ಮೆಡಿಕಲ್ ಸೀಟ್ ಬ್ಲಾಕಿಂಗ್ ನಲ್ಲಿ ಸಾವಿರಾರು ಕೋಟಿ ಅವ್ಯವಹಾರ; ಸರ್ಕಾರಕ್ಕೆ ಐಟಿ ಇಲಾಖೆಗೆ ಶಂಕರ್​ ಬಿದರಿ ಚಾಟಿ

ಮೆಡಿಕಲ್ ಸೀಟ್​ ಬ್ಲಾಕಿಂಗ್​ನಲ್ಲಿ ಬರೋಬ್ಬರಿ 1,100 ಕೋಟಿ ಹಣ ವ್ಯವಹಾರವಾಗಿದೆ. ಖಾಸಗಿ ಮೆಡಿಕಲ್ ಕಾಲೇಜುಗಳು ಇದರಿಂದ ಸಾವಿರಾರು ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ಶಂಕರ್​ ಬಿದರಿ ಆರೋಪಿಸಿದ್ದಾರೆ.

news18-kannada
Updated:February 14, 2020, 3:31 PM IST
ಮೆಡಿಕಲ್ ಸೀಟ್ ಬ್ಲಾಕಿಂಗ್ ನಲ್ಲಿ ಸಾವಿರಾರು ಕೋಟಿ ಅವ್ಯವಹಾರ; ಸರ್ಕಾರಕ್ಕೆ ಐಟಿ ಇಲಾಖೆಗೆ ಶಂಕರ್​ ಬಿದರಿ ಚಾಟಿ
ಶಂಕರ್​ ಬಿದರಿ
  • Share this:
ಬೆಂಗಳೂರು (ಫೆಬ್ರವರಿ 14); ಈ ವರ್ಷ ಮೆಡಿಕಲ್ ಸೀಟ್ ಬ್ಲಾಕಿಂಗ್​ನಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ. ಆದರೂ ಸರ್ಕಾರ, ಐಟಿ ಇಲಾಖೆ ಏನು ಮಾಡುತ್ತಿದೆ? ಖಾಸಗಿ ಲಾಬಿಗೆ ಮಣಿದು ಸುಮ್ಮನಾಯಿತೇ? ಎಂದು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಮಾಜಿ ಐಪಿಎಸ್​ ಅಧಿಕಾರಿ ಶಂಕರ್​ ಬಿದರಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಇಂದು ಈ ಕುರಿತು ತಮ್ಮ ಖಾಸಗಿ ಫೇಸ್​ಬುಕ್​ ಖಾತೆಯಲ್ಲಿ ಆರೋಪ ಮಾಡಿರುವ ಅವರು, "ಮೆಡಿಕಲ್ ಸೀಟ್​ ಬ್ಲಾಕಿಂಗ್​ನಲ್ಲಿ ಬರೋಬ್ಬರಿ 1,100 ಕೋಟಿ ಹಣ ವ್ಯವಹಾರವಾಗಿದೆ. ಖಾಸಗಿ ಮೆಡಿಕಲ್ ಕಾಲೇಜುಗಳು ಇದರಿಂದ ಸಾವಿರಾರು ಕೋಟಿ ಹಣ ಲೂಟಿ ಮಾಡಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕಳೆದ ಸೆಪ್ಟೆಂಬರ್​ ತಿಂಗಳಲ್ಲೇ ಸರ್ಕಾರಕ್ಕೆ ಈ ಕುರಿತು ಪತ್ರ ಬರೆದಿರುವ ಮಾಹಿತಿ ಇದೆ.

ಆದರೆ, ರಾಜ್ಯ ಸರ್ಕಾರ ಈ ಕುರಿತು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇನ್ನೂ ಸಾವಿರಾರು ಕೋಟಿ ಅವ್ಯವಹಾರ ನಡೆದರೂ ಸಹ ಐಟಿ ಇಲಾಖೆ ಏನು ಮಾಡುತ್ತಿದೆ? ಖಾಸಗಿ ಲಾಬಿಗೆ ಮಣಿದು ಪ್ರಕರಣದ ಬಗ್ಗೆ ಸರ್ಕಾರ ಹಾಗೂ ಐಟಿ ಇಲಾಖೆ ಮೌನ ವಹಿಸಿದೆಯೇ? ಎಂದು ಪ್ರಶ್ನೆ ಎತ್ತಿದ್ದಾರೆ.ಇದನ್ನೂ ಓದಿ : ಉಮೇಶ್​ ಕತ್ತಿಗೂ ಸಚಿವ ಸ್ಥಾನ ಸಿಗಬೇಕು ಎಂಬುದೇ ನನ್ನ ಆಗ್ರಹ; ಸಚಿವ ರಮೇಶ್​ ಜಾರಕಿಹೊಳಿ
First published: February 14, 2020, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading