ಸೋಲಿನ ಬಳಿಕ ಎಚ್ಚೆತ್ತುಕೊಂಡ ಕಾಂಗ್ರೆಸ್​; ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾದ ನಾಯಕರು

ಪಕ್ಷದಲ್ಲಿ ಭಿನ್ನಾಭಿಪ್ರಾಯ ಮುಂದುವರೆದರೆ ಬಿಜೆಪಿ ಇದರ ಲಾಭಾ ಪಡೆಯುವುದು ಖಚಿತ. ಈ ಹಿನ್ನೆಲೆ ಮುನಿಸು ಮರೆತು ಪಕ್ಷದ ಬಲವರ್ಧನೆಗೆ ಮುಂದಾಗಬೇಕು. ಇದಕ್ಕೆ ಏನು ಮಾಡಬೇಕು. ಮುಂದಿನ ನಡೆ ಹೇಗೆ ಎಂಬ ಕುರಿತು ಚರ್ಚೆ ನಡೆಸಲು ಇಂದು ನಾಯಕರು ಸಭೆ ಸೇರಲು ಮುಂದಾಗಿದ್ದಾರೆ. 

Seema.R | news18-kannada
Updated:January 4, 2020, 11:28 AM IST
ಸೋಲಿನ ಬಳಿಕ ಎಚ್ಚೆತ್ತುಕೊಂಡ ಕಾಂಗ್ರೆಸ್​; ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾದ ನಾಯಕರು
ಕಾಂಗ್ರೆಸ್​ ನಾಯಕರು
  • Share this:
ಬೆಂಗಳೂರು (ಜ.04): ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಆಗಿದೆ ಸದ್ಯ ಕಾಂಗ್ರೆಸ್​ ನಾಯಕರ ಮನಸ್ಥಿತಿ. ಉಪಚುನಾವಣೆ ಸೋಲಿನ ಬಳಿಕ ಎಚ್ಚೆತ್ತಕೊಂಡಿರುವ ಕಾಂಗ್ರೆಸ್​ ನಾಯಕರು, ತಮ್ಮ ಆಂತರಿಕ ಭಿನ್ನಾಭಿಪ್ರಾಯಗಳು ಹೀಗೆ ಮುಂದುವರೆದರೆ ಕಷ್ಟ ಎಂದು ಅರಿತು, ಮುನಿಸು ತೊರೆದು ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಇಂದು ಮಾಜಿ ಡಿಸಿಎಂ ಪರಮೇಶ್ವರ್​ ಮನೆಯಲ್ಲಿ ಸಭೆ ನಡೆಸಲು ಮುಂದಾಗಿದ್ದಾರೆ. 

ಉಪಚುನಾವಣೆಗೆ ಮುನ್ನ ಪಕ್ಷದಲ್ಲಿ ಮೂಡಿದ್ದ ವಲಸಿಗ ಹಾಗೂ ಮೂಲ ಕಾಂಗ್ರೆಸ್​ನಾಯಕರ ನಡುವಿನ ತಿಕ್ಕಾಟ ಪಕ್ಷದ ಸೋಲಿಗೆ ಕಾರಣವೂ ಆಗಿತ್ತು. ಅಧಿಕಾರ, ಪಕ್ಷದ ಚುಕ್ಕಾಣಿಗಾಗಿ ನಾಯಕರ ನಡುವೆ ಮೂಡಿದ ಪ್ರತಿಷ್ಟೆ, ಹಿರಿ-ಕಿರಿ ನಾಯಕರ ಆಂತರಿಕ ಸಂಘರ್ಷಗಳು ಕೂಡ ಉಪಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾಗಿತ್ತು.

ಇದೇ ರೀತಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಮುಂದುವರೆದರೆ ಬಿಜೆಪಿ ಇದರ ಲಾಭಾ ಪಡೆಯುವುದು ಖಚಿತ. ಈ ಹಿನ್ನೆಲೆ ಮುನಿಸು ಮರೆತು ಪಕ್ಷದ ಬಲವರ್ಧನೆಗೆ ಮುಂದಾಗಬೇಕು. ಇದಕ್ಕೆ ಏನು ಮಾಡಬೇಕು. ಮುಂದಿನ ನಡೆ ಹೇಗೆ ಎಂಬ ಕುರಿತು ಚರ್ಚೆ ನಡೆಸಲು ಇಂದು ನಾಯಕರು ಸಭೆ ಸೇರಲು ಮುಂದಾಗಿದ್ದಾರೆ.

ಇದನ್ನು ಓದಿ: ಕಲಘಟಗಿಯಲ್ಲಿ ನೆರೆಸಂತ್ರಸ್ತರಿಗೆ ನೀಡಿದ್ದ ಅರ್ಧ ಹಣ ವಾಪಸ್ - ಜನರ ಗಾಯದ ಮೇಲೆ ಬರೆ ಎಳೆದ ಅಧಿಕಾರಿಗಳು

ಇದಕ್ಕಾಗಿ ಪರಮೇಶ್ವರ್​ ಕಾಂಗ್ರೆಸ್​ ನಾಯಕರು ಇಂದು ಸಂಜೆ ಕಾಫಿ ಪಾರ್ಟಿಗೆ ಆಹ್ವಾನಿಸಿದ್ದು, ಸಭೆಯಲ್ಲಿ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್​, ಮುನಿಯಪ್ಪ, ದಿನೇಶ್​ ಗುಂಡೂರಾವ್​, ಡಿಕೆ ಶಿವಕುಮಾರ್​, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲೆ ಸೇರಿದಂತೆ ಅನೇಕ ಪ್ರಮುಖರು ಹಾಜರಾಗಲಿದ್ದಾರೆ.
Published by: Seema R
First published: January 4, 2020, 11:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading