ಕ್ಷೇತ್ರದ ಜನರೇ ಮುಖ್ಯ, ಕೈ ನಾಯಕರಲ್ಲ ಎಂದ ಹೆಚ್.ಸಿ. ಬಾಲಕೃಷ್ಣ; ಬಿಜೆಪಿ ಸೇರಲಿದ್ದಾರಾ ಮಾಜಿ ಶಾಸಕ?

ಇತ್ತೀಚೆಗೆ ಕಾಂಗ್ರೆಸ್​ನಲ್ಲಿ ನನ್ನ ಶ್ರಮಕ್ಕೆ ಬೆಲೆಸಿಗುತ್ತಿಲ್ಲ ಎಂದು ಡಿ.ಕೆ. ಬ್ರದರ್ಸ್ ಹೆಸರೇಳದೆಯೇ ಹೆಚ್.ಸಿ. ಬಾಲಕೃಷ್ಣ ಅವರು ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ.

ಹೆಚ್.ಸಿ. ಬಾಲಕೃಷ್ಣ

ಹೆಚ್.ಸಿ. ಬಾಲಕೃಷ್ಣ

 • Share this:
  ರಾಮನಗರ(ಮೇ 13): ಕಾಂಗ್ರೆಸ್ ಮುಖಂಡ, ಮಾಗಡಿ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಇಂದು ಪಕ್ಷದ ನಾಯಕರ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಗಡಿಯಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಬಾಲಕೃಷ್ಣ, ಕೈ ನಾಯಕರ ನಡೆಯ ಬಗ್ಗೆ ಬೇಸರ ಹೊರಹಾಕಿದ್ದಾರೆ.

  ನನಗೆ ನನ್ನ ಕ್ಷೇತ್ರದ ಜನರಷ್ಟೇ ಮುಖ್ಯ, ಪಕ್ಷದ ನಾಯಕರಲ್ಲ. ನನ್ನನ್ನ ಗೆಲ್ಲಿಸೋದು ಕ್ಷೇತ್ರದ ಜನ ಮಾತ್ರ. ಪಕ್ಷದ ನಾಯಕರು ಬಂದು ನನ್ನನ್ನ ಗೆಲ್ಲಿಸಲ್ಲ. ನನಗೆ ಮಂತ್ರಿ ಸ್ಥಾನದ ಅವಕಾಶ ಬಂದಾಗ ಮಾತ್ರ ನಾಯಕರ ಅವಶ್ಯಕತೆ ಇರುತ್ತೆ, ಇಲ್ಲಾಂದ್ರೆ ಕ್ಷೇತ್ರದ ಜನರೇ ನನಗೆ ಮುಖ್ಯ. ನನ್ನ ಬೆಳೆಸೋದು, ಉಳಿಸೋದು ಕ್ಷೇತ್ರದ ಜನರಷ್ಟೇ ಎನ್ನುವ ಮೂಲಕ ಖಾರವಾಗಿಯೇ ಕಿಡಿಕಾರಿದ್ದಾರೆ.

  ನನಗೆ ಪಕ್ಷದ ನಾಯಕರ ನಡೆ ಬೇಸರ ತಂದಿದೆ. ನಾನು ಬಿಜೆಪಿಯಲ್ಲಿದ್ದೆ, ಜೆಡಿಎಸ್​ನಲ್ಲಿದ್ದೆ. ಆ ಎರಡೂ ಪಕ್ಷವನ್ನ ಪ್ರಾಮಾಣಿಕವಾಗಿ ಕಟ್ಟಿ ಬೆಳೆಸಿದ್ದೇನೆ. ಆದರೆ ಇತ್ತೀಚೆಗೆ ಕಾಂಗ್ರೆಸ್​ನಲ್ಲಿ ನನ್ನ ಶ್ರಮಕ್ಕೆ ಬೆಲೆಸಿಗುತ್ತಿಲ್ಲ ಎಂದು ಡಿ.ಕೆ. ಬ್ರದರ್ಸ್ ಹೆಸರೇಳದೆಯೇ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ.

  ಇದನ್ನೂ ಓದಿ: ಕರ್ತವ್ಯದಲ್ಲಿದ್ದಾಗಲೇ ಅಪಘಾತ, ಪೊಲೀಸ್‌ ಪೇದೆ ಸಾವು; ಸರ್ಕಾರದ ನೆರವಿಗೆ ಸಹೋದ್ಯೋಗಿಗಳ ಮನವಿ

  ಇನ್ನು, ಬಾಲಕೃಷ್ಣ ಈ ರೀತಿ ಮಾತನಾಡಿರುವುದನ್ನ ಗಮನಿಸಿದರೆ ಭವಿಷ್ಯದಲ್ಲಿ ಬಿಜೆಪಿ ಪಕ್ಷ ಸೇರುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ. ಇನ್ನು ಇದಕ್ಕೆ ಪೂರಕವೆಂಬಂತೆ ನಿನ್ನೆಯಷ್ಟೇ ಬಿಡದಿ ಟೌನ್​ಶಿಪ್ ವಿಚಾರವಾಗಿ ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನ ಬಾಲಕೃಷ್ಣ ಭೇಟಿ ಮಾಡಿರೋದು ಕಮಲ ಹಿಡಿಯುವ ಸಾಧ್ಯತೆ ಮತ್ತಷ್ಟು ಹೆಚ್ಚಾಗಿದೆ.

  ವರದಿ: ಎ.ಟಿ. ವೆಂಕಟೇಶ್

  First published: