'ಉಮೇಶ್​ ಜಾಧವ್​ ಗೋಮುಖ ವ್ಯಾಘ್ರ, ಅವನಿಗೆ ನಿಯತ್ತಿಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ

ಖರ್ಗೆ ವಿಪಕ್ಷ ನಾಯಕರಾಗಿ ನರೇಂದ್ರ ಮೋದಿ ವೈಫಲ್ಯ,ಭ್ರಷ್ಟಾಚಾರ ಬಯಲು ಮಾಡುವ ಪ್ರಾಮಾಣಿಕ ಕೆಲಸ ಮಾಡಿದರು. ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಕಂಡರೆ ಹೆದರಿಕೆಯಿದೆ. ಹೀಗಾಗಿ ಖರ್ಗೆ ಸೋಲಿಸಲು ಮೋದಿ, ಷಾ ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಉಮೇಶ್​ ಜಾಧವ್​ರನ್ನು ಬಳಸಿಕೊಳ್ಳು ಮುಂದಾಗಿದ್ದಾರೆ ಎಂದರು.

G Hareeshkumar | news18
Updated:April 18, 2019, 11:34 AM IST
'ಉಮೇಶ್​ ಜಾಧವ್​ ಗೋಮುಖ ವ್ಯಾಘ್ರ, ಅವನಿಗೆ ನಿಯತ್ತಿಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ
ಮಾಜಿ ಸಿಎಂ ಸಿದ್ದರಾಮಯ್ಯ
G Hareeshkumar | news18
Updated: April 18, 2019, 11:34 AM IST
- ಶಿವರಾಮ್​​ ಅಸುಂಡಿ

ಕಲಬುರಗಿ (ಏ.17): "ಉಮೇಶ್​ ಜಾಧವ್​ ನನ್ನ ಬಳಿ ಖರ್ಗೆ ವಿರುದ್ಧ ದೂರು ಹೇಳಿಕೊಂಡು ಬರುತ್ತಿದ್ದ. ಅವನ್ನು ನಾನು ಸಮಾಧಾನ ಮಾಡುತ್ತಿದ್ದೆ. ಆರು ವರ್ಷ ಅಸೆಂಬ್ಲಿಯಲ್ಲಿದ್ದ ಪಾರ್ಲಿಮೆಂಟ್ ಸೆಕ್ರೆಟರಿ ಮಾಡಿದ್ದೆ. ಎಷ್ಟು ಸಹಾಯ ಮಾಡಿದ್ದೆ, ಚೆನ್ನಾಗಿದ್ದಾನೆ ಅಂದುಕೊಂಡಿದ್ದೆ. ಆದರೆ ಆತನಿಗೆ ನಿಯತ್ತಿಲ್ಲ. ಗೋಮುಖ ವ್ಯಾಘ್ರ," ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಈಗ ಖರ್ಗೆ ವಿರುದ್ಧ ಕಮಲದಿಂದ ಸ್ಪರ್ಧೆ ಮಾಡಿರುವ ಉಮೇಶ್​ ಜಾಧವ್​ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಅಫಜಲಪುರದಲ್ಲಿ ಮಾತನಾಡಿದ ಅವರು, "ಉಮೇಶ್​​ ಜಾಧವ್ ನಮ್ಮ ಪಕ್ಷದಲ್ಲಿಯೇ ಇರುತ್ತಾರೆ ಎಂದುಕೊಂಡಿದ್ದೆ. ​ಯಾವ ಕಾರಣಕ್ಕೆ ತನ್ನನ್ನು ತಾನು ಮಾರಿಕೊಂಡ ಎಂದು ಗೊತ್ತಾಗಿಲ್ಲ," ಎಂದು ಅವರ ವಿರುದ್ಧ ಹರಿಹಾಯ್ದರು.

"ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರಮಟ್ಟದ ನಾಯಕರು. 11 ಬಾರಿ ಆಯ್ಕೆಯಾಗಿ, 12ನೇ ಬಾರಿ ನಿಮ್ಮ ಮುಂದಿದ್ದಾರೆ. ಖರ್ಗೆ 11 ಬಾರಿ ಆಯ್ಕೆಯಾಗುವ ಮೂಲಕ ರಾಜ್ಯದಲ್ಲಿ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಅವರನ್ನು ಸೋಲಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಅದು ಸಾಧ್ಯವಿಲ್ಲ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖರ್ಗೆ ವಿಪಕ್ಷ ನಾಯಕರಾಗಿ ನರೇಂದ್ರ ಮೋದಿ ವೈಫಲ್ಯ,ಭ್ರಷ್ಟಾಚಾರ ಬಯಲು ಮಾಡುವ ಪ್ರಾಮಾಣಿಕ ಕೆಲಸ ಮಾಡಿದರು. ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಕಂಡರೆ ಹೆದರಿಕೆಯಿದೆ. ಹೀಗಾಗಿ ಖರ್ಗೆ ಸೋಲಿಸಲು ಮೋದಿ, ಷಾ ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಉಮೇಶ್​ ಜಾಧವ್​ರನ್ನು ಬಳಸಿಕೊಳ್ಳು ಮುಂದಾಗಿದ್ದಾರೆ ಎಂದರು.

ಖರ್ಗೆ ರಾಷ್ಟ್ರೀಯ ನಾಯಕ ಅವರಿಂದ ಅಭಿವೃದ್ಧಿ ಸಾಧ್ಯ. ಉಮೇಶ್​ ಜಾಧವ್​ ಬಂದರೆ ಅವರಿಂದ ಏನು ಸಾಧ್ಯ. ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿದ್ರೆ ನಿಮಗೆ ಗೌರವ. ಅವರಿಗೆ ಮತ ನೀಡಿ. ಸುಳ್ಳು ಭರವಸೆಗಳುಗೆ ಬಲಿಯಾಗ ಬೇಡಿ ಎಂದು ಮನವಿ ಮಾಡಿದರು.
Loading...

ಇದನ್ನೂ ಓದಿ : ನಾನು ಭಾವುಕ ಜೀವಿ, ಪ್ರತಿದಿನ ಕಣ್ಣೀರು ಹಾಕುತ್ತೇನೆ: ಸಿಎಂ ಕುಮಾರಸ್ವಾಮಿ

ಇದಕ್ಕೂ ಮುನ್ನ ಹೆಲಿಪ್ಯಾಡ್​ನಲ್ಲಿ ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಅವರು, ರಾಜ್ಯದಲ್ಲಿ ನಾವು 20 ಸೀಟು ಗೆಲ್ಲುತ್ತೇವೆ ಎಂದು ಹೇಳುತ್ತಿರುವ ಅವರಿಗೆ ಏನು ದಿವ್ಯ ಜ್ಞಾನ ಇದೆಯಾ. ಅವರು ಬುರುಡೆ ಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.

ಇನ್ನು ಅವರ ಕೈಯಲ್ಲಿದ್ದ ನಿಂಬೆ ಹಣ್ಣಿನ ಬಗ್ಗೆ ಪ್ರಶ್ನಿಸಿದ್ದಕ್ಕೆ ಯಾರೋ ವಿಮಾನ ನಿಲ್ದಾಣದಲ್ಲಿ ಕೊಟ್ಟರು ಇಟ್ಟುಕೊಂಡು ಬಂದೆ. ಇದರಲ್ಲಿ ಎಲ್ಲ ನನಗೆ ನಂಬಿಕೆ ಇಲ್ಲ ಎಂದು ವರದಿಗಾರರ ಕೈಗೆ ನೀಡಿದರು.

First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626