• Home
 • »
 • News
 • »
 • state
 • »
 • ಯಾರು ಅನುಭವಿಸುತ್ತಾರೋ ಅವರೇ ಹೊಣೆ: ಮಂಗಳೂರು ಆತ್ಮಹತ್ಯೆ ಪ್ರಕರಣಕ್ಕೆ ಮಾಜಿ ಸಚಿವರ ಪ್ರತಿಕ್ರಿಯೆ

ಯಾರು ಅನುಭವಿಸುತ್ತಾರೋ ಅವರೇ ಹೊಣೆ: ಮಂಗಳೂರು ಆತ್ಮಹತ್ಯೆ ಪ್ರಕರಣಕ್ಕೆ ಮಾಜಿ ಸಚಿವರ ಪ್ರತಿಕ್ರಿಯೆ

ಹೆಚ್ ಆಂಜನೇಯ

ಹೆಚ್ ಆಂಜನೇಯ

H Anjaneya Statement: ಮತಾಂತರ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ. ಯಾರು ಯಾವ ಧರ್ಮದಲ್ಲಿ ಇರಬೇಕು ಎಂಬುದು ಅವರ ಇಚ್ಛೆಗೆ ಬಿಟ್ಟಿದ್ದು ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ಹೇಳಿದ್ದಾರೆ.

 • Share this:

  ಬಾಗಲಕೋಟೆ: ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಹೊರಟಿರುವುದನ್ನು ಮಾಜಿ ಸಚಿವ ಹೆಚ್ ಆಂಜನೇಯ ವಿರೋಧ ವ್ಯಕ್ತಪಡಿಸಿದ್ದು, ಮತಾಂತರ ಎಂಬುದು ಒಬ್ಬ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ, ಆರೆಸ್ಸೆಸ್ ಸೇರಿ ಸಂಘಪರಿವಾರದವರನ್ನ ತರಾಟೆಗೆ ತೆಗೆದುಕೊಂಡ ಆಂಜನೇಯ, ರಾಮ ರಾಮ ಅಂತಾರೆ ರಾಮನೇನು ಇವರಪ್ಪನ ಮನೆಯ ಸ್ವತ್ತಲ್ಲ ಎಂದಿದ್ದಾರೆ.


  ರಾಮನಿಗೆ ಅತೀ ಹತ್ತಿರದವನು ಆಂಜನೇಯ. ಆಂಜನೇಯ ಇಲ್ಲದೆ ರಾಮನಿಲ್ಲ, ರಾಮನಿಲ್ಲದ ಆಂಜನೇಯ ಇಲ್ಲ. ನನ್ನ ಹೆಸರು ನಮ್ಮವ್ವ ಆಂಜನೇಯ ಅಂತಹೇಳಿ ಇಟ್ಟಿದ್ದಾಳೆ. ನಾನು ಹಿಂದೂಧರ್ಮದಲ್ಲಿ ಇದ್ದೇನೆ, ಕಾಂಗ್ರೆಸ್ ನಲ್ಲಿ ಇದ್ದೇನೆ. ಕೆಲವರು ಒಂದು ಪಾರ್ಟಿಯಲ್ಲಿ ಇದ್ದುಕೊಂಡು ಹಿಂದುಗಳನ್ನು ಖರೀದಿ ಮಾಡಿದ್ದೇವೆ ಎನ್ನುವ ರೀತಿಯಲ್ಲಿದ್ದಾರೆ. ಯಾವ ಧರ್ಮದಲ್ಲಿ ಇರಬೇಕು ಅನ್ನೋದು ನನಗೆ ಬಿಟ್ಟದ್ದು. ವ್ಯಕ್ತಿಗೆ ಅವನಿಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇದೆ. ಬಲವಂತವಾಗಿ ಬೇಕಾದಷ್ಟು ಕಾಯ್ದೆಗಳನ್ನು ಮಾಡಿ ಹಾಕಿದ್ದಾರೆ. ಇವೆಲ್ಲ ಜನವಿರೋಧಿ ಕಾಯ್ದೆಗಳು. ನಾವು ಬಂದಮೇಲೆ ಅವುಗಳನ್ನೆಲ್ಲ ಸಾಯಿಸಿಬಿಡ್ತೇವೆ. ಜನಾಭಿಪ್ರಾಯಕ್ಕೆ ಮನ್ನಣೆ ಕೊಡುತ್ತೇನೆ ಎಂದ ಮಾಜಿ ಸಚಿವ ಎಚ್. ಆಂಜನೇಯ ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.


  ಅವನ್ಯಾವುನು ಮುತಾಲಿಕ್ ಬಿಡ್ರಿ..!


  ಕಾಂಗ್ರೆಸ್ಸಿಗರು ಸೋನಿಯಾಗೆ ಹೆದರಿ ಮತಾಂತರ ಕಾಯ್ದೆ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಆಂಜನೇಯ, ಅವನ್ಯಾವನು ಮುತಾಲಿಕ್ ಬಿಡ್ರಿ, ಪ್ರಧಾನಿ ಹುದ್ದೆ ನಿರಾಕರಿಸಿ ಆಥಿ೯ಕ ತಜ್ಞ ಸಿಂಗ್ ಅವರನ್ನ ಪ್ರಧಾನಿ ಮಾಡಿದ ತ್ಯಾಗ ಮಹಿಳೆ ಸೋನಿಯಾ ಗಾಂಧಿ ಒಬ್ಬ ಆದಶ೯ಮಯಿ. ಭಾರತದ ಹೆಸರನ್ನು ಇಡೀ ಪ್ರಪಂಚಕ್ಕೆ ಎತ್ತಿ ಹಿಡಿದು ಕೀತಿ೯ ತಂದಿದ್ದಾರೆ. ಅಂತ ಮಹಿಳೆ ಟೀಕಿಸುವ ಯೋಗ್ಯತೆ, ನೈತಿಕತೆ ಮುತಾಲಿಕ್​ಗೆ ಇಲ್ಲ ಎಂದರು.


  ಸೋನಿಯಾಗಾಂಧಿ ಈ ದೇಶದ ಆದರ್ಶ ಮಹಿಳೆ. ಅವರನ್ನು ಓಲೈಸಿ ಹೇಳುವಂತಹದ್ದೇನಿಲ್ಲ. ದೇಶದಲ್ಲಿ ಜನರು ವಿರೋಧ ಮಾಡುವ ಕಾಯ್ದೆ ಜಾರಿಗೆ ತಂದ್ರು ನಾವು ವಿರೋಧಿಸುತ್ತೇವೆ. ಅವರಿವರನ್ನು ಓಲೈಸೋರು ನಾವಲ್ಲ. ಸೋನಿಯಾಗಾಂಧಿ ಎಲ್ಲ ದೇವರನ್ನು ಆರಾಧಿಸಿ ಸವ೯ ಧಮಿ೯ಯ ನಾಯಕಿಯಾಗಿದ್ದಾರೆ. ವಿದೇಶದಿಂದ ಬಂದು ಅತ್ತೆ ಕಳೆದುಕೊಂಡರು, ಗಂಡನನ್ನ ಕಳೆದುಕೊಂಡು ವಿಧವೆ ಆದರು. ಹಾಗಾದರೂ ಪ್ಯಾಕಪ್ ಮಾಡಿಕೊಂಡು ಹೋಗಲಿಲ್ಲ. ಎಲ್ಲವನ್ನು ಬಿಟ್ಟು ಇಲ್ಲಿಯೇ ಉಳಿದ್ರು. ಇಂತವರನ್ನು ಟೀಕೆ ಮಾಡೋರಿಗೆ ಯಾವುದೇ ಜ್ಞಾನ ಇಲ್ಲ ಎಂದು ವಾಗ್ದಾಳಿ ನಡೆಸಿದರು.


  ಇದನ್ನೂ ಓದಿ: ಮತ್ತೆ ಖಾಕಿಗಳ ಕಣ್ಣಿಗೆ ಮಣ್ಣೆರೆಚಿದ ಹ್ಯಾಕರ್ ಶ್ರೀಕಿ.. ಬೆಂಗಳೂರು ಪೊಲೀಸರಿಗೆ ಶುರುವಾಯ್ತು ಪೀಕಲಾಟ!


  ಇದೆ ವೇಳೆ, ಮಂಗಳೂರಿನಲ್ಲಿ ಬಾಗಲಕೋಟೆಯ ಸುನಗ ಗ್ರಾಮದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಆಂಜನೇಯ, ಮತಾಂತರದ ಒತ್ತಾಯ ಇಲ್ಲ, ಪತ್ತಾಯ ಇಲ್ಲ, ಹಾಗೆ ಮಾಡಿರ್ತಾರೆ ಬಿಡ್ರಿ. ಪೋಲಿಸ್ ಇಲಾಖೆ ತನಿಖೆಯಾಗಿ ನ್ಯಾಯಾಂಗ ರಿಪೋರ್ಟ್ ಆಗಿ ನ್ಯಾಯಾಧೀಶರಿ ಹೇಳಿದರೆ ಬಲವಂತ ಎಂದು ಒಪ್ಪಬಹುದು ಎಂದು ಅಭಿಪ್ರಾಯಪಟ್ಟರು.


  ಯಾವ ಕಾರಣಕ್ಕೆ ಸತ್ತುಹೋಗಿದ್ದಾರೆ ಯಾರಿಗೆ ಗೊತ್ತು. ಅವರವರು ಧರ್ಮದ್ದು ಅವರು ಪ್ರಚಾರ ಮಾಡ್ತಾರೆ. ಕ್ರೈಸ್ತರು ತಮ್ಮ ಧಮ೯ದ್ದು ಸ್ವಲ್ಪ ಸ್ವಲ್ಪ ಪ್ರಚಾರ ಮಾಡ್ತಾರೆ. ಅವರ ಧರ್ಮ ಬೋಧನೆ ಮಾಡಿ ಅವರ ಧರ್ಮದ್ದು ಅವರು ಹೇಳ್ತಾರೆ. ನಮ್ಮ ಧರ್ಮವೂ ಚೆನ್ನಾಗಿದೆ ಅಂತ ಪ್ರಚಾರ ಮಾಡಿ ಇವರು ಉಳಿಸಿಕೊಳ್ಳಲು ಯಾರು ಬೇಡ ಅಂತಾರೆ.  ಹಿಂದೂಧರ್ಮ ಪ್ರಚಾರ ಮಾಡಿ ಮನಸ್ಸು ಪರಿವರ್ತನೆ ಮಾಡಿ ನಮ್ಮ ಧರ್ಮದಲ್ಲೇ ಉಳಿಯುವಂತೆ ಮಾಡಲಿ ಎಂದು ಸಲಹೆ ನೀಡಿದರು.


  ಇದನ್ನೂ ಓದಿ: ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಸ್ನೇಹಿತನಿಂದಲೇ ಬರ್ಬರವಾಗಿ ಕೊಲೆಯಾದ.. ಏಕೆ?


  ಯಾರು ಅನುಭವಿಸ್ತಾರೋ ಅವರೇ ಹೊಣೆ..! 


  ಮಂಗಳೂರು ಪ್ರಕರಣ ಮತಾಂತರ ಆಗಿದೆಯೋ ಇಲ್ಲವೋ ಅವೆಲ್ಲ ನಾವು ಹೇಳಕ್ಕಾಗಲ್ಲ. ಕೋರ್ಟ್ ತೀರ್ಪು ಬರಲಿ ಕಾಯೋಣ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಆಂಜನೇಯ ಹೇಳಿದರು. ತೀರ್ಪು ಬರುವವರೆಗೂ ಇಂತಹ ಪ್ರಕರಣಗಳನ್ನ ತಡೆಯುವ ಅಗತ್ಯ ಇಲ್ಲವೇ? ಈ ಪ್ರಕರಣಗಳಿಗೆ ಯಾರು ಹೊಣೆ ಎಂದು ಮಾಧ್ಯಮಗಳು ಕೇಳಿದಾಗ, ಯಾರು ಏನು ಮಾಡೋಕೆ ಆಗುತ್ತೆ? ಯಾರು ಅನುಭವಿಸುತ್ತಾರೋ ಅವರೇ ಅದಕ್ಕೆ ಹೊಣೆ ಎಂದು ಹೇಳಿದರು.


  ಯಾಕೆ ಸಾಯಬೇಕು, ರಕ್ಷಣೆ ಕೇಳುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನ. ಆತ್ಮಹತ್ಯೆ ಮಾಡಿಕೊಳ್ಳಬಾರದು. ನಿಮಗೆ ಅನ್ಯಾಯ ಆಗಿದ್ರೆ ಕಾಂಗ್ರೆಸ್ ನವರಿಗೆ ಹೇಳಿ. ನ್ಯಾಯಾಲಯಕ್ಕೆ ಹೋಗಿ, ಪತ್ರಿಕಾಲಯಕ್ಕೆ ಹೋಗಿ ಎಂದು ಹೆಚ್ ಆಂಜನೇಯ ಅವರು ಸಲಹೆ ನೀಡಿದರು.


  ವರದಿ: ಮಂಜುನಾಥ್ ತಳವಾರ

  Published by:Vijayasarthy SN
  First published: