ಮತ್ತೆ ಸಿದ್ದರಾಮಯ್ಯ ಹೆಗಲಿಗೆ ಪ್ರತಿಪಕ್ಷ ನಾಯಕನ ಸ್ಥಾನ?; ರಾತ್ರಿ ಒಂಬತ್ತು ಗಂಟೆಗೆ ಹೈಕಮಾಂಡ್ ಅಧಿಕೃತ ಘೋಷಣೆ

ಸಿದ್ದರಾಮಯ್ಯನವರಿಗೆ ಪಕ್ಷದ ಮೇಲಿನ ಹಿಡಿತವನ್ನು ಸಡಿಲಿಸುವಂತೆ ಮಾಡಲು ಹೈಕಮಾಂಡ್ ಸಹ ಸಿದ್ದು ಬದಲು ಬೇರೆ ನಾಯಕನಿಗೆ ಈ ಜವಾಬ್ದಾರಿ ನೀಡಲು ಮನಸ್ಸು ಮಾಡಿತ್ತು. ನಿನ್ನೆಯ ವರೆಗೆ ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಈ ಸ್ಥಾನಕ್ಕೆ ಹೆಚ್.ಕೆ. ಪಾಟೀಲ್ ಹೆಸರು ಚಾಲ್ತಿಯಲ್ಲಿತ್ತು.

MAshok Kumar | news18-kannada
Updated:October 9, 2019, 7:10 PM IST
ಮತ್ತೆ ಸಿದ್ದರಾಮಯ್ಯ ಹೆಗಲಿಗೆ ಪ್ರತಿಪಕ್ಷ ನಾಯಕನ ಸ್ಥಾನ?; ರಾತ್ರಿ ಒಂಬತ್ತು ಗಂಟೆಗೆ ಹೈಕಮಾಂಡ್ ಅಧಿಕೃತ ಘೋಷಣೆ
ಸಿದ್ದರಾಮಯ್ಯ
  • Share this:
ಬೆಂಗಳೂರು (ಅಕ್ಟೋಬರ್ 09); ಈ ಬಾರಿಯೂ ಕಾಂಗ್ರೆಸ್ ಪ್ರತಿಪಕ್ಷ ನಾಯಕನ ಸ್ಥಾನ ಸಿದ್ದರಾಮಯ್ಯನವರಿಗೆ ಒಲಿಯುವುದು ಬಹುತೇಕ ಖಚಿತವಾಗಿದ್ದು, ರಾತ್ರಿ ಒಂಬತ್ತು ಗಂಟೆಯ ಒಳಗಾಗಿ ಕಾಂಗ್ರೆಸ್ ಹೈಕಮಾಂಡ್ ಈ ಕುರಿತು ಅಧಿಕೃತವಾಗಿ ಘೋಷಿಸಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.

ನಾಳೆಯಿಂದ ರಾಜ್ಯದಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೆ ಆಡಳಿತರೂಢ ಬಿಜೆಪಿ ಸರ್ವ ಸನ್ನದ್ಧವಾಗಿದೆ. ಆದರೆ, ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್​ನಲ್ಲಿ ಕಳೆದ ಎರಡು ತಿಂಗಳಿನಿಂದ ಗೊಂದಲ ಮನೆ ಮಾಡಿದ್ದು, ಯಾರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವುದು ಎಂಬುದೇ ಕಾಂಲಗ್ರೆಸ್ ಹೈಕಮಾಂಡ್ಗೆ ದೊಡ್ಡ ಪ್ರಶ್ನೆಯಾಗಿ ಕಾಡಿತ್ತು. ಅಲ್ಲದೆ, ಇದು ಕೈ ಹಿರಿಯ ನಾಯಕರಿಗೆ ಸವಾಲಿನ ಕೆಲಸವೂ ಆಗಿತ್ತು.

ಒಂದೆಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ತನನ್ನೇ ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದರೆ, ಮತ್ತೊಂದೆಡೆ ಮಾಜಿ ಸಚಿವರುಗಳಾದ ಹೆಚ್.ಕೆ. ಪಾಟೀಲ್ ಹಾಗೂ ಜಿ. ಪರಮೇಶ್ವರ್ ನಡುವೆಯೂ ಮುಸುಕಿನ ಗುದ್ದಾಟ ನಡೆದೇ ಇತ್ತು.

ಸಿದ್ದರಾಮಯ್ಯನವರಿಗೆ ಪಕ್ಷದ ಮೇಲಿನ ಹಿಡಿತವನ್ನು ಸಡಿಲಿಸುವಂತೆ ಮಾಡಲು ಹೈಕಮಾಂಡ್ ಸಹ ಸಿದ್ದು ಬದಲು ಬೇರೆ ನಾಯಕನಿಗೆ ಈ ಜವಾಬ್ದಾರಿ ನೀಡಲು ಮನಸ್ಸು ಮಾಡಿತ್ತು. ನಿನ್ನೆಯ ವರೆಗೆ ಕಾಂಗ್ರೆಸ್ ಹೈಕಮಾಂಡ್ ಅಂಗಳದಲ್ಲಿ ಈ ಸ್ಥಾನಕ್ಕೆ ಹೆಚ್.ಕೆ. ಪಾಟೀಲ್ ಹೆಸರು ಚಾಲ್ತಿಯಲ್ಲಿತ್ತು.

ಆದರೆ, ಪರಮೇಶ್ವರ್ ಸಹ ಹೈಕಮಾಂಡ್ ಮೇಲೆ ಈ ಸ್ಥಾನ ತನಗೆ ನೀಡುವಂತೆ ಒತ್ತಡ ಹೇರಿದ್ದ ಹಾಗೂ ಅಪಾರ ಸಂಖ್ಯೆಯ ಸಿದ್ದರಾಮಯ್ಯ ಬೆಂಬಲಿಗರು ಪಕ್ಷದ ವಿರುದ್ಧ ಮುನಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ಹೈಕಮಾಂಡ್ ಮತ್ತೆ ಸಿದ್ದರಾಮಯ್ಯ ಅವರ ಹೆಸರನ್ನೇ ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಕೇಂದ್ರ ನೀಡಿರುವ ನೆರೆ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ; ಹೆಚ್.ಕೆ. ಪಾಟೀಲ್ ವ್ಯಂಗ್ಯ

First published:October 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ