ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ, ಪಕ್ಷ ಭೇದ ಮರೆತು ಬೆಂಬಲ ನೀಡಿದ್ದೀರಿ; ಭಾವುಕರಾದ ಡಿಕೆಶಿ

ನನಗೆ ಸ್ವಲ್ಪ ಆರೋಗ್ಯ ಸಮಸ್ಯೆಗಳಿವೆ. ಬಿಪಿ ಇದೆ, ಬೆನ್ನು ನೋವು ಕೂಡ ಇದೆ. ಮೊದಲು ಆರೋಗ್ಯ ತಪಾಸಣೆ ಮಾಡಿಸಬೇಕಿದೆ. ಹೀಗಾಗಿ ಒಂದೆರಡು ದಿನ ವೈದ್ಯರ ಬಳಿ ಹೋಗಬೇಕಿದೆ-ಡಿಕೆಶಿ

Latha CG | news18-kannada
Updated:October 27, 2019, 12:42 PM IST
ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ, ಪಕ್ಷ ಭೇದ ಮರೆತು ಬೆಂಬಲ ನೀಡಿದ್ದೀರಿ; ಭಾವುಕರಾದ ಡಿಕೆಶಿ
ಡಿ.ಕೆ. ಶಿವಕುಮಾರ್
  • Share this:
ಬೆಂಗಳೂರು(ಅ.27): ಮಾಜಿ ಸಚಿವ ಡಿ ಕೆ ಶಿವಕುಮಾರ್​ ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. 2 ತಿಂಗಳ ಕಾಲ ಇಡಿ ವಶದಲ್ಲಿದ್ದ ಅವರು, ಜಾಮೀನಿನ ಮೇಲೆ ಬಿಡುಗಡೆಯಾಗಿ ರಾಜಧಾನಿಗೆ ಬಂದಿದ್ದಾರೆ. ನಿನ್ನೆಅವರ ಬೆಂಬಲಿಗರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಡಿಕೆಶಿಗೆ ಅದ್ದೂರಿ ಸ್ವಾಗತ ಕೋರಿದ್ದರು. ಇಂದು ಬೆಳಗ್ಗೆ ಕೈ ನಾಯಕರ ದಂಡು ಡಿಕೆಶಿ ನಿವಾಸಕ್ಕೆ ತೆರಳಿ ಕುಶಲೋಪರಿ ವಿಚಾರಿಸಿತ್ತು. ಬೆಂಗಳೂರಿಗೆ ಆಗಮಿಸಿದ ಬಳಿಕ ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಸುದ್ದಿಗೋಷ್ಠಿ ನಡೆಸಿದ್ದರು. ಇಂದು ಮತ್ತೊಂದು ಸುದ್ದಿಗೋಷ್ಠಿ ನಡೆಸಿ, ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಶುಭಾಷಯದ ಜೊತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು. ರಾಜ್ಯದ ಜನತೆಗೆ ಒಳ್ಳೆಯದಾಗಲಿ. ನನ್ನ ಮೇಲೆ ಪ್ರೀತಿ ಇಟ್ಟು ವಿವಿಧ ರೀತಿಯಲ್ಲಿ ವ್ಯಾಖ್ಯಾನ‌ ಮಾಡಿದ್ದೀರಿ. ಬೆಳಿಗ್ಗೆಯಿಂದ ಸಾಕಷ್ಟು ಜನ ಮುಖಂಡರು, ಶಾಸಕರು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ಪಕ್ಷ ಬೇಧ ಮರೆತು ಬೆಂಬಲ  ನೀಡಿದ್ದೀರಿ ಎಂದು ಭಾವುಕರಾದರು.

ಬಂಡೆ ಚೂರಾಗಿದೆ, ಆ ಬಂಡೆ ಕಲ್ಲುಕಲ್ಲಾಗಿಯೇ ಜೀವನ ಸಾಗಿಸಲಿ; ಡಿಕೆಶಿಗೆ ನೊಣವಿನಕೆರೆ ಸ್ವಾಮೀಜಿ ಆಶೀರ್ವಚನ

ನನಗೆ ಸ್ವಲ್ಪ ಆರೋಗ್ಯ ಸಮಸ್ಯೆಗಳಿವೆ. ಬಿಪಿ ಇದೆ, ಬೆನ್ನು ನೋವು ಕೂಡ ಇದೆ. ಮೊದಲು ಆರೋಗ್ಯ ತಪಾಸಣೆ ಮಾಡಿಸಬೇಕಿದೆ. ಹೀಗಾಗಿ ಒಂದೆರಡು ದಿನ ವೈದ್ಯರ ಬಳಿ ಹೋಗಬೇಕಿದೆ.  ದೆಹಲಿಯಲ್ಲಿ ತಪಾಸಣೆ ಮಾಡಿಸಬೇಕು ಎಂದುಕೊಂಡಿದ್ದೆ, ಆದರೆ ಆಗಲಿಲ್ಲ ಎಂದರು.

ಇನ್ನೂ ಸಹ ಕುಟುಂಬ ಸದಸ್ಯರ ವಿಚಾರಣೆ ಬಾಕಿ ಇದೆ. ಅಜ್ಜಯ್ಯ ಮಠ, ನಂಜಾವಧೂತ ಮಠಕ್ಕೆ ಭೇಟಿ ಕೊಡುತ್ತೇನೆ. ತಂದೆಯ ಸಮಾಧಿಗೆ ಪೂಜೆ ಬಾಕಿ ಇದೆ. ದೊಡ್ಡಾಲಳ್ಳಿಗೆ ಹೋಗುತ್ತೇನೆ. ಚುಂಚನಗಿರಿಯಲ್ಲಿ ಪೂಜೆ ಮಾಡಿಸಬೇಕಿದೆ. ಗೆಳೆಯರು ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.

ಉಪಚುನಾವಣೆಗೆ ತಂತ್ರಗಾರಿಕೆ ರೂಪಿಸುವ ವಿಚಾರವಾಗಿ ಡಿಕೆಶಿ ಪ್ರತಿಕ್ರಿಯೆ ನೀಡಿದರು. ಚುನಾವಣೆ ನಡೆಯುತ್ತೋ ಇಲ್ಲವೋ ಗೊತ್ತಿಲ್ಲ. ನಮ್ಮ ಪಕ್ಷದ ಅಧ್ಯಕ್ಷರಿದ್ದಾರೆ. ಅವರು ಏನು ಯೋಜನೆ ರೂಪಿಸಿದ್ದಾರೋ ನನಗೆ ಗೊತ್ತಿಲ್ಲ. ಮುಂದೆ ನೋಡೋಣ. ಇಷ್ಟು ದಿನ ನನ್ನ ಮಕ್ಕಳನ್ನೂ ನೋಡಲು ಸಾಧ್ಯವಾಗಿರಲಿಲ್ಲ, ಈಗ ನೋಡಿದ್ದೇನೆ ಎಂದು ಹೇಳಿದರು.

‘ಅತ್ಯಂತ ಮಹತ್ತರವಾದ ಘಟನೆ ನಡೆದಿದೆ‘: ಹೀಗೆ ಟ್ರಂಪ್​​ ಟ್ವೀಟ್​​ ಮಾಡಿದ್ದರ ಹಿಂದಿನ ರಹಸ್ಯವೇನು?
First published: October 27, 2019, 12:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading