ಕಾಂಗ್ರೆಸ್​ಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ರಾಜಿನಾಮೆ

news18
Updated:August 28, 2018, 9:48 PM IST
ಕಾಂಗ್ರೆಸ್​ಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ರಾಜಿನಾಮೆ
news18
Updated: August 28, 2018, 9:48 PM IST
ನ್ಯೂಸ್ 18 ಕನ್ನಡ

ಬೆಂಗಳೂರು ( ಆಗಸ್ಟ್ 28) :  ಮಾಜಿ ಸಚಿವ ಬಾಬು ರಾವ್ ಚಿಂಸನಸೂರು ಕಾಂಗ್ರೆಸ್ ಪಕ್ಷಕ್ಕ ರಾಜಿನಾಮೆ ನೀಡಿದ್ದಾರೆ.  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಅಂಚೆ ಮೂಲಕ ರಾಜಿನಾಮೆ ಪತ್ರವನ್ನು ಕಳುಹಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ನಾನು ಸೋಲಲು ನಮ್ಮ ಪಕ್ಷ, ಹಾಗೂ ನಮ್ಮ ನಾಯಕರೇ ಕಾರಣ, ಎಂದು ಕಾಂಗ್ರೆಸ್​ನ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಹೇಳಿದ್ದಾರೆ.

ನಾನು ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಯಲ್ಲಿ ಕೆಲಸ ಮಾಡಿದ್ದೇನೆ. ಸ್ವಾತಂತ್ರ್ಯ ಸಿಕ್ಕು 72 ವರ್ಷ ಆದರೂ ನಮ್ಮ ಸಮಾಜವನ್ನ ಇನ್ನೂ ಗುರ್ತಿಸಿರಲಿಲ್ಲ. ನಮ್ಮ ಸಮಾಜವನ್ನು ಕಡೆಗಣಿಸಿದ್ದಕ್ಕಾಗಿ ಕಾಂಗ್ರೆಸ್ ಬಿಟ್ಟು ನಾಳೆ ಬಿಜೆಪಿ ಸೇರ್ಪಡೆಯಾಗಲಿದ್ದೇನೆ ಎಂದು ತಿಳಿಸಿದರು.

ಕೋಲಿ, ಕಬ್ಬಲಿಗ, ಅಂಬಿಗ ಸಮಾಜದವರನ್ನು ಬಿಜೆಪಿ ಗುರುತಿಸಿದೆ. ಅಲ್ಲದೇ ಅವರು ನಮ್ಮ ಸಮಾಜದ ರಾಮಾನಾಥ ಕೋವಿಂದ ಅವರನ್ನು ರಾಷ್ಟ್ರಪತಿ ಮಾಡಿದ್ದಾರೆ. ಇನ್ನು ಸಾಧ್ವಿ ನಿರಂಜನ್ ಅವರನ್ನು ಕೇಂದ್ರ ಸಚಿವೆಯನ್ನಾಗಿ ಮಾಡಿದ್ದಾರೆ. ಕರ್ನಾಟಕದ ಕೋಲಿ ಸಮಾಜದ ವತಿಯಿಂದ ಅಮಿತ್ ಶಾ ಮತ್ತು ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ನಾನು ಯಾವುದೇ ಆಸೆ ಇಟ್ಟು ಕೊಂಡು ಬಿಜೆಪಿ ಸೇರುತ್ತಿಲ್ಲ
ನಾನು ಈ ಹಿಂದೆ 2 ಸಲ ಕಾಂಗ್ರೆಸ್​​​ನಲ್ಲಿ ಮಂತ್ರಿಯಾಗಿದ್ದೆ, ಎಐಸಿಸಿ ಸದಸ್ಯನಾಗಿದ್ದೆ, ಕೆಪಿಸಿಸಿ ಸೆಕ್ರೆಟರಿ ಆಗಿದ್ದೆ. ಆದ್ರೆ ಈಗ ನಾನು ಕಾಂಗ್ರೆಸ್ ತೊರೆದು ನಾಳೆ ಬಿಜೆಪಿ ಸೇರುತ್ತಿದ್ದೇನೆ. ನನಗೆ ಎರಡೇ ಆಸೆ ಇರುವುದು. ಒಂದು ಗುರುಮಿಠಕಲ್ ಜನರ ಸೇವೆ ಮಾಡುವುದು. ಇನ್ನೊಂದು ನಮ್ಮ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಕ್ಕಾಗಿ ಬಿಜೆಪಿ ಸೇರುತ್ತಿದ್ದೇನೆ ಎಂದರು.
Loading...

 

 
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ