ನಾವು ಮಾಡಿದ ಕೆಲಸಾನ ಪ್ರತಾಪ್​ ಸಿಂಹ ತನ್ನದು ಅಂತ ಹೇಳಿಕೊಂಡು ತಿರುಗ್ತಿದ್ದಾನೆ; ಸಿದ್ದರಾಮಯ್ಯ ವಾಗ್ದಾಳಿ

ಮಂಡ್ಯದಿಂದ ಸುಮಲತಾ ಅಂಬರೀಷ್​ ಸ್ಪರ್ಧೆ ಬಗ್ಗೆ ನಾನು ಮಾತನಾಡೋದಿಲ್ಲ. ನಮ್ಮ ಪಕ್ಷದಿಂದ ಅವರು ನಿಲ್ಲೋದಿಲ್ಲ.  ಈಗಾಗಲೇ ಸೀಟು ಹಂಚಿಕೆ ವೇಳೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌‌ಗೆ ಬಿಟ್ಟು ಕೊಟ್ಟಿದ್ದೇವೆ. ಉಳಿದಿದ್ದು ಅವರಿಗೆ ಬಿಟ್ಟದ್ದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

sushma chakre | news18
Updated:March 15, 2019, 1:17 PM IST
ನಾವು ಮಾಡಿದ ಕೆಲಸಾನ ಪ್ರತಾಪ್​ ಸಿಂಹ ತನ್ನದು ಅಂತ ಹೇಳಿಕೊಂಡು ತಿರುಗ್ತಿದ್ದಾನೆ; ಸಿದ್ದರಾಮಯ್ಯ ವಾಗ್ದಾಳಿ
ಪ್ರತಾಪ್ ಸಿಂಹ- ಸಿದ್ದರಾಮಯ್ಯ
sushma chakre | news18
Updated: March 15, 2019, 1:17 PM IST
ಮೈಸೂರು (ಮಾ. 15): 'ಮೈಸೂರಿಗೆ ಪ್ರತಾಪ್​ ಸಿಂಹ ಕೊಡುಗೆಯೇನು? ಸಿಎಂ ಆಗಿದ್ದಾಗ ನಾನು, ಎಚ್​.ಸಿ. ಮಹದೇವಪ್ಪ ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿ ಪಡಿಸುವಾಗ ಪ್ರತಾಪ್ ಸಿಂಹ ಎಲ್ಲಿದ್ದ?' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.

'ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ ನಾವು ಮಾಡಿದ ಕೆಲಸವನ್ನು ತಾನು ಮಾಡಿದ್ದು ಎಂದು ಹೇಳಿಕೊಂಡು ಪ್ರತಾಪ್​ ಸಿಂಹ ತಿರುಗುತ್ತಿದ್ದಾನೆ. ನಾನು ಆತನ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ಪ್ರತಾಪ್ ಸಿಂಹ ಮಾತ್ರವಲ್ಲ, ಬಿಜೆಪಿಯ ಯಾವ ಸಂಸದರೂ ಯಾವ ಕೆಲಸವನ್ನೂ ಮಾಡಿಲ್ಲ' ಎಂದಿದ್ದಾರೆ.

'ಅಭಿವೃದ್ಧಿ ವಿಚಾರದಲ್ಲಿ ನಮ್ಮ ಪಕ್ಷದ ಚಾಮರಾಜನಗರ ಸಂಸದ ಧ್ರುವ ನಾರಾಯಣ್ ಜೊತೆಗೆ ಬಿಜೆಪಿಯವರು ಚರ್ಚೆಗೆ ಬರುತ್ತಾರಾ? ಶೋಭಾ ಕರಂದ್ಲಾಜೆ ಬರುತ್ತಾರಾ?, ನಳಿನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗಡೆ ಚರ್ಚೆಗೆ ಬರುತ್ತಾರಾ? ಬಿಜೆಪಿಯವರೆಲ್ಲರೂ ಏನೂ ಮಾಡದೆ ಸುಮ್ಮನೆ‌ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮೈಸೂರು ಕೈ​ ಅಭ್ಯರ್ಥಿಯಾಗಿ ಸಿ.ಎಚ್​. ವಿಜಯಶಂಕರ್​ ಆಯ್ಕೆ ಬಹುತೇಕ ಖಚಿತ; ಇಂದು ಸಿದ್ದರಾಮಯ್ಯರಿಂದ ಘೋಷಣೆ ಸಾಧ್ಯತೆ

ಸುಮಲತಾ ಬಗ್ಗೆ ನಾನು ಮಾತಾಡಲ್ಲ:

ಮಂಡ್ಯದಿಂದ ಸುಮಲತಾ ಅಂಬರೀಷ್​ ಸ್ಪರ್ಧೆ ಬಗ್ಗೆ ನಾನು ಮಾತನಾಡೋದಿಲ್ಲ. ನಮ್ಮ ಪಕ್ಷದಿಂದ ಅವರು ನಿಲ್ಲೋದಿಲ್ಲ. ಹಾಗಾಗಿ ಅವರ ಬಗ್ಗೆ ನಾನು ಮಾತನಾಡೋದಿಲ್ಲ. ಸುಮಲತಾ ಈಗಲೂ ನಮ್ಮ ಪಕ್ಷದಲ್ಲೇ ಇದ್ದಾರೆ. ಆದರೆ, ನಮ್ಮ ಪಕ್ಷದಿಂದ ಅವರು ಸ್ಪರ್ಧಿಸುತ್ತಿಲ್ಲ. ಈಗಾಗಲೇ ಸೀಟು ಹಂಚಿಕೆ ವೇಳೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌‌ಗೆ ಬಿಟ್ಟು ಕೊಟ್ಟಿದ್ದೇವೆ. ಉಳಿದದ್ದು ಅವರಿಗೆ ಬಿಟ್ಟಿದ್ದು ಎಂದಿದ್ದಾರೆ.

ಜೆಡಿಎಸ್​ ಪಾಲಿನ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬೇಡಿಕೆಯಿಟ್ಟ ಡಿಸಿಎಂ ಪರಮೇಶ್ವರ್​
Loading...

ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಅಂತ ನಿನ್ನೆ ಘೋಷಣೆ ಮಾಡಿದ್ದಾರೆ. ಮಂಡ್ಯ ಕ್ಷೇತ್ರವನ್ನು ಅವರಿಗೆ ಬಿಟ್ಟಾಗಿದೆ. ಜೆಡಿಎಸ್‌ ಯಾರನ್ನು ಬೇಕಾದರೂ ಅಭ್ಯರ್ಥಿಯನ್ನಾಗಿ ಘೋಷಿಸಲಿ. ನಾನು ಮಂಡ್ಯ ಮಾತ್ರವಲ್ಲ, 28 ಕ್ಷೇತ್ರದಲ್ಲೂ ಪ್ರವಾಸ ಮಾಡುತ್ತೇನೆ. ಎಲ್ಲ ಕಡೆ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಕೈ ತಪ್ಪಿದ ಕ್ಷೇತ್ರ: ದೇವೇಗೌಡರ ಬಳಿಕ ಕುಮಾರಸ್ವಾಮಿ ಜೊತೆ ಚರ್ಚೆಗೆ ಮುಂದಾದ ಡಿಸಿಎಂ ಪರಮೇಶ್ವರ್​

ತುಮಕೂರಿನ ಟಿಕೆಟ್ ವಿಚಾರವಾಗಿ ನಾನು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಜೊತೆ ಮಾತನಾಡುತ್ತೇನೆ. ಆ ಬಗ್ಗೆ ಇಲ್ಲಿಯವರ ಜೊತೆ ಮಾತನಾಡುವ ಅಗತ್ಯವಿಲ್ಲ. ಈ ಬಾರಿ ನಾವು 20 ಸ್ಥಾನಗಳನ್ನು ಗೆಲ್ಲುತ್ತೇವೆ. ನಮ್ಮಲ್ಲಿ ಯಾವುದೇ ಬಿರುಕಿಲ್ಲ. ಎ. ಮಂಜು ಪಕ್ಷ ಬಿಡುವುದಿಲ್ಲ. ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕೂಡ ನಮ್ಮ ಜೊತೆಯಲ್ಲಿದ್ದಾರೆ ಎಂದು ಹೇಳಿದ್ದಾರೆ.

- ಪುಟ್ಟಪ್ಪ 

First published:March 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...