ರಾಜ್ಯದಲ್ಲಿ ಜನ ಸಾಯ್ತಾ ಇರಬೇಕಾದ್ರು, ಸಿಎಂ ಸ್ಥಾನಕ್ಕಾಗಿ ಕಚ್ಚಾಟ ಬೇಕಾ?; ಕೃಷ್ಣ ಭೈರೇಗೌಡ ಚಾಟಿ

ಮಾರಣಾಂತಿಕ ಕೊರೋನಾದಿಂದಾಗಿ ರಾಜ್ಯದಲ್ಲಿ ಜನ ಪ್ರತಿದಿನ ಸಾಯುತ್ತಿದ್ದಾರೆ. ತಮ್ಮವರ ಜೀವವನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಬಿಜೆಪಿ ನಾಯಕರಿಗೆ ಅಧಿಕಾರಕ್ಕಾಗಿ ಕಿತ್ತಾಟ ಮುಖ್ಯವೇ? ಎಂದು ಕೃಷ್ಣ ಭೈರೇಗೌಡ ಕಿಡಿಕಾರಿದ್ದಾರೆ.

ಕೃಷ್ಣಭೈರೇಗೌಡ.

ಕೃಷ್ಣಭೈರೇಗೌಡ.

 • Share this:
  ಬೆಂಗಳೂರು (ಮೇ 28); ಕರ್ನಾಟಕದಲ್ಲಿ ಒಂದೆಡೆ ಕೊರೋನಾ ವೈರಸ್​ ಕಾಟ ದಿನದಿಂದ ದಿನಕ್ಕೆ ಏರುತ್ತಿದ್ದರೆ, ಮತ್ತೊಂದೆ ಬಿಜೆಪಿ ಪಕ್ಷದಲ್ಲಿ ಅಧಿಕಾರಕ್ಕಾಗಿನ ಕಿತ್ತಾಟವೂ ಮುಂದುವರೆಯುತ್ತಲೇ ಇದೆ. ಈ ನಡುವೆಯೇ ಸಿಎಂ ಬಿಎಸ್​ ಯಡಿಯೂರಪ್ಪನವರ ವಿರುದ್ಧ ಬಂಡೆದ್ದು ಸಿಎಂ ಬದಲಾವಣೆಗೆ ಮುದಾಗಿರುವ ಬಂಡಾಯ ಶಾಸಕರು ಸಹಿ ಸಂಗ್ರಹಿಸಿ ದೆಹಲಿಗೆ ಹೋಗಿ ಬಂದ ಘಟನೆಯೂ ನಿನ್ನೆ ನಡೆದಿತ್ತು. ಬಿಜೆಪಿ ಬಂಡಾಯ ನಾಯಕರಿಗೆ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಆದರೂ ಸಿಎಂ ಮತ್ತು ಸಚಿವ ಸ್ಥಾನದ ಆಕಾಂಕ್ಷಿಗಳ ಕಿತ್ತಾಟ ಮಾತ್ರ ಇನ್ನೂ ನಿಂತಿಲ್ಲ. ಈ ವಿಚಾರವಾಗಿ ಬಿಜೆಪಿ ನಾಯಕರ ವಿರುದ್ಧ ಇಂದು ಕಿಡಿಕಾರಿರುವ ಮಾಜಿ ಸಚಿವ ಕೃಷ್ಣ ಭೈರೇಗೌಡ, "ಕೊರೋನಾದಿಂದ ಜನ ದಿನನಿತ್ಯ ಸಾಯುತ್ತಿರುವಾಗ, ಅಧಿಕಾರದ ಕಿತ್ತಾಟ ಅಗತ್ಯವೇ?" ಎಂದು ಕಿಡಿಕಾರಿದ್ದಾರೆ.

  "ಮಾರಣಾಂತಿಕ ಕೊರೋನಾದಿಂದಾಗಿ ರಾಜ್ಯದಲ್ಲಿ ಜನ ಪ್ರತಿದಿನ ಸಾಯುತ್ತಿದ್ದಾರೆ. ಈ ಸೋಂಕಿನ ನಿವಾರಣೆಗಾಗಿ ಬೇಡಿಕೊಳ್ಳುತ್ತಿದ್ದಾರೆ. ತಮ್ಮವರ ಜೀವವನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲೂ ರಾಜ್ಯವನ್ನು ಆಳುತ್ತಿರುವ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಕಿತ್ತಾಟ ನಡೆಸುತ್ತಿದ್ದಾರೆ. ಜನರ ಜೀವಕ್ಕಿಂತಲೂ ಅಧಿಕಾರ ಮುಖ್ಯವೇ? ಇಂತಹ ಸಂದರ್ಭದಲ್ಲೂ ಇವೆಲ್ಲ ಬೇಕಾ?" ಎಂದು ಕೃಷ್ಣ ಭೈರೇಗೌಡ ಕಿಡಿಕಾರಿದ್ದಾರೆ.

  "ರಾಜ್ಯದಲ್ಲಿ ಮಂತ್ರಿ ಸ್ಥಾನ ಉಳಿಸಿಕೊಳ್ಳೋಕೆ, ಸಿಎಂ ಸ್ಥಾನ ಉಳಿಸಿಕೊಳ್ಳೋಕೆ ಕಚ್ಚಾಟ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಇವರಿಗೆ ಸಮಯ ಪ್ರಜ್ಙೆಯಾದ್ರೂ ಬೇಡ್ವೇ, ಇದು ಸರಿಯಾದ ಸಮಯ ಅಲ್ಲ ಅನ್ನೋದು ಬೇಡ್ವಾ, ನಾವು ರಾಜಕೀಯ ಅಧಿಕಾರಕ್ಕೆ ಬಂದಿರೋದು. ಆದರೆ, ಇಂತಹ ಸಂದರ್ಭದಲ್ಲಿ ಇದು ಬೇಕಾ ಇದನ್ನ ಅವರು ತಿಳಿದುಕೊ ಳ್ಳಬೇಕು" ಎಂದು ಕೃಷ್ಣ ಭೈರೇಗೌಡ ಬಿಜೆಪಿ ನಾಯಕರಿಗೆ ಛೀಮಾರಿ ಹಾಕಿದ್ದಾರೆ.

  ಸಿಎಂ ಸ್ಥಾನ ಸದ್ಯಕ್ಕೆ ಸೇಫ್:

  ಸಿಎಂ ಬಿ.ಎಸ್. ಯಡಿಯೂರಪ್ಪ ಸದ್ಯಕ್ಕೆ ಸೇಫ್ ಆಗಿದ್ದು, ಕರ್ನಾಟಕದಲ್ಲಿ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ. ಬಿಜೆಪಿ ಹೈಕಮಾಂಡಿನಿಂದ ಬಂಡಾಯಗಾರರಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದ್ದು, ಮೊನ್ನೆ ಸಿ.ಪಿ‌. ಯೋಗೇಶ್ವರ್, ಅರವಿಂದ ಬೆಲ್ಲದ್ ಅವರಿಗೆ ಭೇಟಿಗೆ ಅವಕಾಶ ಕೊಟ್ಟಿರಲಿಲ್ಲ. ಸಚಿವ ಮುರುಗೇಶ್ ನಿರಾಣಿಗೂ ಭೇಟಿಗೆ ನಿರಾಕರಣೆ ಮಾಡಲಾಗಿದೆ. ಸಿಎಂ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾದ ಮುರುಗೇಶ್ ನಿರಾಣಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ ನಡ್ಡಾ ಅವರ ಭೇಟಿಗೆ ಅವಕಾಶ ಕೇಳಿದ್ದರು. ಇದೇ ಹಿನ್ನಲೆಯಲ್ಲಿ ದೆಹಲಿ ಪ್ರವಾಸಕ್ಕೂ ಸಿದ್ದವಾಗಿದ್ದ ನಿರಾಣಿಯನ್ನು ಭೇಟಿಯಾಗಲು ಸಾಧ್ಯವಿಲ್ಲ ಎಂದು ನಿನ್ನೆ ರಾತ್ರಿ ಜೆ.ಪಿ. ನಡ್ಡಾ ನಿರಾಕರಿಸಿದ್ದರು.

  ಇದನ್ನೂ ಓದಿ : Coronavirus: ಪಾಸಿಟಿವ್ ಬಂದಾಗ ಗೋಮೂತ್ರ ಕುಡಿದು, ಬೆಳ್ಳುಳ್ಳಿ ತಿನ್ನಬಹುದಿತ್ತಲ್ಲಾ? ಬಿಜೆಪಿಯನ್ನು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

  ಹೈಕಮಾಂಡ್ ನಾಯಕರ ಭೇಟಿ ಸಾಧ್ಯವಾಗದ ಹಿನ್ನೆಲೆ ದೆಹಲಿ ಪ್ರವಾಸವನ್ನು ಮುರುಗೇಶ್ ನಿರಾಣಿ ಕೈ ಬಿಟ್ಟಿದ್ದರು. ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸುವುದಾದರೆ ದೆಹಲಿಗೆ ಬರಬೇಡಿ, ಬೇರೆ ಸಮಸ್ಯೆ ಇದ್ದರೆ ಸಿಎಂ, ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ. ಕೊರೋನಾ ಸಂದರ್ಭದಲ್ಲಿ ರಾಜಕೀಯ ಚರ್ಚೆ ಸೂಕ್ತವಲ್ಲ ಎಂದು ಬಿಜೆಪಿ ಬಂಡಾಯಗಾರರಿಗೆ ಹೈಕಮಾಂಡಿನಿಂದ ಖಡಕ್ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

  ಇದನ್ನೂ ಓದಿ: Bangalore Gangrape: ಸಂತ್ರಸ್ತೆಯ ಮತ್ತೊಂದು ವಿಡಿಯೋ ವೈರಲ್; ಮಾಹಿತಿ ಕಲೆ ಹಾಕುತ್ತಿರುವ ಪೊಲೀಸ್ ಆಯುಕ್ತ ಕಮಲ್ ಪಂತ್

  ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ದೆಹಲಿಗೆ ದಂಡಯಾತ್ರೆ ಕೈಗೊಂಡಿದ್ದ ಸಚಿವ ಸಿ.ಪಿ ಯೋಗೇಶ್ವರ್‌, ಶಾಸಕ ಅರವಿಂದ ಬೆಲ್ಲದ್ ಅವರಿಗೆ ಹೈಕಮಾಂಡ್ ನಾಯಕರು ಸಮಯ ನೀಡಿರಲಿಲ್ಲ. ಬಿಜೆಪಿ ನಾಯಕರಾದ ಅರುಣ್ ಸಿಂಗ್, ಜೆಪಿ ನಡ್ಡಾ ಸೇರಿ ಹಲವು ನಾಯಕರ ಭೇಟಿಗೆ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ, ನಿರಾಸೆಯಿಂದ ರಾಜ್ಯ ಬಿಜೆಪಿ ನಾಯಕರು ದೆಹಲಿಯಿಂದ ವಾಪಾಸಾಗಿದ್ದಾರೆ.

  ಕೊರೊನಾ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ನಾಯಕರನ್ನು ಭೇಟಿ ಮಾಡಲು ಹೈಕಮಾಂಡ್ ನಾಯಕರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ನಾಯಕತ್ವ ಬದಲಾವಣೆ ಬಗ್ಗೆ ಚರ್ಚಿಸಿಲು ನಕಾರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ತಮಗೆ ಜಿಲ್ಲಾ ಉಸ್ತುವಾರಿ ನೀಡದಕ್ಕೆ ಅರುಣ್ ಸಿಂಗ್ ಗೆ ದೂರು ನೀಡಿದ್ದ ಸಚಿವ ಸಿ.ಪಿ. ಯೋಗೇಶ್ವರ್ ಅವರನ್ನು ಪುನಃ ಭೇಟಿ ಮಾಡಲು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನಿರಾಕರಿಸಿದ್ದಾರೆ.
  Published by:MAshok Kumar
  First published: