ನೆರೆ ಪರಿಹಾರ ಕುರಿತ ಚರ್ಚೆಗೆ ನಿಲುವಳಿ ಸೂಚನೆ ಕೊಟ್ಟರೂ ಅವಕಾಶ ನೀಡಿಲ್ಲ; ಸಭಾಧ್ಯಕ್ಷ್ಯರ ನಡೆಗೆ ಸಿದ್ದರಾಮಯ್ಯ ಕಿಡಿ

ವಿಧಾನಮಂಡಲ ಅಧಿವೇಶನದಲ್ಲಿ ನೆರೆ ಪರಿಹಾರ ಕಾರ್ಯಗಳ ಚರ್ಚೆಗೆ ಅವಕಾಶ ಕೇಳುವುದು ವಿರೋಧ ಪಕ್ಷದ ಕರ್ತವ್ಯ. ಹೀಗಾಗಿ ನಾನು ನಿಯಮ 60ರ ಅಡಿಯಲ್ಲಿ ಸದನ ಆರಂಭಕ್ಕೂ ಮುನ್ನವೇ ವಿಧಾನ ಸಭಾಧ್ಯಕ್ಷರ ಕಚೇರಿಯಲ್ಲಿ ನಿಲುವಳಿ ಸೂಚನೆ ನೀಡಿದ್ದೇನೆ. ಆದರೆ, ನಿಲುವಳಿ ಸೂಚನೆ ನೀಡಿದ್ದಾಗ್ಯೂ ನೆರೆ ಪರಿಹಾರದ ಕುರಿತ ಚರ್ಚೆಗೆ ವಿರೋಧ ಪಕ್ಷಗಳಿಗೆ ಅವಕಾಶ ನೀಡಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

MAshok Kumar | news18-kannada
Updated:October 10, 2019, 2:09 PM IST
ನೆರೆ ಪರಿಹಾರ ಕುರಿತ ಚರ್ಚೆಗೆ ನಿಲುವಳಿ ಸೂಚನೆ ಕೊಟ್ಟರೂ ಅವಕಾಶ ನೀಡಿಲ್ಲ; ಸಭಾಧ್ಯಕ್ಷ್ಯರ ನಡೆಗೆ ಸಿದ್ದರಾಮಯ್ಯ ಕಿಡಿ
ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಬೆಂಗಳೂರು (ಅಕ್ಟೋಬರ್ 10); ಉತ್ತರ ಕರ್ನಾಟಕ ನೆರೆ ಪರಿಹಾರದ ಚರ್ಚೆಗೆ ನಿಲುವಳಿ ಸೂಚನೆ ಕೊಟ್ಟರೂ ಈ ಕುರಿತ ಚರ್ಚೆಗೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ಕೊಟ್ಟಿಲ್ಲ ಎಂದು ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿರುವ ಅವರು, “ಉತ್ತರ ಕರ್ನಾಟಕ ಹಿಂದೆಂದೂ ಕಂಡಿರದಂತಹ ಹುಚ್ಚು ಪ್ರವಾಹಕ್ಕೆ ತುತ್ತಾಗಿದೆ. ಈ ಪ್ರವಾಹದಿಂದಾಗಿ 22 ಜಿಲ್ಲೆಯ 103 ತಾಲೂಕಿನ ಜನ ತತ್ತರಿಸಿದ್ದಾರೆ. 7 ಲಕ್ಷ ಜನ ಸಂತ್ರಸ್ತರಾಗಿದ್ದಾರೆ. 2 ಲಕ್ಷ ಮನೆ ನೆಲಸಮವಾಗಿದೆ. 90 ಜನ ಪ್ರಾಣ ಕಳೆದುಕೊಂಡಿದ್ದರೆ, ಅನೇಕರು ಕಾಣೆಯಾಗಿದ್ದಾರೆ. ಪ್ರವಾಹದ ನಂತರವೂ ಆತ್ಮಹತ್ಯೆ ಪ್ರಕರಣಗಳ ಕುರಿತು ವರದಿಯಾಗುತ್ತಲೇ ಇದೆ.

ವಿಧಾನಮಂಡಲ ಅಧಿವೇಶನದಲ್ಲಿ ನೆರೆ ವಿಚಾರವನ್ನು ಪ್ರಶ್ನಿಸುವುದು ಹಾಗೂ ಈ ಕುರಿತ ಪರಿಹಾರ ಕಾರ್ಯಗಳ ಚರ್ಚೆಗೆ ಅವಕಾಶ ಕೇಳುವುದು ವಿರೋಧ ಪಕ್ಷದ ಕರ್ತವ್ಯ. ಹೀಗಾಗಿ ನಾನು ನಿಯಮ 60ರ ಅಡಿಯಲ್ಲಿ ಸದನ ಆರಂಭಕ್ಕೂ ಮುನ್ನವೇ ವಿಧಾನ ಸಭಾಧ್ಯಕ್ಷರ ಕಚೇರಿಯಲ್ಲಿ ನಿಲುವಳಿ ಸೂಚನೆ ನೀಡಿದ್ದೇನೆ. ಆದರೆ, ನಿಲುವಳಿ ಸೂಚನೆ ನೀಡಿದ್ದಾಗ್ಯೂ ನೆರೆ ಪರಿಹಾರದ ಕುರಿತ ಚರ್ಚೆಗೆ ವಿರೋಧ ಪಕ್ಷಗಳಿಗೆ ಅವಕಾಶ ನೀಡಿಲ್ಲ" ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಸದನ ಆರಂಭಕ್ಕೂ ಒಂದು ಗಂಟೆ ಮುಂಚಿತವಾಗಿ ನಿಲುವಳಿ ಮಂಡಿಸಿದರೆ ಸಭಾಧ್ಯಕ್ಷರು ಚರ್ಚೆಗೆ ಅವಕಾಶ ಕಲ್ಪಿಸಲೇಬೇಕು. ಈ ಹಿಂದೆ ಅನೇಧಕ ಬಾರಿ ಶೂನ್ಯ ವೇಳೆ, ಪ್ರಶ್ನಾವಳಿ ಚರ್ಚೆ ಇದ್ದಾಗಲೂ ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಅವಕಾಶ ನೀಡಿದ ಉದಾಹರಣೆಗಳಿವೆ. ಸದನ ಕಲಾಪಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಈ ನಿಯಮಗಳನ್ನು ನಾವೇ ರೂಪಿಸಿದ್ದೇವೆ. ಆದರೆ,ನಾವು ನಿಲುವಳಿ ಸೂಚನೆ ಕೊಟ್ಟಾಗ್ಯೂ ಇಂದಿನ ಅಸೆಂಬ್ಲಿ ಅಜೆಂಡಾದಲ್ಲಿ ಶೂನ್ಯ ವೇಳೆ, ಪ್ರಶ್ನಾವಳಿ ಚರ್ಚೆ ಸೇರಿದಂತೆ ನಿಲುವಳಿ ಸೂಚನೆಯ ಮೇಲಿನ ಚರ್ಚೆಗೂ ಅವಕಾಶ ಕಲ್ಪಿಸಿಲ್ಲ" ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ಬಿಜೆಪಿಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೇಯ ಕೃತ್ಯಗಳಲ್ಲಿ ನಿರತವಾಗಿವೆ; ಹೆಚ್​.ಡಿ. ದೇವೇಗೌಡ ಕಿಡಿ

First published: October 10, 2019, 1:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading