ಬಿಜೆಪಿ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಸಹಿಸಲ್ಲ: ಎ ಮಂಜು ಟೀಕೆ

A Manju Statement: ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು ಪ್ರಾಬಲ್ಯ ತೋರುವುದನ್ನು ಬಿಜೆಪಿ ಇಷ್ಟ ಪಡುವುದಿಲ್ಲ. ಅದಕ್ಕೆ ಪರಿಷತ್ ಚುನಾವಣೆಯಲ್ಲಿ ಈ ಭಾಗದ ಜನರು ಬಿಜೆಪಿಗೆ ಪಾಠ ಕಲಿಸಿದ್ದಾರೆ ಎಂದು ಅರಕಲಗೂಡು ಮಂಜು ಹೇಳಿದ್ದಾರೆ.

ಅರಕಲಗೂಡು ಮಂಜು

ಅರಕಲಗೂಡು ಮಂಜು

  • Share this:
ಹಾಸನ: ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನ ಮಗನಿಗೆ ಟಿಕೆಟ್ ತಪ್ಪಲು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂಗೌಡ (Preetham Gowda) ಕಾರಣ ಎಂದು ಮಾಜಿ ಸಚಿವ ಎ.ಮಂಜು (A Manju) ಗಂಭೀರ ಆರೋಪ ಮಾಡಿದ್ದಾರೆ. ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ಕೊಣನೂರಿನಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯಿಂದ ನನ್ನ ಮಗನಿಗೆ ಟಿಕೆಟ್ ಕೊಡಿ ಅಂಥಾ ನಾವು ಕೇಳಿರಲಿಲ್ಲ, ಬಿಜೆಪಿಯವರೇ ಮಂಥರ್ ಗೌಡನಿಗೆ (Manthar Gowda) ಟಿಕೆಟ್ ಕೊಡ್ತಿವಿ ಅಂದಿದ್ದರು ಎಂದು ಹೇಳಿದರು.

ನಿಮ್ಮ ಮಗ ಸ್ಪರ್ಧಿಸಿದರೆ ನಾನು ಐದು ಕೋಟಿ ಬಂಡವಾಳ ಹಾಕ್ತಿನಿ ಅಂತ ಹಾಸನದಲ್ಲಿ ನಡೆದ ಬಿಜೆಪಿ ಪಕ್ಷದ ಮುಖಂಡರ ಸಭೆಯಲ್ಲಿ ಶಾಸಕ‌ ಪ್ರೀತಂಗೌಡ ಹೇಳಿದ್ದರು. ಅವರು ಹಾಗೇ ಹೇಳಿದ್ದರೋ ಇಲ್ಲವೋ ಬಿಜೆಪಿ ‌ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್ ಅವರನ್ನೇ ಕೇಳಿ. ನಂತರ ಅವರ ಬೆಂಬಲಿಗ ಕ್ವಾಲಿಟಿ ಬಾರ್ ಶರತ್ ಅವರನ್ನು ಮಂಥರ್ ಬಳಿ ಕಳ್ಸಿ ನೀನು ಇಲ್ಲಿ ನಿಲ್ಲಬೇಡ.‌‌ ನೀನು ಕಾಂಗ್ರೆಸ್ ನಿಂದ ಜಿ.ಪಂ‌. ಸದಸ್ಯ ಆಗಿದ್ದಿಯಾ. ಮುಂದಿನ ಎಂ.ಎಲ್.ಎ. ಎಲೆಕ್ಷನ್​ಗೆ ಸ್ಪರ್ಧೆ ಮಾಡು ಅಂಥಾ ಹೇಳ್ಸಿದ್ರು. ಈ ಬಗ್ಗೆ ನಾನು ಶಾಸಕರನ್ನು ಕೇಳಿದಾಗ ಮಂತ್ರಿ ಸ್ಥಾನ ಕೊಟ್ಟರೆ ಸಪೋರ್ಟ್ ಮಾಡಣ ಅಂತ ಇದ್ದೆ, ಆದರೆ ಮಂತ್ರಿ ಸ್ಥಾನ ಕೊಡದಿದ್ದಕ್ಕೆ ಬೆಂಬಲ‌ ನೀಡಲ್ಲ ಅಂಥಾ ಪ್ರೀತಂಗೌಡ ಹೇಳಿದ್ರು. ಇವೆಲ್ಲವೂ ಆದ ಮೇಲೆ ಕಾಂಗ್ರೆಸ್ ನಾಯಕರು ಮಂಥರ್ ಗೌಡನನ್ನು ಗುರುತಿಸಿ ಕೊಡಗಿನಲ್ಲಿ ಟಿಕೆಟ್ ನೀಡಿದರು. ಆದರೆ ಮತದಾರರು ಸರ್ಕಾರದ ಪರ ಮತ ಹಾಕಿದ್ದಾರೆ. ಆದ್ದರಿಂದ ಕೊಡಗಿನಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಪೈಪೋಟಿ ಕೊಟ್ಟಿದೆ, ಕೇವಲ ಹದಿನೈದು ದಿನದಲ್ಲಿ ಅಷ್ಟು ಮತ ನೀಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎನ್ನುವುದನ್ನು ತೋರಿಸುತ್ತದೆ ಎಂದು ಅರಕಲಗೂಡು ಮಂಜು ಅಭಿಪ್ರಾಯಪಟ್ಟರು.

ಪ್ರೀತಂಗೌಡ ನಡೆಯಿಂದ ನನ್ನ ಕುಟುಂಬದವರು ಡಿಸ್ಟರ್ಬ್ ಆಗಿದ್ದರು. ಎಲ್ಲರನ್ನೂ ಕಳ್ಕಂಡು ಮಗನನ್ನೂ ಕಳೆದುಕೊಳ್ಳಬಾರದು ಎಂದು ತೀರ್ಮಾನ ಮಾಡ್ದೆ. ಮಗನಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದೇನೆಯೇ ಹೊರತು ಬಿಜೆಪಿ ವಿರುದ್ಧ ಹೇಳಿಕೆ ನೀಡಿಲ್ಲ‌ ಎಂದು ಮಾಜಿ ಸಚಿವರು ಸ್ಪಷ್ಟಪಡಿಸಿದರು.

ಎರಡು ಪಕ್ಷಗಳಲ್ಲಿನ ನಾಯಕರ ಕೊರತೆಯೇ ಎಂ.ಎಲ್.ಸಿ. ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ಹೀನಾಯವಾಗಿ ಸೋಲಲು ಕಾರಣ. ಕಳೆದ ಬಾರಿ ಏಳು ಶಾಸಕರು, ಓರ್ವ ಎಂಪಿ ಇದರ ಜೊತೆಗೆ ಜೆಡಿಎಸ್​ಗೂ ಕಾಂಗ್ರೆಸ್​ಗೂ 900 ಓಟು ವ್ಯತ್ಯಾಸವಿತ್ತು. ಆದರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಂಡು ಬಂದಿದ್ದೆ ಎಂದರು‌.

ಇದನ್ನೂ ಓದಿ: ಆತ್ಮಹತ್ಯೆಗೂ ಮುನ್ನ ಹೆತ್ತ ಮಗುವನ್ನೇ ನೀರಿನ ಬಕೆಟ್​ನಲ್ಲಿ ಮುಳುಗಿಸಿ ಕೊಲೆ ಮಾಡಿದ ತಾಯಿ; ನಂಜನಗೂಡಲ್ಲಿ ದಾರುಣ ಘಟನೆ

ಒಳಒಪ್ಪಂದ ಮಾಡಿಕೊಳ್ಳುವ ಪ್ರವೃತ್ತಿ ಹಾಸನದ ಕೆಲವು ನಾಯಕರಲ್ಲಿ ಇದ್ದು, ಮತದಾರರ ಮನವೊಲಿಸುವಲ್ಲಿ ಮುಖಂಡರು ವಿಫಲರಾಗಿದ್ದಾರೆ. ಅವರವರ ಸ್ವಾರ್ಥಕ್ಕೆ, ಸ್ವಹಿತಾಸಕ್ತಿಗೆ ಪಕ್ಷ ಬಲಿ ಕೊಟ್ಟಿದ್ದಾರೆ ಎಂದು ಕುಟುಕಿದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಬಿಟ್ಟರೆ ನನಗೆ ಯಾವುದೇ ಅಧಿಕಾರ ಕೊಟ್ಟಿರಲಿಲ್ಲ. ನಾನು ಮಂಡ್ಯ ಉಸ್ತುವಾರಿ ಇದ್ದಾಗ 620 ಗ್ರಾ.ಪಂ. ಸದಸ್ಯರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ತಟಸ್ಥವಾಗಿದ್ದೆ ಹೊರತು ಯಾರನ್ನೂ ಬೆಂಬಲಿಸಲಿಲ್ಲ.‌ ಈಗಲೂ ನಾನು ಬಿಜೆಪಿಯಲ್ಲೇ ಇದ್ದೇನೆ ಅಂಥಾ ನನಗೆ ಅನ್ನಿಸುತ್ತಿದೆ. ಆದರೆ ಪಕ್ಷ ಏನು ಹೇಳುತ್ತೆ ಗೊತ್ತಿಲ್ಲ. ಅಧಿಕೃತವಾಗಿ ಬಿಜೆಪಿ ಪಕ್ಷದಲ್ಲಿದ್ದೇನೆ. ಮುಂದೆ ನನ್ನ ಕ್ಷೇತ್ರದ ಮತದಾರರು ಯಾವ ಪಕ್ಷಕ್ಕೆ ಹೋಗಿ ಅಂತಾರೋ ಅಲ್ಲಿಗೆ ಹೋಗುತ್ತೇನೆ ಎಂದು ಎ ಮಂಜು ತಿಳಿಸಿದರು.

ನನ್ನ ಅವಮಾನಿಸಿದ್ದಕ್ಕೆ ಬಿಜೆಪಿಗೆ ಶಾಸ್ತಿ:

ನನಗೆ ಬಿಜೆಪಿಯವರು ಅವಮಾನ ಮಾಡಿದ್ದಾರೆ. ಅದಕ್ಕೆ ಈ ಚುನಾವಣೆಯಲ್ಲಿ ಅನುಭವಿಸಿದ್ದಾರೆ. ನನಗೆ ಅವಮಾನ ಮಾಡಿದ್ದಕ್ಕೆ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಗೆ ಎಷ್ಟು ಓಟು ಬಂತು ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Rape Shame: ರೇಪ್ ಅನಿವಾರ್ಯ ಆದಾಗ ಆನಂದಿಸಬೇಕು ಎಂದ ರಮೇಶ್ ಕುಮಾರ್; ಮುಗುಳ್ನಕ್ಕ ಸ್ಪೀಕರ್

ಸರ್ಕಾರ ಯಾವುದು ಆಡಳಿತದಲ್ಲಿ ಇರುತ್ತೋ ಆ ಪಕ್ಷ ಹೆಚ್ಚು ಸೀಟ್ ಗಳನ್ನು ಗೆಲ್ಲುತ್ತಿತ್ತು.‌ ಬಿಜೆಪಿ ಪಕ್ಷ ಹನ್ನೊಂದು ಸ್ಥಾನ ಗೆದ್ದಿದೆ ಅಂಥಾ ಹೇಳ್ಕಳದು ಬಿಟ್ಟರೆ, ಜನರಲ್ ಆಗಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆದ್ದಿದ್ದೇವೆ ಎಂದು ಹೇಳುವುದು ಸಮಜಾಯಿಷಿ ಅಲ್ಲ.‌ ಮತದಾರರು ಬಿಜೆಪಿ ಕೈಹಿಡಿದಿಲ್ಲ‌. ಇದು ನನ್ನ ವೈಯುಕ್ತಿಕ ಅಭಿಪ್ರಾಯವಾಗಿದೆ. ಕಾಂಗ್ರೆಸ್ ಪರ ಮತ ಹಾಕಿರುವುದು ನೋಡಿದರೆ ಕಾಂಗ್ರೆಸ್ ನಾಯಕರು ಹೇಳುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಅಂಥಾ ಹೇಳುತ್ತಿರುವುದು ನಿಜ ಅನ್ಸುತ್ತೆ ಎಂದು ಮಂಜು ಅವರು ಕಾಂಗ್ರೆಸ್ ಅನ್ನು ಹೊಗಳಿ ಮುಂದೆ ಆ ಪಕ್ಷ ಸೇರುವ ಸುಳಿವು ನೀಡಿದರು.

ಮಗನ ಪರ ಕೆಲಸ ಮಾಡುತ್ತೇನೆ ಅಂತ ನನ್ನ ಮೇಲೆ‌ ಕ್ರಮ ತಗೊಂಡ್ರು, ರಮೇಶ್ ಜಾರಕಿಹೊಳಿ ಮೇಲೆ ಯಾಕೆ ಕ್ರಮ ತಗೊಂಡಿಲ್ಲ? ಶಾಸಕ ಅಂತ ಅವನ ಮೇಲೆ ಕ್ರಮ ತಗೆದುಕೊಳ್ಳಲಿಲ್ಲ. ಅದಕ್ಕೆ ಅಲ್ಲಿ ಅವನ ಸಹೋದರ ಗೆದ್ದ. ಇಲ್ಲಿ ನಾನು ಎಂ.ಎಲ್.ಎ. ಅಲ್ಲ ಅಂಥ ಕ್ರಮ ತಗೊಂಡ್ರು. ಅದಕ್ಕೆ ಎಂ.ಎಲ್.ಸಿ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಓಟು ಬಂತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್.ಟಿ. ಸೋಮಶೇಖರ್ ಮಂತ್ರಿ. ಅವರ ಓಎಸ್‌ಡಿ ಅವತ್ತು ಸಾಯಂಕಾಲದವರೆಗೂ ಮಂತ್ರಿ ಜೊತೆ ಇದ್ದ. ಮಾರನೇ ದಿನ ಕಾಂಗ್ರೆಸ್ ನಿಂದ ಟಿಕೆಟ್ ಕೊಟ್ಟಿದ್ದಾರೆ. ಅವನ ಮೇಲೆ ಯಾಕೆ ಕ್ರಮ ತೆಗೆದುಕೊಂಡಿಲ್ಲ. ನೂರಕ್ಕೆ ನೂರರಷ್ಟು ನನ್ನನ್ನು ಟಾರ್ಗೆಟ್ ಮಾಡಿದ್ರು. ಅದಕ್ಕೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಈ ಸ್ಥಿತಿ ಬಂದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಐದು ಹೊಸ omicron​ ಪ್ರಕರಣ ಪತ್ತೆ; ಸಚಿವ ಕೆ ಸುಧಾಕರ್​​

ಬಿಜೆಪಿ ಒಕ್ಕಲಿಗರ ಪ್ರಾಬಲ್ಯ ಸಹಿಸಲ್ಲ:

ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರು ಪ್ರಾಬಲ್ಯ ಮಾಡುವುದನ್ನು ಬಿಜೆಪಿಯವರು ಇಷ್ಟ ಪಡುತ್ತಿಲ್ಲ. ಅದಕ್ಕೆ ಎಂ.ಎಲ್.ಸಿ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಒಬ್ಬ ಮಂತ್ರಿ ಇಟ್ಕಂಡು ಮಂಡ್ಯದಲ್ಲಿ ಐವತ್ತು ಓಟು ಬಂದಿದೆ. 600 ಓಟಿನಲ್ಲಿ ಐವತ್ತು ಓಟು ಬಂದಿದೆ ಅಂದರೆ ನಾಚಿಕೆ ಆಗಲ್ವಾ. ಸಿಎಂ ಆಗಿದ್ದ ಯಡಿಯೂರಪ್ಪ ಮಂಡ್ಯ ಜಿಲ್ಲೆಯವರು, ಪಾಪ ಅವರ ಸಂಬಂಧಿ ಬೂಕಳಿ ಮಂಜು, ಕಣ್ಣೀರು ಹಾಕಿ, ನನಗೆ ಈ ರೀತಿ ಮಾಡ್ತಿದ್ದಾರೆ ಎಂದು ಹೇಳಿದ. ಒಳ ಒಪ್ಪಂದದ ಏಟಿನಿಂದ ಬಿಜೆಪಿಗೆ ಲಾಸ್ ಆಗ್ತಿದೆ. ಉಸ್ತುವಾರಿ ಮಂತ್ರಿ ಇದ್ದರೂ ಮೈಸೂರಿನಲ್ಲಿ ಸೋತಿದ್ದಾರೆ. ಅವರು ಯಾರ ಜೊತೆ ಒಪ್ಪಂದ ಮಾಡಿಕೊಂಡಿದ್ದರು ಎನ್ನುವುದನ್ನು ಅವರನ್ನೇ ಕೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಂ.ಎಲ್.ಸಿ. ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಅಲ್ಲಿನ ಉಸ್ತುವಾರಿ ಸಚಿವರೇ ಹೊಣೆ ಹೊರಬೇಕು. ಹಾಸನ ಜಿಲ್ಲೆಯಲ್ಲಿ ಯಾರು ಜವಾಬ್ದಾರಿ ಹೊರಬೇಕು..? ಜಿಲ್ಲಾಧ್ಯಕ್ಷ ಹಾಗೂ ಶಾಸಕ‌ ಜವಾಬ್ದಾರಿ ಹೊರಬೇಕು. ಆಯಾ ಜಿಲ್ಲೆಯ ಉಸ್ತುವಾರಿ ಸಚಿವರೇ ಜವಾಬ್ದಾರಿ ಹೊರಬೇಕು ಎಂದು ಗರಂ ಆದರು.

ವರದಿ: ಶಶಿಧರ್.ಬಿ.ಸಿ.
Published by:Vijayasarthy SN
First published: