ದಲಿತರು ಬಂದರೆ ಮತ್ತೆ ಹೋಗಿ ಸ್ನಾನ ಮಾಡುವ ನೀಚ ರಾಜಕಾರಣಿ ಹೆಚ್.ಡಿ. ರೇವಣ್ಣ; ಎ. ಮಂಜು ಆರೋಪ

ಯಾವ ಸರ್ಕಾರ ಬಂದರೂ ಎಲ್ಲಾ ಕಂಟ್ರ್ಯಾಕ್ಟ್ ಹೆಚ್.ಡಿ. ರೇವಣ್ಣ ಹಿಡಿತದಲ್ಲೇ ಇದೆ. ಅವರು ಪೊಲೀಸರ ಮೂಲಕ ಪಕ್ಷ ಮತ್ತು ಮನೆಯನ್ನು ಸಂಘಟನೆ ಮಾಡಿಕೊಂಡಿದ್ದಾರೆ. ಅವರು ಪ್ರೀತಿಯಿಂದ ಜಿಲ್ಲೆಯನ್ನು ಹಿಡಿತದಲ್ಲಿ ಇಟ್ಟುಕೊಂಡಿಲ್ಲ ಬದಲಾಗಿ ಭಯದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಎ. ಮಂಜು ಆರೋಪಿಸಿದ್ದಾರೆ.

ಹೆಚ್​.ಡಿ, ರೇವಣ್ಣ ಮತ್ತು ಎ. ಮಂಜು.

ಹೆಚ್​.ಡಿ, ರೇವಣ್ಣ ಮತ್ತು ಎ. ಮಂಜು.

  • Share this:
ಹಾಸನ (ಮಾರ್ಚ್ 08); ದಲಿತರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಮನೆಗೆ ಬಂದರೆ ಮತ್ತೆ ಹೋಗಿ ಸ್ನಾನ ಮಾಡುವ ನೀಚ ರಾಜಕಾರಣಿ ಹೆಚ್.ಡಿ. ರೇವಣ್ಣ ಎಂದು ಮಾಜಿ ಸಚಿವ ಎ. ಮಂಜು ಕಿಡಿಕಾರಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ಸಂದರ್ಭದಿಂದಲೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಲೇ ಇರುವ ಎ. ಮಂಜು ಇಂದು ಒಂದು ಹೆಜ್ಜೆ ಮುಂದಿಟ್ಟು ರೇವಣ್ಣ ಜಾತಿ ತಾರತಮ್ಯ ಮಾಡುತ್ತಾರೆ, ಅಸ್ಫೃಶ್ಯತೆಯನ್ನು ಪಾಲಿಸುತ್ತಾರೆ ಎಂಬಂತಹ ಗುರುತರ ಆಪಾದನೆಯನ್ನು ಅವರ ಮೇಲೆ ಹೊರಿಸಿದ್ದಾರೆ. ಅಲ್ಲದೆ, ಅವರನ್ನು ಓರ್ವ ನೀಚ ರಾಜಕಾರಣಿ ಎಂದು ಜರೆದಿದ್ದಾರೆ.

ಹಾಸನದ ಶಾಂತಿಗ್ರಾಮದಲ್ಲಿ ನಡೆದ ನೂತನ ಮಂಡಲ ಅಧ್ಯಕ್ಷರ ಅಭಿನಂದನೆ ಕಾರ್ಯಕ್ರಮದಲ್ಲಿ ರೇವಣ್ಣ ವಿರುದ್ಧ ಬಹಿರಂಗ ಸಭೆಯಲ್ಲೇ ಆಕ್ರೋಶ ಹೊರಹಾಕಿರುವ ಎ. ಮಂಜು, “ಹಾಸನದಲ್ಲಿರುವ ಅಧಿಕಾರಿಗಳು ಬದಲಾಗಬೇಕು. ಎಲ್ಲರೂ ಜೊತೆಯಲ್ಲೇ ಮುಖ್ಯಮಂತ್ರಿಗಳ ಬಳಿ ಹೋಗಿ ಅಧಿಕಾರಿಗಳ ಬದಲಾವಣೆಗೆ ಕೇಳೋಣ. ಈಗ ಇರುವ ಅಧಿಕಾರಿಗಳಿಂದ ನಮ್ಮ ನಿಮ್ಮ ಕೆಲಸ ಆಗುತ್ತೆ. ಆದರೆ, ಕಾರ್ಯಕರ್ತರ ಕೆಲಸ ಆಗಲ್ಲ.

ಕಾರ್ಯಕರ್ತರ ಕೆಲಸ ಆಗದಿದ್ರೆ ಪಕ್ಷ ಕಟ್ಟಲು ಆಗಲ್ಲ. ನನಗೆ ಅವರ ಜೊತೆ ಅಡ್ಜಸ್ಟ್ ಮಾಡಿಕೋ ಅಂದ್ರು. ನಾನು ಅವರ ಜೊತೆ ಅಡ್ಜಸ್ಟ್ ಮಾಡಿಕೊಂಡ್ರೆ ನನಗೆ ಮಾತ್ರ ಅನುಕೂಲ ಆಗುತ್ತೆ. ಆದರೆ, ಇಡೀ ಜಿಲ್ಲೆಯ ಜನರಿಗೆ ಸ್ವತಂತ್ರ್ಯ ಸಿಗಬೇಕು.

ಯಾವ ಸರ್ಕಾರ ಬಂದರೂ ಎಲ್ಲಾ ಕಂಟ್ರ್ಯಾಕ್ಟ್ ಹೆಚ್.ಡಿ. ರೇವಣ್ಣ ಹಿಡಿತದಲ್ಲೇ ಇದೆ. ಅವರು ಪೊಲೀಸರ ಮೂಲಕ ಪಕ್ಷ ಮತ್ತು ಮನೆಯನ್ನು ಸಂಘಟನೆ ಮಾಡಿಕೊಂಡಿದ್ದಾರೆ. ಅವರು ಪ್ರೀತಿಯಿಂದ ಜಿಲ್ಲೆಯನ್ನು ಹಿಡಿತದಲ್ಲಿ ಇಟ್ಟುಕೊಂಡಿಲ್ಲ ಬದಲಾಗಿ ಭಯದಲ್ಲಿ ಇಟ್ಟುಕೊಂಡಿದ್ದಾರೆ.

ಈ ಭಾಗದ ಜನ ಆರ್ಥಿಕವಾಗಿ ಮುಂದೆ ಬರಬಾರದು. ಕಾರಲ್ಲಿ ಬರಬಾರದು. ಪ್ಯಾಂಟ್ ಶರ್ಟ್ ಹಾಕಬಾರದು ಎಂದು ನಿರ್ಧರಿಸಿದ್ದಾರೆ. ದಲಿತರು ತಮ್ಮ ಕಷ್ಟ ಹೇಳಿಕೊಳ್ಳಲು ಮನೆಗೆ ಬಂದರೆ ಮತ್ತೆ ಹೋಗಿ ಸ್ನಾನ ಮಾಡುವ ನೀಚ ರಾಜಕಾರಣಿ ಅವರು. ಎಂಪಿ ಚುನಾವಣೆಯಲ್ಲಿ ಹೇಗೋ ಸಿದ್ದರಾಮಯ್ಯ ಅವರ ಕೈಕಾಲು ಹಿಡಿದು ಗೆದ್ದಿದ್ದಾರೆ" ಎಂದು ಕಟು ಶಬ್ಧಗಳಿಂದ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಹಾಡಹಗಲೇ ಮಾರಕಾಸ್ತ್ರಗಳಿಂದ ಬೆದರಿಸಿ ಮನೆ ದರೋಡೆ; ಬೆಚ್ಚಿಬಿದ್ದ ಚನ್ನಪಟ್ಟಣ ನಗರ
First published: