ದೇವೇಗೌಡರೇ, ನಿಮ್ಮ ಸೋಲಿಗೆ ನಿಮ್ಮ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳೇ ಕಾರಣ: ಪುಟ್ಟೇಗೌಡ ವಾಗ್ದಾಳಿ

ಮೈತ್ರಿ ಸರ್ಕಾರದಲ್ಲಿ ನಿಮ್ಮ ಕುರ್ಚಿ ಉಳಿಸಲು ಪಾಪ ಡಿಕೆಶಿ, ಹಿಂದಿನ ವೈರತ್ವವನ್ನೂ ಮರೆತು ಪಕ್ಷದ ವರಿಷ್ಠರ ಮಾತಿಗೆ ಕಟಿಬದ್ದನಾಗಿ ಹೋರಾಡಿದ ಆದರೆ ನೀವು ಅವರ ಪರವಾಗಿ ನಡೆದ ಹೋರಾಟದಲ್ಲಿ ಏಕೆ ಭಾಗವಹಿಸಲಿಲ್ಲಾ ಎಂದು ಮಾಜಿ ಪ್ರಧಾನಿ ಹೆಚ್,ಡಿ,ದೇವೇಗೌಡರ ಕುಟುಂಬ ವಿರುದ್ದ ಮಾಜಿ ಶಾಸಕ ಸಿಎಸ್ ಪುಟ್ಟೇಗೌಡ ವಾಗ್ದಾಳಿ ನಡೆಸಿದರು.

G Hareeshkumar | news18
Updated:September 13, 2019, 5:45 PM IST
ದೇವೇಗೌಡರೇ, ನಿಮ್ಮ ಸೋಲಿಗೆ ನಿಮ್ಮ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳೇ ಕಾರಣ: ಪುಟ್ಟೇಗೌಡ ವಾಗ್ದಾಳಿ
ಮಾಜಿ ಶಾಸಕ ಸಿ ಎಸ್​ ಪುಟ್ಟೇಗೌಡ ಹಾಗೂ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ
G Hareeshkumar | news18
Updated: September 13, 2019, 5:45 PM IST
ಹಾಸನ (ಸೆ.13) : ಮಾಜಿ ಪ್ರಧಾನಿ ದೇವೇಗೌಡರೇ ನಿಮ್ಮ ಸೋಲಿಗೆ ನಿಮ್ಮ ಮಕ್ಕಳು, ಸೊಸೆಯಂದಿರು, ಮತ್ತು ಮೊಮ್ಮಕ್ಕಳೇ ಕಾರಣ. ಆದರೆ 2000 ನೇ ಇಸವಿಯ ಹಿಂದಿನ ರಾಜಕಾರಣ ಈಗ ನಡೆಯಲ್ಲಾ ಎಂದು ದೇವೇಗೌಡರ ವಿರುದ್ದ ಕಾಂಗ್ರೆಸ್ ಮಾಜಿ ಶಾಸಕ ಸಿಎಸ್​​.ಪುಟ್ಟೇಗೌಡ ಗುಡುಗಿದ್ದಾರೆ.

ಹಳೆ ಮೈಸೂರು ಮಟ್ಟಿಗೆ ಜೆಡಿಎಸ್ ಕಾಂಗ್ರೆಸ್ ಕಡು ವಿರೋಧಿಗಳೇ. ಆದರೆ ಈಗ ಕಾಂಗ್ರೆಸ್ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ. ಒಂದಾನೊಂದು ಕಾಲದಲ್ಲಿ ಇಡೀ ಹಾಸನ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ದು ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಆದರೆ ಈಗ ಹಾಸನ ಜೆಡಿಎಸ್ ನ ಭದ್ರಕೋಟೆಯಾಗಿದ್ದು, ಸಾಂಪ್ರದಾಯಿಕ ಬದ್ದ ವೈರಿಯ ವಿರುದ್ದ ಕಾಂಗ್ರೆಸ್ ಮತ್ತೆ ಹೋರಾಟಕ್ಕಿಳಿದಿದೆ. ಮೈತ್ರಿ ಸರ್ಕಾರದಲ್ಲಿ ನಿಮ್ಮ ಕುರ್ಚಿ ಉಳಿಸಲು ಪಾಪ ಡಿಕೆಶಿ, ಹಿಂದಿನ ವೈರತ್ವವನ್ನೂ ಮರೆತು ಪಕ್ಷದ ವರಿಷ್ಠರ ಮಾತಿಗೆ ಕಟಿಬದ್ದನಾಗಿ ಹೋರಾಡಿದ ಆದರೆ ನೀವು ಅವರ ಪರವಾಗಿ ನಡೆದ ಹೋರಾಟದಲ್ಲಿ ಏಕೆ ಭಾಗವಹಿಸಲಿಲ್ಲಾ ಎಂದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಮಾಜಿ ಶಾಸಕ ಸಿಎಸ್ ಪುಟ್ಟೇಗೌಡ ವಿರುದ್ದ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಸಿಎಂ ವಿರುದ್ಧ ತಿರುಗಿಬಿದ್ದ ಮಂಡ್ಯ ಬಿಜೆಪಿ: ಹಾಲು ಒಕ್ಕೂಟದ ನಾಮನಿರ್ದೇಶನ ತಡೆಹಿಡಿಯಲು ರಾಜ್ಯಾಧ್ಯಕ್ಷರಿಗೆ ಪತ್ರ

ಹಾಸನದ ಚನ್ನರಾಯಪಟ್ಟಣದಲ್ಲಿ ವಿವಿಧ ವಿಷಯಗಳನ್ನ ಇಟ್ಟುಕೊಂಡು ಮಾಜಿ ಸಚಿವ ಬಿ ಶಿವರಾಂ, ಎಂಎಲ್​​ಸಿ ಗೋಪಾಲಸ್ವಾಮಿ, ಮಾಜಿ ಸಚಿವ ಪುಟ್ಟೇಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಜೆಡಿಎಸ್ ಹಾಗೂ ಮಾಜಿ ಪ್ರಧಾನಿ ದೇವೇಗೌಡ ವಿರುದ್ಧವೆ ಪ್ರತಿಭಟನೆ ಯುದ್ದಕ್ಕೂ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕರು, ಕೆಂಪುಕೋಟೆಯ ಏರಿಸಿದ್ದ ನಿಮ್ಮನ್ನ ಮತ್ತೆ ನಿಮ್ಮ ಮಕ್ಕಳೇ ಎಂಪಿ ಅಗದ ರೀತಿ ಮಾಡಿದರು. ಕುಟುಂಬ ರಾಜಕಾರಣ ಒಳ್ಳೇದು ಅಲ್ಲಾ, ಈಗಲಾದರೂ ನಿಮ್ಮ ಕುಟುಂಬ ರಾಜಕಾರಣ ಪುನರ್ ಪರಿಶೀಲನೆ ಮಾಡಿ ಎಂದು ಮಾಜಿ ಶಾಸಕ ಪುಟ್ಟೇಗೌಡ ದೇವೇಗೌಡರಿಗೆ ಮತ್ತೆ ತಿರುಗೇಟು ನೀಡಿದರು.

ಮುಂದಿನ ಚುನಾವಣೆ ದೃಷ್ಟಿಯಿಂದ ಸಂಪ್ರದಾಯಿಕ ಎದುರಾಳಿ ಜೆಡಿಎಸ್ ವಿರುದ್ಧ ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಭ್ರಷ್ಟಾಚಾರ , ಸರ್ಕಾರಿ ಹಣ ದುರುಪಯೋಗ, ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ವಾಕ್ಸಮರ ನಡೆಸಿದೆ. ಅಲ್ಲದೆ ಮೈತ್ರಿ ಅವಧಿಯಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳನ್ನು ಹಾಗೂ ಸಾಲ ಮನ್ನಾ ಯೋಜನೆಯ ವ್ಯವಹಾರವನ್ನು ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದರು. ಸಾಲಮನ್ನಾದಲ್ಲಿ 800 ಕೋಟಿ ಅವ್ಯವಹಾರವಾಗಿದ್ದು ಸಂಪೂರ್ಣ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ಸಿಗರು ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ : ನನ್ನ ಹೃದಯದಲ್ಲಿದ್ದ ಸಿದ್ದರಾಮಯ್ಯರನ್ನು ಕಿತ್ತು ಪಕ್ಕಕ್ಕೆ ಎಸೆದಿದ್ದೇನೆ; ಎಂಟಿಬಿ ನಾಗರಾಜ್​​
Loading...

ಕಳೆದ ಐದು ವರ್ಷಗಳಿಂದ ಯಾವುದೇ ಚುನಾವಣೆಯಲ್ಲಿ ನಿರೀಕ್ಷಿತ ಗೆಲುವಿನ ರುಚಿ ನೋಡದ ಕಾಂಗ್ರೆಸ್, ಮತ್ತೆ ದೋಸ್ತಿ ಜೆಡಿಎಸ್ ವಿರುದ್ಧ ಹೋರಾಟ ನಡೆಸಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದೇ ರೀತಿ ತನ್ನ ಹೋರಾಟ ಮುಂದುವರೆಸಿದ್ರೆ ಮುಂದಿನ ದಿನಗಳಲ್ಲಿ ಮತ್ತೆ ಹಾಸನದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿದೆ. ಇಲ್ಲದಿದ್ದರೆ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕುವಂತಹ ಪರಿಸ್ಥಿತಿ ಎದುರಾಗಲಿದೆ.

First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...