ಮೇಕೆದಾಟು ವಿಷಯದಲ್ಲಿ ಸಿಟಿ ರವಿನೇ ಅಣ್ಣಾಮಲೈನ ಎತ್ತಿಕಟ್ಟುತ್ತಿದ್ದಾನೆ: Siddaramaiah ಗಂಭೀರ ಆರೋಪ

ಕೆಂಗಲ್ ಹನುಮಂತಯ್ಯ ಸರ್ಕಾರದ ಕೆಲಸ ದೇವರ ಕೆಲಸ ಎಂದಿದ್ರು. ಆದ್ರೆ ಅವರು ಕಟ್ಟಿದ ವಿಧಾನಸೌಧದಲ್ಲಿ ರಾಕ್ಷಸರು ಬಂದು ಕೂತಿದ್ದಾರೆ, ಅವರನ್ನ ಓಡಿಸಬೇಕು. ಅದಕ್ಕಾಗಿ ನೀವು ಮುಂದಿನ ಚುನಾವಣೆಗಾಗಿ ಕಾಯಬೇಕು ಎಂದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಚಾಮರಾಜನಗರ: ಮೇಕೆದಾಟು ಪಾದಯಾತ್ರೆ (Mekedatu Padayatra) ಹಮ್ಮಿಕೊಂಡಿರುವ ಕಾಂಗ್ರೆಸ್​​ (Congress) ಜಿಲ್ಲೆಯಲ್ಲಿ ನಡೆಸಿದ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅಬ್ಬರದ ಭಾಷಣ ಮಾಡಿದರು. ಮೇಕೆದಾಟು ಯೋಜನೆಗೆ ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ, ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಸಿಗಬೇಕು ಅಷ್ಟೇ. 200 tmc ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿದೆ. ತಮಿಳುನಾಡಿನವರು ರಾಜಕೀಯ ಕಾರಣಕ್ಕೆ ಖ್ಯಾತೆ ತೆಗೆಯುತ್ತಿದ್ದಾರೆ. ಅಣ್ಣಾಮಲೈ ಮೇಕೆದಾಟು ಯೋಜನೆ ಆಗಬಾರದು ಎಂದು ಧರಣಿ ಮಾಡ್ತಾನೆ. ಅಣ್ಣಾಮಲೈ ಮಾತು ಕೇಳಿಕೊಂಡು ಕೇಂದ್ರ ಸರ್ಕಾರ ಕ್ಲಿಯರೆನ್ಸ್ ಕೊಡ್ತಾ ಇಲ್ಲ, ಅಣ್ಣಾಮಲೈ ಅಲ್ಲಿನ ಬಿಜೆಪಿ ಅಧ್ಯಕ್ಷನಾಗಿದ್ದಾನೆ.  ತಮಿಳುನಾಡಿನ ಉಸ್ತುವಾರಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಸಿಟಿ ರವಿನೇ ಅಣ್ಣಾಮಲೈನನ್ನು ಎತ್ತಿಕಟ್ತಾ ಇದ್ದಾನೆ ಎಂದು ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ: ನನ್ನ ಭಾಷಣ ವೇಳೆ ಇದೆಲ್ಲ ಬೇಡ, ಆಮೇಲೆ ಕಾಫಿ, ಟೀ ಕೊಡಿ. ಯಾರೂ ತಲೆ ತಿರುಗಿ ಬೀಳಲ್ಲ: DK Shivakumar

ಸಿಟಿ ರವಿ ಅಣ್ಣಾಮಲೈನನ್ನು ಎತ್ತಿಕಟ್ತಾ ಇದ್ದಾನೆ

ಸಿಟಿ ರವಿನಾ ಲೂಟಿ ರವಿ ಅಂತನೂ ಕರೀತಾರೆ. ಈ ಸಿಟಿ ರವಿ ಅಣ್ಣಾಮಲೈನನ್ನು ಎತ್ತಿಕಟ್ತಾ ಇದ್ದಾನೆ. ಚಾಮರಾಜನಗರದಿಂದ ಪಾದಯಾತ್ರೆಗೆ ಮನೆಗೊಂದು ಆಳು ಬರಬೇಕು, ಕನಿಷ್ಠ 10 ಸಾವಿರ ಜನ ಬರಬೇಕು ಎಂದು ಕರೆ ನೀಡಿದರು. ರಾಜ್ಯದಲ್ಲಿ 40% ಕಮಿಷನ್ ಸರ್ಕಾರ ಇದೆ.  ವಿಧಾನಸೌಧದಲ್ಲಿ  ರಾಕ್ಷಸರು ಬಂದು ಕೂತಿದ್ದಾರೆ, ಜನರ ರಕ್ತ ಕುಡಿತಾ ಇದ್ದಾರೆ. ಬಿಜೆಪಿಯಂತಹ ನೀಚರು. ಭ್ರಷ್ಟರು, ಯಾವ ಕಾಲದಲ್ಲೂ ಬಂದಿಲ್ಲ. ಕೆಂಗಲ್ ಹನುಮಂತಯ್ಯ ಸರ್ಕಾರದ ಕೆಲಸ ದೇವರ ಕೆಲಸ ಎಂದಿದ್ರು. ಆದ್ರೆ ಅವರು ಕಟ್ಟಿದ ವಿಧಾನಸೌಧದಲ್ಲಿ ರಾಕ್ಷಸರು ಬಂದು ಕೂತಿದ್ದಾರೆ, ಅವರನ್ನ ಓಡಿಸಬೇಕು. ಅದಕ್ಕಾಗಿ ನೀವು ಮುಂದಿನ ಚುನಾವಣೆಗಾಗಿ ಕಾಯಬೇಕು ಎಂದರು.

ಓಟಿಗಾಗಿ ಬಿಜೆಪಿ ನಾಟಕ

ತಮಿಳುನಾಡು ರಾಜಕೀಯಕ್ಕಾಗಿ ಕ್ಯಾತೆ ತೆಗೆಯುತ್ತೆ. ಈ ವಿಚಾರದಲ್ಲಿ ಅವರು ಸುಪ್ರೀಂ ಕೋರ್ಟ್ ಹೋಗ್ತಾರೆ.ಆದ್ರೆ ಅದ್ನ ಕೋರ್ಟ್ ಇನ್ನೂ ಸ್ವೀಕರಿಸಿಲ್ಲ. ಆದ್ರೆ ಇದ್ಕೆ ಹೆದರಿಕೊಂಡು ಇದನ್ನ ಅನುಮತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.ತಮಿಳುನಾಡಿನಲ್ಲಿ ಓಟಿಗಾಗಿ ಬಿಜೆಪಿ ನಾಟಕ ಹಾಡ್ತಿದೆ. ಅದರಿಂದಲೇ ಮೇಕೆದಾಟು ಯೋಜನೆಗೆ ಜಾರಿಗೆ ತರ್ತಿಲ್ಲ ಎಂದರು.

ಇದನ್ನೂ ಓದಿ: Renukacharyaರ ನೋಟ್-ವೋಟ್ ವಿಡಿಯೋ ವೈರಲ್.. ಹೌದು ಏನೀಗ ಎಂದು ಸಮರ್ಥನೆಗಿಳಿದ ಶಾಸಕ

ಶಾಪ ಹುಟ್ಟು ಹಾಕಿದ್ದರು

ಚಾಮರಾಜನಗರಕ್ಕೆ ಬಂದ ಮೇಲೆ ನನ್ನ ಸಿಎಂ ಸ್ಥಾನ ಗಟ್ಟಿಯಾಗಿತ್ತು. ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತೆ ಎಂಬ ಶಾಪ ಹುಟ್ಟು ಹಾಕಿದ್ದರು, ಆದರೆ ನಾನು 10 ರಿಂದ 12 ಬಾರಿ ಬಂದಿದ್ದೆ. ಜೆಎಚ್ ಪಟೇಲರಂತವರು ಸಹ ಮೌಢ್ಯಕ್ಕೆ ಜೋತು ಬಿದ್ದು ಬರಲಿಲ್ಲ, ಮಹದೇಶ್ವರ ಬೆಟ್ಟದಲ್ಲಿ ಜಿಲ್ಲೆ ಉದ್ಘಾಟಿಸಿದ್ದರು. ಆಕ್ಸಿಜನ್ ಕೊರತೆಯಿಂದ ಮೂರೇ ಜನ ಎಂದು ಅಂದಿನ ಆರೋಗ್ಯ ಸಚಿವ ಡಾ.ಸುಧಾಕರ್, ಜಿಲ್ಲಾ ಸಚಿವ ಸುರೇಶ ಕುಮಾರ್ ರಾಜ್ಯದ ಜನರಿಗೆ ಸುಳ್ಳು ಹೇಳಿದ್ದರು. ಆದರೆ 36 ಜನ ಸತ್ತಿದ್ದಾರೆ ಎಂದು ಅಧಿಕಾರಿಗಳೇ ನಮ್ಮ ಮುಂದೆ ಒಪ್ಪಿಕೊಂಡಿದ್ದರು. 36 ಜನರ ಸಾವಿಗೆ ಬಿಜೆಪಿ ಸರ್ಕಾರವೇ ನೇರ ಹೊಣೆ. ಸಚಿವ ಸುಧಾಕರ್ ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸಿ ಜನದ್ರೋಹ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ವಿಜಯೇಂದ್ರನಿಗೂ ಸೋಮಣ್ಣನಿಗೂ ಆಗಲ್ಲ

ಬಿಜೆಪಿ ಸರ್ಕಾರ ಒಂದೇ ಒಂದು ಹೊಸ ಯೋಜನೆ ಕೊಡಲಿಲ್ಲ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಮಾನ ಮರ್ಯಾದೆ ಇಲ್ಲ. ಒಂದೇ ಒಂದು ಮನೆಯನ್ನಾಗಲಿ ಸೈಟನ್ನಾಗಲಿ ಕೊಟ್ಟಿಲ್ಲ. ನಾನು ಈ ಬಗ್ಗೆ ಕೇಳಿದ್ರೆ ಸೋಮಣ್ಣ ಅಸಹಾಯಕತೆ ತೋಡಿಕೊಳ್ತಾನೆ. ಯಾಕೆಂದ್ರೆ ವಿಜಯೇಂದ್ರಗೂ, ಸಚಿವ ವಿ.ಸೋಮಣ್ಣಗೂ ಆಗ್ತಿರಲಿಲ್ಲ. ಅದಕ್ಕಾಗಿಯೇ ಸೋಮಣ್ಣ ಖಾತೆಗೆ ಒಂದು ರೂಪಾಯಿ ಕೊಟ್ಟಿರಲಿಲ್ಲ. ಹೀಗಾಗಿಯೇ ‌ವಸತಿ ಯೋಜನೆಗಳು ಕುಂಠಿತಗೊಂಡಿವೆ. ಹೀಗಾಗಿ ಬಿಜೆಪಿಗೆ ಯಾವುದೇ ಕಾರಣಕ್ಕೂ ಮತ ಹಾಕಬಾರದು.. ಗಡಿ ಜಿಲ್ಲೆಯಿಂದಲೇ‌ ಕಾಂಗ್ರೆಸ್‌ನ ದಿಗ್ವಿಜಯ ಯಾತ್ರೆ ಆರಂಭವಾಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
Published by:Kavya V
First published: