೆ ಎಂಬುದು ಎಂದಿನಂತೆ ಹುಲಿ ಬಂತು ಹಲಿ ಕಥೆಯಾ? ಹೀಗೆ ಹತ್ತಾರು ಪ್ರಶ್ನೆಗಳು ಅವರ ರಾಜೀನಾಮೆ ಬೆನ್ನಿಗೆ ಹುಟ್ಟಿಕೊಂಡಿದೆ.

ಇದನ್ನೂ ಓದಿ : ಕಾಂಗ್ರೆಸ್​ ಶಾಸಕರ ರಾಜೀನಾಮೆ ಹಿಂದೆ ಮೋದಿ-ಅಮಿತ್​ ಶಾ ಇಲ್ಲ; ಬಿಜೆಪಿ ಪರ ಸಚಿವ ಜಿಟಿಡಿ ಭರ್ಜರಿ ಬ್ಯಾಟಿಂಗ್​​

ರಮೇಶ್ ಜಾರಕಿಹೊಳಿ ರಾಜೀನಾಮೆ  ನಾಟಕ;

ಅಸಲಿಗೆ ಸೋಮವಾರ ಆನಂದ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಹಸ್ತಾಕ್ಷರಗಳಲ್ಲೇ ಬರೆಯಲಾಗಿದ್ದ ರಾಜೀನಾಮೆ ಪತ್ರ ನಂತರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದು ಸುಳ್ಳಲ್ಲ. ಈ ಪತ್ರವನ್ನು ಫ್ಯಾಕ್ಸ್ ಮೂಲಕ ಸ್ಪೀಕರ್ ಕಚೇರಿಗೆ ತಲುಪಿಸಲಾಗಿದೆ ಎಂದು ಹೇಳಲಾಗಿತ್ತಾದರೂ, ಈವರೆಗೆ ಸ್ಪೀಕರ್ ಹಾಗೂ ವಿಧಾಸಭಾ ಕಾರ್ಯದರ್ಶಿ ಕಚೇರಿಗೆ ಈ ರಾಜೀನಾಮೆ ಪತ್ರ ಬಂದಿಲ್ಲ ಎನ್ನಲಾಗುತ್ತಿದೆ.

ಹೀಗಾಗಿ ರಾಜೀನಾಮೆ ಕುರಿತು ರಮೇಶ್ ಮತ್ತೊಮ್ಮೆ ಹೊಸ ನಾಟಕ ಶುರು ಮಾಡಿದ್ದಾರ? ಎಂಬ ಅನುಮಾನ ಹುಟ್ಟಿಕೊಂಡಿದೆ. ಇದಕ್ಕೆ ಕಾರಣಗಳೂ ಇಲ್ಲದೆ ಏನಿಲ್ಲ.ಈ ಹಿಂದೆ ಮೈತ್ರಿ ಸರ್ಕಾರದ ಮೊದಲ ಸಂಪುಟ ವಿಸ್ತರಣೆ ಸಂದರ್ಭದಲ್ಲೇ ರಮೇಶ್ ಜಾರಕಿಹೊಳಿಯನ್ನು ಸಂಪುಟದಿಂದ ಕೈಬಿಡಲಾಗಿತ್ತು. ಹೀಗಾಗಿ ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದ ಅವರು, ಚಿಂಚೋಳಿ ಶಾಸಕ ಉಮೇಶ್ ಜಾಧವ್ ಸೇರಿದಂತೆ ನಾಲ್ಕು ಶಾಸಕರೊಂದಿಗೆ ಮುಂಬೈನಲ್ಲಿ ವಾಸ್ತವ್ಯ ಹೂಡುವ ಮೂಲಕ ಮೊದಲ ರಾಜೀನಾಮೆ ನಾಟಕ ಶುರು ಮಾಡಿದ್ದರು. ಆ ಮೂಲಕ ಸರ್ಕಾರದ ವಿರುದ್ಧ ಸತತ ಒತ್ತಡ ಹೇರಿದರು. ಆದರೆ, ಮೈತ್ರಿ ನಾಯಕರು ಇದಕ್ಕೆ ಮಣಿಯದ ಕಾರಣ ರಮೇಶ್​ಗೆ ಹಿನ್ನಡೆಯಾಗಿತ್ತು.

ಮುಂಬೈನಿಂದ ರಾಜ್ಯಕ್ಕೆ ಹಿಂದಿರುಗಿದ ನಂತರ ಉಮೇಶ್ ಜಾಧವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆದರೆ, ರಮೇಶ್ ಮಾತ್ರ ಈವರೆಗೆ ರಾಜೀನಾಮೆ ನೀಡಿರಲಿಲ್ಲ. ಆಗಿಂದಾಗ್ಗೆ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿದ್ದ ರಮೇಶ್ ‘ಹುಲಿ ಬಂತು ಹಲಿ ಕಥೆ’ ಎಂಬತೆ ಈಗ ರಾಜೀನಾಮೆ ಕೊಡ್ತೇನೆ, ನಾಳೆ ಕೊಡ್ತೇನೆ ಎನ್ನುತ್ತಿದ್ದರೆ ಹೊರತು, ಕೊನೆಯ ಒಂದು ವರ್ಷದಿಂದ ರಾಜೀನಾಮೆ ನೀಡಿರಲಿಲ್ಲ.

ಇದನ್ನೂ ಓದಿ : ಬಿಜೆಪಿಯಲ್ಲೂ ಉಸಿರು ಕಟ್ಟುವ ವಾತಾವರಣವಿದೆ ಎಂದು ಅವರೇ ಹೇಳಿಕೊಂಡಿದ್ದಾರೆ; ಡಿಸಿಎಂ ಜಿ. ಪರಮೇಶ್ವರ್

ಆದರೆ, ಕಳೆದ ಒಂದು ವರ್ಷದಿಂದ ಮೈತ್ರಿ ಸರ್ಕಾರದ ವಿರುದ್ಧ ಮುನಿಸಿಕೊಂಡು ಸತತ ರಾಜೀನಾಮೆ ನಾಟಕ ಆಡುತ್ತಲೇ ಇದ್ದ ರಮೇಶ್ ಸೋಮವಾರ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಮೈತ್ರಿ ಸರ್ಕಾರ ಬಹುಪಾಲು ಅಪಾಯದಲ್ಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ಈವರೆಗೆ ರಮೇಶ್ ಅವರ ರಾಜೀನಾಮೆ ಪತ್ರ ತಮಗೆ ತಲುಪಿಲ್ಲ ಎಂದು ಸ್ಪೀಕರ್ ಕಚೇರಿ ಸ್ಪಷ್ಟಪಡಿಸಿದೆ. ಈ ಕುರಿತು ಈವರೆಗೆ ಶಾಸಕ ರಮೇಶ್ ಜಾರಕಿಹೊಳಿ ಯಾವುದೇ ಸ್ಪಷ್ಟನೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ.

ಒಟ್ಟಾರೆ ಇವನ್ನೆಲ್ಲ ಗಮನಿಸಿದರೆ ಗೋಕಾಕ್ ಶಾಸಕ ಮತ್ತೊಮ್ಮೆ ರಾಜೀನಾಮೆ ನಾಟಕಕ್ಕೆ ಮುಂದಾಗಿದ್ದಾರ? ಈ ಮೂಲಕ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರುವ ತಂತ್ರ ಹೆಣೆದಿದ್ದಾರ? ಎಂಬ ಅನುಮಾನ ಮೂಡುತ್ತಿರುವುದು ಸುಳ್ಳಲ್ಲ.

First published:July 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading