3ನೇ ದಿನಕ್ಕೆ ಮಾಜಿ ಮೇಯರ್ ಸಂಪತ್ ರಾಜ್ ಜೈಲುವಾಸ; ಜೈಲಿನಲ್ಲೇ ಎನ್ಐಎ ಅಧಿಕಾರಿಗಳಿಂದ ತೀವ್ರ ವಿಚಾರಣೆ

ಇನ್ನು ಸಂಪತ್ ರಾಜ್ ಗೆ ಜೈಲಿನಲ್ಲಿ ಪ್ರತಿದಿನ ಎರಡು ಬಾರಿ ವೈದ್ಯರು ಚಿಕಿತ್ಸೆ ನೀಡ್ತಾಯಿದ್ದು, ಹೃದಯದ ಸಮಸ್ಯೆ ಇದೆ ಅಂತ ಜೈಲಿನ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ.

ಸಂಪತ್ ರಾಜ್

ಸಂಪತ್ ರಾಜ್

  • Share this:
ಆನೇಕಲ್ :  ಮಾಜಿ ಮೇಯರ್ ಸಂಪತ್ ರಾಜ್ ಜೈಲುವಾಸ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಎನ್ಐಎ ಅಧಿಕಾರಿಗಳು ಜೈಲಿನಲ್ಲಿಯೇ ವಿಚಾರಣೆಗೆ ಒಳಪಡಿಸಿದ್ದಾರೆ. ಮಾಜಿ ಮೇಯರ್ ಸಂಪತ್ ರಾಜ್, ಅಖಂಡ ಶ್ರೀನಿವಾಸ್ ರವರ ಮನೆಗೆ ಬೆಂಕಿ ಬಿದ್ದ ವಿಚಾರದಲ್ಲಿ ಇದೀಗ ಜೈಲು ಪಾಲಾಗಿದ್ದು, ಒಂದೊಂದು ದಿನ, ಒಂದೊಂದು ಕ್ಷಣ ಜೈಲಿನಲ್ಲಿ  ಕಳೆಯುತ್ತಿದ್ದಾರೆ. ನಿನ್ನೆ ಸಹ ನನಗೆ‌ ಎದೆ ನೋವು ಇದೆ. ಹೆಚ್ಚಿನ ಚಿಕಿತ್ಸೆ ಬೇಕು ಅಂತ ಹೇಳಿದ್ದ ಸಂಪತ್ ರಾಜ್ ನನ್ನು ಅಧಿಕಾರಿಗಳು ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವಾಪಸ್ ಕಳಿಸಿದ್ದರು. ಸದ್ಯ ಜೈಲಿನಲ್ಲಿರುವ ಸಂಪತ್ ರಾಜ್ ಬೆಳಗ್ಗೆ ಜೈಲಿನಲ್ಲಿ ಮಾಡಿದ್ದ ಉಪ್ಪಿಟ್ಟು ಮಧ್ಯಾಹ್ನದ ಊಟ ತಿಂದು ಜೈಲ್ ನ ಕೊಠಡಿಯಲ್ಲಿ ಎನ್ ಐಎ ವಿಚಾರಣೆ ಎದುರಿಸುತ್ತಿದ್ದಾರೆ.

ಇನ್ನೂ ಕೋರ್ಟ್ ಅನುಮತಿ ಪಡೆದಿದ್ದ ಎನ್ಐಎ ಅಧಿಕಾರಿಗಳು ಇಂದು ಜೈಲಿನಲ್ಲಿರುವ‌ ಸಂಪತ್ ರಾಜ್ ಅವರನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. ಸುಮಾರು ಬೆಳಿಗ್ಗೆ ಹತ್ತು ಘಂಟೆಯ ಸುಮಾರಿಗೆ ಜೈಲಿಗೆ ಬಂದ ಎನ್ಐಎ ಅಧಿಕಾರಿಗಳು ಸರಿಸುಮಾರು ಆರರಿಂದ ಏಳು ಘಂಟೆಗಳ ಕಾಲ ಸಂಪತ್ ರಾಜ್ ನನ್ನು ವಿಚಾರಣೆ ನಡೆಸಿದ್ದಾರೆ. ಇನ್ನು ಸಂಪತ್ ರಾಜ್ ಪರ ವಕೀಲರು ಸಹ ಸಂಪತ್ ರಾಜ್ ಅವರ ಬೇಲ್ ಗಾಗಿ ಹರಸಾಹಸ ಪಡುತ್ತಿದ್ದಾರೆ. ಇನ್ನು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ ಎನ್ಐಎ ಅಧಿಕಾರಿಗಳು ಸಂಪತ್ ರಾಜ್ ಗೆ ಬೆವರಿಳಿಯುವಂತೆ ಮಾಡಿದ್ದರು ಎನ್ನಲಾಗಿದೆ.

ಇದನ್ನು ಓದಿ: ಲಿಂಗಾಯಿತ ಧರ್ಮ ಒಡೆದವರು ಯಾರು ಎಂಬುದಕ್ಕೆ ಉತ್ತರ ಕೊಡುವ ಕಾಲ ಬಂದಿದೆ, ಶೀಘ್ರದಲ್ಲಿ ಎಲ್ಲವನ್ನು ಬಿಚ್ಚಿಡುತ್ತೇನೆ; ಎಂಬಿ ಪಾಟೀಲ

ಇನ್ನು ಸಂಪತ್ ರಾಜ್ ಗೆ ಜೈಲಿನಲ್ಲಿ ಪ್ರತಿದಿನ ಎರಡು ಬಾರಿ ವೈದ್ಯರು ಚಿಕಿತ್ಸೆ ನೀಡ್ತಾಯಿದ್ದು, ಹೃದಯದ ಸಮಸ್ಯೆ ಇದೆ ಅಂತ ಜೈಲಿನ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಎನ್ಐಎ ಅಧಿಕಾರಿಗಳ ಚಾಟಿಯಿಂದ ಸಂಪತ್ ರಾಜ್ ಥಂಡ ಹೊಡೆದಿದ್ದು, ಅದ್ಯಾವಾಗ ಬೇಲ್ ಸಿಗುತ್ತದೆಯೋ ಎಂದು ಜಾತಕ ಪಕ್ಷಿಯಂತೆ ಜೈಲಿನಲ್ಲಿ ಕಾದು ಕುಳಿತ್ತಿದ್ದಾರೆ.

ವರದಿ : ಆದೂರು ಚಂದ್ರು
Published by:HR Ramesh
First published: