ತುಮಕೂರು: ರಾಜ್ಯ ರಾಜಕೀಯ ಅಖಾಡಕ್ಕೆ ಇಳಿಯಲು ಸಿದ್ಧತೆ ನಡೆಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy), ಇಂದು ಸಿದ್ದಗಂಗಾ ಮಠಕ್ಕೆ (Siddagangaa Matha) ಭೇಟಿ ನೀಡಿ, ಸಿದ್ದಗಂಗಾ ಶ್ರೀಗಳ (Siddaganga Swamiji) ಗದ್ದುಗೆಯ ದರ್ಶನವನ್ನು ಪಡೆದುಕೊಂಡಿದ್ದಾರೆ. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಜನಾರ್ದನ ರೆಡ್ಡಿ ಅವರು, ಇವತ್ತು ಶುಭ ಸೋಮವಾರ, ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದುಕೊಳ್ಳಲು ಆಗಮಿಸಿದ್ದೇನೆ. ಬಸವಣ್ಣನವರ (Basavanna) ಕಾಯಕವೇ ಕೈಲಾಸ ಮಾತನ್ನು ಅಕ್ಷರಶಃ ಪಾಲಿಸಿ, ಸುದ್ದಿ ಅಥವಾ ಪ್ರಚಾರಕ್ಕಾಗಿ ಸೇವೆ ಮಾಡದೆ, ಜಗತ್ತೇ ನೋಡುವಂತೆ ಸೇವೆ ಸಲ್ಲಿಸಿದ್ದಾರೆ ಅಂತ ಹೇಳಿದ್ರು.
ಕಳೆದ 34 ವರ್ಷಗಳಿಂದಲೂ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದೇನೆ. ಸ್ವಾಮೀಜಿಗಳು ಲಿಂಗೈಕ್ಯರಾದಾಗ ಬಂದಿದ್ದೆ. ನಾನು ಸಾರ್ವಜನಿಕ ಬದುಕಿನಲ್ಲಿ ಬರಬೇಕು ಎಂದು ನಿರ್ಧರಿಸಿದ ಮೇಲೆ, ಇಂದು ಮಠಕ್ಕೆ ಭೇಟಿ ನೀಡಿ, ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದುಕೊಳ್ಳಲು ಆಗಮಿಸಿದ್ದೇನೆ ಎಂದರು.
ಇದನ್ನೂ ಓದಿ: Karnataka Winter Session: ಸದನದಲ್ಲಿ ಸಾವರ್ಕರ್ ಫೋಟೋ; ಬಿಜೆಪಿ ಲೆಕ್ಕಾಚಾರ ಉಲ್ಟಾ, ಕಾಂಗ್ರೆಸ್ ಸಖತ್ ಕೌಂಟರ್!
ಮಠಗಳಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ
ಸಾರ್ವಜನಿಕ ಬದುಕಿಗೆ ಬರಬೇಕು ಅಂತ ತೀರ್ಮಾನ ಮಾಡಿಯೇ ಓಡಾಡುತ್ತಿದ್ದೇನೆ. ಎಲ್ಲಾ ಮಠಗಳಿಗೂ ಭೇಟಿ ನೀಡುತ್ತಿದ್ದೇನೆ. ಸಾರ್ವಜನಿಕ ಬದುಕು ಪ್ರಾರಂಭಿಸಬೇಕಾದರೆ, ಜನ ಆಶೀರ್ವಾದಬೇಕು ಹೀಗಾಗಿ ಎಲ್ಲಾ ಕಡೆ ಹೋಗುತ್ತಿದ್ದೇನೆ. ಜಾತಿ, ಮತ ಭೇದ ಮಾಡದೆ ಪ್ರತಿಯೊಂದನ್ನು ಮಾಡಿ ತೋರಿಸಿದ್ದಾರೆ. ಅವರ ಮಾರ್ಗದರ್ಶನ ನಡೆಯಲು, ಇಲ್ಲಿಗೆ ಬಂದಿದ್ದೇನೆ. ಮಠಗಳಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲೇನು ಅಲ್ಲ ಎಂದರು.
ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನು ತಿಳಿಸುತ್ತೇನೆ
ಇದೇ ವೇಳೆ ಮಠದಲ್ಲಿ ರಾಜಕೀಯವನ್ನು ಮಾತನಾಡುವುದು ಸೂಕ್ತವಲ್ಲ. ಡಿಸೆಂಬರ್ 25ರಂದು ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನು ತಿಳಿಸುತ್ತೇನೆ. ಮಗನ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾ ಶೇಕಡಾ 80ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಮೈಸೂರು, ಬೆಂಗಳೂರಿನಲ್ಲಿ ಈ ತಿಂಗಳು ಮುಂದಿನ ತಿಂಗಳು ಚಿತ್ತೀಕರಣ ನಡೆಯಲಿದೆ. ಮಗನಿಗೆ ಚಿಕ್ಕಂದಿನಿಂದಲ್ಲೂ ನಟನೆಯ ಬಗ್ಗೆ ಆಸಕ್ತಿ ಇತ್ತು, ಚಿತ್ರರಂಗದಲ್ಲಿ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Janardhana Reddy: ಗಣಿ ಧಣಿ ಜನಾರ್ದನ ರೆಡ್ಡಿ ಗೃಹ ಪ್ರವೇಶ, ಇಲ್ಲಿವೆ ನೋಡಿ ನೂತನ ಮನೆಯ ಫೋಟೋಸ್
ಶ್ರೀರಾಮುಲು, ರೆಡ್ಡಿ ಗೌಪ್ಯ ಮಾತುಕತೆ
ಇತ್ತೀಚಿಗಷ್ಟೇ ಸಚಿವ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಗೌಪ್ಯವಾಗಿ ಮಾತುಕತೆ ನಡೆಸಿದ್ರು. ಈ ವೇಳೆ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಮತ್ತೆ ರಾಜಕೀಯಕ್ಕೆ ಎಂಟ್ರಿ ನೀಡಲು ಬಿಜೆಪಿ ನಾಯಕರು ಹಾಗೂ ಪಕ್ಷದ ವರಿಷ್ಠರು ಅವಕಾಶ ಮಾಡಿಕೊಡುತ್ತಿಲ್ಲ ಎಂದು ರಾಮುಲು ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಸ್ಕಿಯಲ್ಲಿ ಬೆಂಬಲಿಗರ ಸಭೆ ಕರೆದ ರೆಡ್ಡಿ
ಇನ್ನು, ಜನಾರ್ದನ ರೆಡ್ಡಿ, ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದು, ಕುಚುಕು ಗೆಳೆಯ ಶ್ರೀರಾಮುಲು ಮನವೊಲಿಕೆ ಪ್ರಯತ್ನದ ಬಳಿಕವೂ ಅವರ ನಿರ್ಧಾರ ಬದಲಾಗಿಲ್ಲ ಎನ್ನಲಾಗಿದೆ. ಆದ್ದರಿಂದಲೇ ರೆಡ್ಡಿ, ಮಸ್ಕಿಯಲ್ಲಿ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯನ್ನು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹೊಸ ಪಕ್ಷ ಸ್ಥಾಪನೆ ಮಾಡ್ತಾರಾ? ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರಾ? ಯಾವ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಊಹಾಪೋಹಗಳು ಹೆಚ್ಚಾಗುತ್ತಿದೆ, ಇದರ ನಡುವೆಯೇ ರೆಡ್ಡಿ ಅವರು ವಿವಿಧ ಮಠಗಳಿಗೆ ಭೇಟಿ ನೀಡಲು ಮುಂದಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ