ನಾನು ಯಾವ ಯುದ್ದವನ್ನೂ ಗೆದ್ದು ಬಂದಿಲ್ಲ; ಆದರೆ ಜನ ತೋರಿದ ಪ್ರೀತಿ-ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ; ಡಿಕೆ ಶಿವಕುಮಾರ್

ಮುಂದಿನ ಮುಖ್ಯಮಂತ್ರಿ ಡಿಕೆಶಿ ಎಂಬ ಅಭಿಮಾನಿಗಳ ಕೂಗಿನ ವಿಚಾರಕ್ಕೆ ಡಿಕೆಶಿ ಪ್ರತಿಕ್ರಿಯೆ ನೀಡಿದರು. ದೊಡ್ಡವರು ಅಧಿಕಾರದಲ್ಲಿ ಇದ್ದಾರೆ. ಅದರ ಬಗ್ಗೆ ಮಾತನಾಡುವುದು ಬೇಡ. ನನಗೆ ಯಾವ ಹುದ್ದೆಯೂ ಬೇಡ, ಇರುವುದೇ ಸಾಕು, ಎಂದರು.

Latha CG | news18-kannada
Updated:October 28, 2019, 8:40 PM IST
ನಾನು ಯಾವ ಯುದ್ದವನ್ನೂ ಗೆದ್ದು ಬಂದಿಲ್ಲ; ಆದರೆ ಜನ ತೋರಿದ ಪ್ರೀತಿ-ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ; ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
  • Share this:
ರಾಮನಗರ(ಅ.28): ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬಂದ ಬಳಿಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರ ಟೆಂಪಲ್ ರನ್​ ಮುಂದುವರೆದಿದೆ. ಇಂದು ತಮ್ಮ ಸ್ವಕ್ಷೇತ್ರವಾದ ಕನಕಪುರಕ್ಕೆ ತೆರಳಿ ಅಲ್ಲಿನ ಪ್ರಸಿದ್ಧ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದರು. ಬಳಿಕ ಅವರ ಹುಟ್ಟೂರಾದ ದೊಡ್ಡಾಲಳ್ಳಿಗೆ ಹೋಗಿ ತಮ್ಮ ತಂದೆ ಸಮಾಧಿಗೆ ಪೂಜೆ ಸಲ್ಲಿಸಿದ್ದರು. ಸದ್ಯ ಕನಕಪುರದಲ್ಲಿರುವ ಡಿಕೆಶಿ, ಆದಿಚುಂಚನಗಿರಿ ಮಠಕ್ಕೂ ತೆರಳಿ, ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ ಎನ್ನಲಾಗಿದೆ.

ತಂದೆ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ, ಕನಕಪುರ ತಾಲೂಕಿನ ಸಾತನೂರು ಬಳಿಯ ಕಬ್ಬಾಳಮ್ಮ‌ ದೇವಾಲಯಕ್ಕೆ ತೆರಳಿದರು. ದೇವಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ಬಳಿಕ ಡಿಕೆಶಿ ಮಾಧ್ಯಮಗಳೊಂದಿಗೆ ಮಾತನಾಡಿದರು. "ಬೆಳಗ್ಗಿನಿಂದ ಯಶವಂತಪುರದಿಂದ ಹಿಡಿದು ಇಲ್ಲಿನ ತನಕ ಓಡಾಡಿದ್ದೇನೆ. ಪಕ್ಷಬೇಧ, ಜಾತಿ ಭೇದ ಮರೆತು ನನಗೆ ಒಳ್ಳೆಯದಾಗಬೇಕು ಅಂತಾ ಹರಸಿದ್ದಾರೆ. ನಿಮ್ಮ ಪ್ರೀತಿ-ವಿಶ್ವಾಸ ಹೀಗೆ ಇರಲಿ. ನಾನು ಮೋಸ ಮಾಡಿಲ್ಲ, ರಾಜ್ಯಕ್ಕೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿದ್ದೇನೆ. ಜನರ ಅಭಿಮಾನ, ಪ್ರೀತಿಯನ್ನು ತೂಕ, ಅಳತೆ ಮಾಡಲು ಆಗಲ್ಲ. ಅವರ ವಿಶ್ವಾಸಕ್ಕೆ ಧಕ್ಕೆ ತರದ ರೀತಿ ಅವರ ಹಾಗೂ ನನ್ನ ಗೌರವ ಹೆಚ್ಚಿಸಿಕೊಂಡು ಕೆಲಸ ಮಾಡುತ್ತೇನೆ," ಎಂದರು.

ಕುಟುಂಬಸಮೇತರಾಗಿ ಹುಟ್ಟೂರಾದ ದೊಡ್ಡಾಲಳ್ಳಿಗೆ ತೆರಳಿ, ತಂದೆ ಸಮಾಧಿಗೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್

"ದೇವರ ಸನ್ನಿಧಿಯಲ್ಲಿ ಮಾತನಾಡುತ್ತಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಇಲ್ಲಿ ಪೂಜೆ ಮಾಡಿಸಿ ಆಶೀರ್ವಾದ ಪಡೆಯುವುದು ನನ್ನ ಕರ್ತವ್ಯ.  ಕೆಲ ಮಾಧ್ಯಮಗಳು ಇದರ ಬಗ್ಗೆ ನಾಲ್ಕೈದು ಸ್ಟೋರಿ ಮಾಡಿದ್ರಂತೆ. ಅವರು ಹೂವು ಇಟ್ಟು ನೋಡಿ ದೇವಿಯ ಶಕ್ತಿ ಬಗ್ಗೆ ತಿಳಿದುಕೊಳ್ಳಲಿ. ಈ ದೇವಿ ನಮ್ಮ ದುಃಖ ದುಮ್ಮಾನ ದೂರ ಮಾಡುವ ತಾಯಿ. ದೇವಿ ಮೂಲ ದೇವಸ್ಥಾನ ಜೀರ್ಣೋದ್ಧಾರ ಮಾಡಲು ಸಾಕಷ್ಟು ಚರ್ಚೆ ಆಯ್ತು. ದೇವಸ್ಥಾನ ಮುಟ್ಟಲು ಅನೇಕರು ಹಿಂದೇಟು ಹಾಕಿದ್ದರು. ಕೆಲವರು ಮಾತು ಕೊಟ್ಟರೆ ಮಾತಿಗೆ ನಿಲ್ಲಬೇಕು. ನಾನು ಅದರ ಬಗ್ಗೆ ಈಗ ಮಾತನಾಡಲ್ಲ. ದೇವಿ ಆಶೀರ್ವಾದ ನನ್ನ ಮೇಲೆ ಎಲ್ಲಿಯವರೆಗೆ ಇರುತ್ತೋ, ಅಲ್ಲಿಯವರೆಗೆ ನಾನು ಚೆನ್ನಾಗಿರುತ್ತೇನೆ" ಎಂದು ಹೇಳಿದರು.

"ನನಗಾಗಿ ಜನರು ಅತ್ತಿದ್ದಾರೆ, ನೊಂದಿದ್ದಾರೆ. ಕೆಲವರು ಜೈಲಿಗೆ ಹೋಗಿ ಬಂದಿದ್ದಾರೆ, ಇನ್ನೂ ಕೆಲವರು ಅಲ್ಲೇ ಇದ್ದಾರೆ. ಹೊಸ ಪೊಲೀಸ್ ಅಧಿಕಾರಿಗೆ ಜಿಲ್ಲೆಯ ಶಕ್ತಿ ಗೊತ್ತಿಲ್ಲ. ನಾನು ಯಾವ ಯುದ್ದವನ್ನೂ ಗೆದ್ದು ಬಂದಿಲ್ಲ.  ಜನರ ಪ್ರೀತಿ ವಿಶ್ವಾಸವನ್ನು ತಡೆಯೋಕೆ ಸಾಧ್ಯನಾ? ಪ್ರೀತಿ ಸ್ವೀಕರಿಸಬೇಕು, ಮಾನವೀಯತೆ ಸ್ವೀಕರಿಸಬೇಕು. ಸಂಸ್ಕೃತಿ ಉಳಿಸಬೇಕು. ಅದಕ್ಕೆ ನಾನು ಬದ್ಧ" ಎಂದರು.

"ಕೆಂಪೇಗೌಡ ಗೌರಮ್ಮ ನನಗೆ ಜನ್ಮ ಕೊಟ್ಟಿದ್ದಾರೆ. ರಾಜ್ಯದ ಜನ, ಕ್ಷೇತ್ರದ ಜನರು ನನ್ನನ್ನು ಮಗನಂತೆ ಸಾಕಿದ್ದಾರೆ. ಬಾಲ್ಯದಲ್ಲಿ ಸಣ್ಣ ತಪ್ಪು ನಡೆದಿರಬಹುದು. ಚುನಾವಣೆ ಸಂದರ್ಭದಲ್ಲಿ ಮತ ಕೇಳೋಕೆ ಬರಲಿಲ್ಲ. ಕ್ಷೇತ್ರದಲ್ಲಿ ಸುರೇಶ್ ಗೆ ಲೀಡ್ ಕೊಟ್ಟು ಗೆಲ್ಲಿಸಿದ್ದಾರೆ. ಪಕ್ಷಾತೀತವಾಗಿ ಯಾವ ಕಾರ್ಯಕರ್ತರಿಗೂ ನೋವು ಕೊಡಬಾರದು ಎಂದು ತಿಳಿಸಿದ್ದೇನೆ," ಎಂದು ಹೇಳಿದರು.

‘ಕಾಂಗ್ರೆಸ್​​ನಲ್ಲಿ ಸಿದ್ದರಾಮಯ್ಯ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ‘: ಸಿಎಂ ಬಿ.ಎಸ್​​ ಯಡಿಯೂರಪ್ಪಮುಂದಿನ ಮುಖ್ಯಮಂತ್ರಿ ಡಿಕೆಶಿ ಎಂಬ ಅಭಿಮಾನಿಗಳ ಕೂಗಿನ ವಿಚಾರಕ್ಕೆ ಡಿಕೆಶಿ ಪ್ರತಿಕ್ರಿಯೆ ನೀಡಿದರು. "ದೊಡ್ಡವರು ಅಧಿಕಾರದಲ್ಲಿ ಇದ್ದಾರೆ. ಅದರ ಬಗ್ಗೆ ಮಾತನಾಡುವುದು ಬೇಡ. ನನಗೆ ಯಾವ ಹುದ್ದೆಯೂ ಬೇಡ, ಇರುವುದೇ ಸಾಕು," ಎಂದರು.

ಚಾಮುಂಡೇಶ್ವರಿ ಸನ್ನಿಧಿಗೆ ತೆರಳಬೇಕಿದೆ. ಸಂಬಂಧಿಕರ ಮನೆಗೆ ತೆರಳಬೇಕಿದೆ ಸದ್ಯದಲ್ಲೇ ಹೋಗುತ್ತೇನೆ ಎಂದರು.

(ವರದಿ: ಮಂಜು ಆರ್ಯ)

First published:October 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ