• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ನಾನೇನು ಬಿಜೆಪಿಗೆ ರತ್ನಗಂಬಳಿ‌ ಹಾಸಿಲ್ಲ: ಹಳ್ಳಿಹಕ್ಕಿ, ಸಿದ್ದರಾಮಯ್ಯರನ್ನು ಕುಟುಕಿದ ಎಚ್​ಡಿಕೆ

ನಾನೇನು ಬಿಜೆಪಿಗೆ ರತ್ನಗಂಬಳಿ‌ ಹಾಸಿಲ್ಲ: ಹಳ್ಳಿಹಕ್ಕಿ, ಸಿದ್ದರಾಮಯ್ಯರನ್ನು ಕುಟುಕಿದ ಎಚ್​ಡಿಕೆ

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ.

ನಮ್ಮ ಪಕ್ಷದ ಸಿದ್ದಾಂತದ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರಿಗೆ ಯಾವ ಸಿದ್ದಾಂತ ಇದೆ ಎಂದು ಪ್ರಶ್ನಿಸಿದರು

  • Share this:

ಮೈಸೂರು (ಫೆ.3): ನಾನೇನು ಬಿಜೆಪಿಗಾಗಿ ರತ್ನಗಂಬಳಿ‌ ಹಾಸಿಲ್ಲ,  ಸಭಾಪತಿ ವಿಚಾರವಾಗಿ ಸ್ವತಃ ಮುಖ್ಯಮಂತ್ರಿಗಳೇ ಕರೆ  ಮಾಡಿ ಬೆಂಬಲ ಕೇಳಿದರು ಕೊಟ್ಟಿದ್ದೇನೆ ಅಷ್ಟೇ. ನನ್ನ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಬಿಜೆಪಿ ವಿಧಾನಪರಿಷತ್​ ಸದಸ್ಯ ಎಚ್​ ವಿಶ್ವನಾಥ್​ಗೆ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.  ನಾನು ಹೆಚ್‌.ವಿಶ್ವನಾಥ್ ಬಗ್ಗೆ ಮಾತನಾಡುವುದಿಲ್ಲ. ಆದರೆ, ಅವರು ನನ್ನ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ. ನಾನೇನು ಬಿಜೆಪಿ ಮನೆ ಬಾಗಿಲಿಗೆ ಹೋಗಿರಲಿಲ್ಲ. ಸಭಾಪತಿ ಬದಲಾವಣೆ ವಿಚಾರವಾಗಿ ಬೆಂಬಲ ಕೇಳಿದ್ದರು.  ಅದಕ್ಕಾಗಿ ನಾನು ಬೆಂಬಲ ನೀಡಿದ್ದೇನೆ. ಅದನ್ನ ಹೊರೆತು ಪಡಿಸಿ ಬಿಜೆಪಿಯಿಂದ ನಾನು ಯಾವುದೇ ಲಾಭ ಪಡೆದುಕೊಂಡಿಲ್ಲ. ನನಗೆ ಬಿಜೆಪಿ ಜೊತೆ ಯಾವ ಆತ್ಮಿಯತೆಯೂ ಇಲ್ಲ ಎಂದು  ವಿಶ್ವನಾಥ್​ ಹೇಳಿಕೆಗೆ ಕುಟುಕಿದ್ದಾರೆ.  


ಇದೇ ವೇಳೆ ಸಿದ್ದರಾಮಯ್ಯ ವಿರುದ್ದವು ವಾಗ್ದಾಳಿ ನಡೆಸಿದ ಮಾಜಿ ಸಿಎಂ,  ನಮ್ಮ ಪಕ್ಷದ ಸಿದ್ದಾಂತದ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರಿಗೆ ಯಾವ ಸಿದ್ದಾಂತ ಇದೆ ಎಂದು ಪ್ರಶ್ನಿಸಿದರು. ನಮಗೆ ಪ್ರಶ್ನೆ ಮಾಡುವ ಮೊದಲು ಅವರಿಗೆ ಸಿದ್ಧಾಂತ ಇದ್ಯಾ ಎಂದು ಹೇಳಲಿ. ವಿಧಾನಪರಿಷತ್‌ನಲ್ಲಿ ಸಭಾಪತಿ ಬದಲಾವಣೆ ವಿಚಾರವಾಗಿ ಬಿಜೆಪಿ ನನ್ನ ಬೆಂಬಲ ಕೇಳಿತ್ತು ಕೊಟ್ಟಿದ್ದೇವೆ. ಆದರೆ ಸಿದ್ದರಾಮಯ್ಯನವರು ಈ ವಿಚಾರವಾಗಿ ಹೆಚ್‌.ಡಿ.ದೇವೇಗೌಡರ ಜಾತ್ಯಾತೀತೆಯನ್ನ ಬಹಿರಂಗ ಮಾಡುತ್ತೇನೆ ಎನ್ನುವ ಸವಾಲು ಹಾಕಿದರು. ನಮ್ಮನ್ನ ಬೆಂಬಲ ಕೇಳಿದವರಿಗೆ ನಾವು ಬೆಂಬಲ ಕೊಟ್ಟಿದ್ದೇವೆ ಎನ್ನುವುದನ್ನು ಬಿಟ್ಟರೆ ಇಲ್ಲಿ ಇನ್ನ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟನೆ ನೀಡಿದರು.


ಇದನ್ನು ಓದಿ: ಎಲ್ಲರ ಮನೆಗೆ ಹೋಗಿ ವಾಪಸ್ ಜೆಡಿಎಸ್‌ಗೆ ಬಂದರೆ ಸೇರಿಸಿಕೊಳ್ಳಲ್ಲ; ಜಿಟಿಡಿ ವಿರುದ್ಧ ಕುಮಾರಸ್ವಾಮಿ ಕಿಡಿ


ರೈತರ ಪರ ನಮ್ಮ ನಿಲುವು


ರೈತರ ವಿಚಾರವಾಗಿ ನಮ್ಮ ನಿಲುವು ಒಂದೇ ಆಗಿದೆ. ರೈತರಿಗೆ ಅನ್ಯಾಯ ಆಗುವಂತ ವಿಚಾರ ಯಾವುದೇ ಇದ್ದರು ಜೆಡಿಎಸ್‌ ರೈತರ ಪರವಾಗಿ ನಿಲ್ಲಲಿದೆ. ದೆಹಲಿಯಲ್ಲಿ ಒಂದು ಕರ್ನಾಟಕದಲ್ಲಿ ಒಂದು ಸಿದ್ದಾಂತ ಇರುವುದಿಲ್ಲ. ಸಿದ್ದಾಂತ ಬದಲಾವಣೆ ಆಗುವುದು ನಮ್ಮದಲ್ಲ. ಅದು ನಿಮ್ಮದು ಎಂದು ಸಿದ್ದರಾಮಯ್ಯ ವಿರುದ್ಧ ಕುಟುಕಿದರು.


ಯಾವುದೋ ಸ್ಥಾನಮಾನಕ್ಕಾಗಿ ನಾವು ಸಿದ್ದಾಂತ ಬದಲಿಸಲ್ಲ. ಕರ್ನಾಟಕದಲ್ಲಿ ಭೂ ಸುಧಾರಣೆ ಕಾಯ್ದೆ ವಿಚಾರವಾಗಿ ನಾನು ಸದನದಲ್ಲೆ ಮಾತನಾಡಿದ್ದೇನೆ. ಬಿಜೆಪಿ ಸರ್ಕಾರ ತರಲು ಹೊರಟಿದ್ದ ಎಲ್ಲ ಕಾಯ್ದೆಯನ್ನ ರದ್ದು ಮಾಡಿ, ಕೇವಲ  79/a 79/b  ಕಾಯ್ದೆಗಳನ್ನ ರದ್ದು ಮಾಡಲು ಮಾತ್ರ ಸಹಕಾರ ನೀಡಿದ್ದೇನೆ. ಅಂದಿನ ಬಾರುಕೋಲು ಚಳುವಳಿ ನಾಯಕ ನಂಜುಂಡಸ್ವಾಮಿ ಅವರೇ ಇದನ್ನ ಒತ್ತಾಯ ಮಾಡಿದ್ದರು. ಆಗ ಸಿದ್ದರಾಮಯ್ಯ ಅವರ ಸರ್ಕಾರವೇ ಇತ್ತು. ಈಗ ರಾಜಕೀಯದ ತೇವಲಿಗಾಗಿ ಜನರ ಮುಂದೆ ಸುಮ್ಮನೆ ವಿಚಾರ ಮಂಡನೆ ಮಾಡಿ, ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​​ ನಾಯಕರ ವಿರುದ್ಧ ಟೀಕಿಸಿದರು.

Published by:Seema R
First published: