HOME » NEWS » State » EX CM HD KUMARSWAMY TAUNTS GT DEVEGOWDA SESR ATVR

ವಿಸಿಟಿಂಗ್​ ಕಾರ್ಡ್​ಗಾಗಿ ಪಕ್ಷದ ಹುದ್ದೆ ಕೊಡುವುದಿಲ್ಲ; ಜಿಟಿ ದೇವೇಗೌಡಗೆ ಎಚ್​ಡಿಕೆ ಟಾಂಗ್​​

ಸಿಪಿ ಯೋಗೇಶ್ವರ್​ ಸಚಿವರಾಗಿದ್ದು ಒಳ್ಳೆದು ಆಯಿತು. ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಕೆಲಸ ಮಾಡಲು ಅನುಕೂಲವಾಯಿತು

news18-kannada
Updated:January 19, 2021, 8:02 PM IST
ವಿಸಿಟಿಂಗ್​ ಕಾರ್ಡ್​ಗಾಗಿ ಪಕ್ಷದ ಹುದ್ದೆ ಕೊಡುವುದಿಲ್ಲ; ಜಿಟಿ ದೇವೇಗೌಡಗೆ ಎಚ್​ಡಿಕೆ ಟಾಂಗ್​​
ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ
  • Share this:
ರಾಮನಗರ (ಜ. 19):  ಪಕ್ಷದ ಸಂಘಟನೆಯ ಬಗ್ಗೆ ಆಸಕ್ತಿಯಿಲ್ಲ ಎಂದವರಿಗೆ ವಿಸಿಟಿಂಗ್ ಕಾರ್ಡ್​ಗಾಗಿ ಪಕ್ಷದ ಹುದ್ದೆ ಕೊಡುವುದಿಲ್ಲ ಎಂದು ಶಾಸಕ ಜಿಟಿ ದೇವೇಗೌಡ ಅವರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಚನ್ನಪಟ್ಟಣದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು,  ಜೆಡಿಎಸ್ ಕೋರ್ ಕಮಿಟಿಯಲ್ಲಿ ಜಿಟಿ ದೇವೇಗೌಡ ಅವರ ಹೆಸರು ಕೈಬಿಟ್ಟ ವಿಚಾರ ಕುರಿತು ಪ್ರತಿಕ್ರಿಯಿಸಿದರು. ಅವರಿಗೆ ಪಕ್ಷದ ಸಂಘಟನೆ ಬಗ್ಗೆ ಆಸಕ್ತಿಯಿಲ್ಲ . ಈ ಬಗ್ಗೆ ಅವರೇ ಹೇಳಿದ್ದಾರೆ .ನನಗೆ ನನ್ನ ಕ್ಷೇತ್ರ ಮುಖ್ಯ. ಪಕ್ಷದ ಸಂಘಟನೆಗೆ ಸಮಯ ಕೊಡಲು ಆಗಲ್ಲ ಎಂದಿದ್ದಾರೆ. ಈಗ ಅವರಿಗೆ ಕ್ಷೇತ್ರದ ಬಗ್ಗೆ ಗಮನಬಂದಿದೆ . ಹಾಗಾಗಿ ಕೇವಲ ವಿಸಿಟಿಂಗ್ ಕಾರ್ಡ್ ಗಾಗಿ ನಾನು ಅವಕಾಶ ಕೊಡ್ಲಾ ಎಂದು ಪ್ರಶ್ನಿಸಿದರು. ಇಲ್ಲಿ ವಯಸ್ಸಿನ ವಿಚಾರ ಬರಲ್ಲ, ಹೊರಟ್ಟಿಯವರಿಗೆ ವಯಸ್ಸಾಗಿಲ್ಲವೇ. ಈ ಬಗ್ಗೆ ಜೆಪಿ ಭವನಕ್ಕೆ ಬಂದು ದೇವೇಗೌಡರ ಜೊತೆಗೆ ಬಂದು ಚರ್ಚೆ ಮಾಡಲಿ. ಇಲ್ಲಿ ಕೆಲಸ ಮಾಡುವವರಿಗೆ ಅವಕಾಶ ಕೊಡಲಾಗಿದೆ. ಮಾಧ್ಯಮಗಳ ಮೂಲಕ ನನಗೆ ಸಂದೇಶ ಕೊಡುವುದು ಬೇಡ ಎಂದರು



ಅಲ್ಲದೇ ಮುಂದಿನ ಚುನಾವಣೆ ಬಂದಾಗ ಯಾರ್ಯಾರು ಎಲ್ಲಿರುತ್ತಾರೋ ಗೊತ್ತಿಲ್ಲ. ಇವತ್ತು ಪಕ್ಷ ನಿಷ್ಠೆಗಿಂತಲೂ ಅವರ ಸ್ಥಾನಮಾನಗಳೇ ಮುಖ್ಯವಾಗಿದೆ. ಕಾರ್ಯಕರ್ತರ ಶ್ರಮ, ಕಷ್ಟಸುಖದ ಬಗ್ಗೆ ಯಾರಿಗೂ ಅರಿವಿಲ್ಲ. ಕಾರ್ಯಕರ್ತರನ್ನ ನಂಬಿ ರಾಜಕಾರಣ ಮಾಡುತ್ತೇವೆ. 30 ಜಿಲ್ಲೆಗಳಲ್ಲೂ ಪಕ್ಷದ ಹೊಸ ಪದಾಧಿಕಾರಿಗಳು ನೇಮಕ ಮಾಡಲಾಗುತ್ತದೆ. ಈಗಾಗಲೇ ಎಲ್ಲಾ ರೀತಿಯ ತಯಾರಿ ನಡೆದಿದೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಚನ್ನಪಟ್ಟಣ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​ಗೆ ಮಂತ್ರಿ ಸ್ಥಾನ ಲಭಿಸಿದ ಕುರಿತು ಮಾತನಾಡಿದ ಅವರು, ಅವರು ಸಚಿವರಾಗಿದ್ದು  ಒಳ್ಳೆದು ಆಯಿತು. ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಕೆಲಸ ಮಾಡಲು ಅನುಕೂಲವಾಯಿತು ಎಂದು ಟಾಂಗ್​ ನೀಡಿದರು.

ಇದನ್ನು ಓದಿ: ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಇತಿಹಾಸದಲ್ಲಿ ಮೊದಲ ಬಾರಿಗೆ ದೇವಾಲಯದ ಪ್ರಾಂಗಣದಲ್ಲಿ ಬ್ರಹ್ಮರಥೋತ್ಸವ

ನಾನು ರಾಜಕೀಯಕ್ಕೆ ಬಂದಾಗಿನಿಂದಲೂ ಮಂತ್ರಿಗಳನ್ನ ನೋಡಿದ್ದೇನೆ. ಮಂತ್ರಿಗೆ ಏನ್ ಕೊಂಬಿರುತ್ತದಾ.  ನನಗೆ ಯಾವ ರೀತಿಯ ಭಯವಿಲ್ಲ. ನಾನು ಸಿಎಂ ಆಗಿದ್ದೆ, ಮಂತ್ರಿಗಳನ್ನು ನೋಡಿದ್ದೇನೆ, ಸಿಎಂ ನೂ ನೋಡಿದ್ದೇನೆ. ಜನ ನಮಗೆ ದೆಹಲಿಯನ್ನು ತೋರಿಸಿದ್ದಾರೆ. ಅಧಿಕಾರ ಬಂದಾಗ ಬಡವರ ಬಗ್ಗೆ ಚಿಂತನೆ ಮಾಡಲಿ. ಬಡವರ ಪರವಾಗಿ ಕೆಲಸ ಮಾಡಲಿ. ಬಡವರಿಂದ ಹಣ ಲೂಟಿ ಮಾಡಬಾರದು  ಎಂದರು.

ಇದೇ ವೇಳೆ ಲೆಟರ್​ ಹೆಡ್​ ವಿಚಾರ ಕುರಿತು ಟೀಕಿಸಿದ ಅವರು, ಪ್ರಾಮಾಣಿಕ ಅಧಿಕಾರಿಗಳ ಮೂಲಕ ಕೆಲಸ ಮಾಡಿ, ಅವರೇ ಹೆಸರು ಪಡೆಯಲಿ. ಈಗ ಹಣ ಮಾಡಲು ರಾಜ್ಯ ಮಟ್ಟದಲ್ಲಿ ಅಧಿಕಾರ ಕೊಟ್ಟಿದ್ದಾರೆ. ಮೊದಲು ತಾಲೂಕು ಮಟ್ಟದಲ್ಲಿ ನಡೆಯುತ್ತಿತ್ತು ಎಂದು ಟೀಕಿಸಿದರು
Published by: Seema R
First published: January 19, 2021, 7:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories