• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Siddaramaiah: ನಾನು ಮುಖ್ಯಮಂತ್ರಿ ಆಗ್ಬೇಕು ಅಂದ್ರೆ ನೀವು ಕಾಂಗ್ರೆಸ್‌ಗೆ ವೋಟ್‌ ಮಾಡಿ; 'ನಾನೇ ಸಿಎಂ ಅಭ್ಯರ್ಥಿ' ಅಂತ ಪರೋಕ್ಷವಾಗಿ ಹೇಳಿದ ಸಿದ್ದು!

Siddaramaiah: ನಾನು ಮುಖ್ಯಮಂತ್ರಿ ಆಗ್ಬೇಕು ಅಂದ್ರೆ ನೀವು ಕಾಂಗ್ರೆಸ್‌ಗೆ ವೋಟ್‌ ಮಾಡಿ; 'ನಾನೇ ಸಿಎಂ ಅಭ್ಯರ್ಥಿ' ಅಂತ ಪರೋಕ್ಷವಾಗಿ ಹೇಳಿದ ಸಿದ್ದು!

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ನೀವು ಕಾಂಗ್ರೆಸ್​ ಪಕ್ಷಕ್ಕೆ ಮತ ಹಾಕಿದರೆ ಅದು ನನಗೆ ಮತ ಹಾಕಿದಂಗೆ. ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಬಾದಾಮಿ ಕ್ಷೇತ್ರದಲ್ಲಿ ಒಂದು ರೀತಿ ವಿದಾಯದ ಭಾಷಣವನ್ನು ಸಿದ್ದರಾಮಯ್ಯ ಮಾಡಿದ್ದಾರೆ.

  • Share this:

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ಬಾದಾಮಿ (Badami) ಪ್ರವಾಸ ಕೈಗೊಂಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ‌ ಮಾಡಿದ್ದಾರೆ. ಇದೇ ವೇಳೆ ಐದು ವರ್ಷಗಳ ಅಭಿವೃದ್ಧಿ ಕಾರ್ಯಗಳ ಕುರಿತ ಕಿರು ಹೊತ್ತಿಗೆಯನ್ನು (Book) ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ. ಗಿಡ್ಡನಾಯಕನಾಳ ಗ್ರಾಮದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ, ಕಾರ್ಮಿಕ ಇಲಾಖೆಯಿಂದ 10 ಜನ ಕಟ್ಟಡ ಕಾರ್ಮಿಕರ (Construction Worker) ಮಕ್ಕಳಿಗೆ ಟ್ಯಾಬ್ (Tab) ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಮಾಜಿ ಸಿಎಂ ಭಾಗಿಯಾಗಿದ್ದರು.


ಬಾದಾಮಿ, ಕೋಲಾರ ಹಾಗೂ ವರುಣಾ ಕ್ಷೇತ್ರಗಳ ಆಯ್ಕೆ


ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರಿಗೆ ನೀವು ಮತ್ತೊಮ್ಮೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಅಂತ ಒತ್ತಾಯ ಮಾಡಿದರು. ಈ ವೇಳೆ ಕಾರ್ಯಕರ್ತರ ಮೇಲೆ ಗರಂ ಆದ ಸಿದ್ದರಾಮಯ್ಯ ಅವರು, ನಾನೇ ಮುಖ್ಯಮಂತ್ರಿ ಆಗಬೇಕು ಎಂದರೆ ನೀವು ಎಲ್ಲರೂ ಕಾಂಗ್ರೆಸ್​ ಪಕ್ಷಕ್ಕೆ ಮತ ಹಾಕಬೇಕು.
ನಾನು ಮೂರು ಕ್ಷೇತ್ರಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಕೊಟ್ಟಿದ್ದೇನೆ. ಬಾದಾಮಿ, ಕೋಲಾರ ಹಾಗೂ ವರುಣಾ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಟ್ಟಿದ್ದೇನೆ. ನಾನು ಇರುವರೆಗೆ ರಾಜಕೀಯ ನಿವೃತ್ತಿ ಹೊಂದಲ್ಲ. ನಾ ಎಲ್ಲಿಂದಲೇ ಸ್ಪರ್ಧೆ ಮಾಡಿದರೂ ನಾನು ನಿಮ್ಮವ, ನೀವು ನಮ್ಮವರು.


ಇದನ್ನೂ ಓದಿ: Karnataka Election: ರಾಜ್ಯದಲ್ಲಿ ಸದ್ದು ಮಾಡ್ತಿದೆ ಝಣ-ಝಣ ಕಾಂಚಾಣ; ಕಾರ್​ನಲ್ಲಿತ್ತು ₹ 67 ಲಕ್ಷ ಹಣ, 16 ಕೆಜಿ ಬೆಳ್ಳಿ!


ಹೈಕಮಾಂಡ್​​ ಬಾದಾಮಿಯಲ್ಲಿ ಸ್ಪರ್ಧೆ ಮಾಡಿ ಎಂದರೆ ನಿಲ್ಲುತ್ತೇನೆ. ನಾನು ಸ್ಪರ್ಧೆ ಮಾಡಲಿ, ನಿಲ್ಲದೇ ಇರಲಿ ನೀವು ಕಾಂಗ್ರೆಸ್ ಗೆ ವೋಟ್ ಹಾಕಬೇಕು. ಯಾರೇ ಅಭ್ಯರ್ಥಿಯಾದರೂ ನಾನೇ ನಿಂತಿದ್ದೇನೆ ಎಂದು ಕಾಂಗ್ರೆಸ್​​ ವೋಟ್​​ ಹಾಕಬೇಕು.


ನೀವು ಕಾಂಗ್ರೆಸ್​ ಪಕ್ಷಕ್ಕೆ ಮತ ಹಾಕಿದರೆ ಅದು ನನಗೆ ಮತ ಹಾಕಿದಂಗೆ. ನನಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಬಾದಾಮಿ ಕ್ಷೇತ್ರದಲ್ಲಿ ಒಂದು ರೀತಿ ವಿದಾಯದ ಭಾಷಣವನ್ನು ಮಾಡಿದರು.
ಇದಕ್ಕೂ ಮುನ್ನ ಚಿತ್ರದುರ್ಗದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, ವರುಣಾದಿಂದ ಸ್ಪರ್ಧಿಸುವುದಾಗಿ ಇಂಗಿತ ವ್ಯಕ್ತಪಡಿಸಿದ್ದರು. ನಮ್ಮ ಮನೆಯಲ್ಲಿ ವರುಣಾದಿಂದ ಸ್ಪರ್ಧಿಸಿ ಎನ್ನುತ್ತಿದ್ದಾರೆ.


ಹೀಗಾಗಿ ವರುಣಾ ಕ್ಷೇತ್ರದಲ್ಲೇ ಟಿಕೆಟ್ ನೀಡುವಂತೆ ಹೇಳಿದ್ದೇನೆ. ಅಲ್ಲದೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆಯೂ ಮನೆಯಲ್ಲಿ ಹೇಳುತ್ತಿದ್ದಾರೆ. ನನ್ನ ಸ್ಪರ್ಧೆಗೆ 25 ಕ್ಷೇತ್ರದಿಂದಲೂ ಆಫರ್ ಬಂದಿದೆ ಎಂದು ಹೇಳಿದ್ದರು.

top videos
    First published: