ಬೆಂಗಳೂರು (ಫೆ. 6): ನೂತನ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆ ಮುಖಂಡರ ಜೊತೆ ಸರ್ಕಾರದ ಪ್ರತಿನಿಧಿಗಳ ಬದಲಾಗಿ ಪ್ರಧಾನಿ ಚರ್ಚೆ ನಡೆಸುವುದು ಸೂಕ್ತ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆ ವಿರುದ್ಧ ಸಂಬಂಧ ಸರ್ಕಾರ ಒಂದು ತೀರ್ಮಾನ ಮಾಡಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಪಕ್ಷದಲ್ಲಿನ ಬೆಳವಣಿಗೆ ಕುರಿತು ಮಾತನಾಡಿದ ಅವರು, ಇಂದು ವೀಕ್ಷಕರ ಜೊತೆ ಪಕ್ಷ ಸಂಘಟನೆ ಕುರಿತು ಸಭೆ ನಡೆಸುತ್ತಿದ್ದೇವೆ. ಕೆಲವು ಶಾಸಕರು ಈಗಾಗಲೇ ತುಂಬಾ ದೂರು ಹೋಗಿ ಬಿಟ್ಟಿದ್ದಾರೆ. ಅವರ ಬಗ್ಗೆ ನಾನು ಪದೇ ಪದೇ ಮಾತನಾಡಲು ಹೋಗುವುದಿಲ್ಲ. ಈಗಾಗಲೇ ಹಲವು ಬಾರಿ ಹಲವು ಜನ ಅವರ ಜೊತೆ ಮಾತಾಡಿದ್ದಾರೆ. ಆದರೆ ಅದು ನನಗೇನು ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷ ಸಂಘಟನೆ ನನ್ನ ಗುರಿ
ನನ್ನ ಮುಂದೆ ಇರುವ ಏಕೈಕ ಗುರಿಎಂದರೆ ಅದು ಕೇವಲ ಪಕ್ಷ ಸಂಘಟನೆ ಮಾತ್ರ. ಕಾರ್ಯಕರ್ತ ಜೊತೆಯಲ್ಲಿ ಪಕ್ಷ ಸಂಘಟನೆ ಮಾಡುವುದು ನನ್ನ ಪ್ರಮುಖ ಗುರಿಯಾಗಿದೆ ಎನ್ನುವ ಮೂಲಕ ಪಕ್ಷ ಸಂಘಟನೆಯಿಂದ ಅಂತರ ಕಾಯ್ದುಕೊಂಡವರಿಗೆ ಟಾಂಗ್ ನೀಡಿದರು
ತಜ್ಞರ ಜೊತೆ ಚರ್ಚಿಸಲಿ
ಮೀಸಲಾತಿ ಸೇರಿದಂತೆ ಪ್ರಮುಖ ವಿಷಯಗಳ ಕುರಿತ ಸ್ವಾಮೀಜಿಗಳ ಹೋರಾಟ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವು ಸ್ವಾಮೀಜಿ ಗಳ ಹೋರಾಟ ಹಾಗೂ ಅವರ ಬೇಡಿಕೆಗಳ ಬಗ್ಗೆ ಸರ್ಕಾರ ನಿರ್ಧಾರ ಮಾಡಬೇಕು. ಯಾವ ರೀತಿ ಅವರ ಬೇಡಿಕೆ ಈಡೇರಿಸಬೇಕು ಎಂದು ಸೂಕ್ತ ತೀರ್ಮಾನ ಮಾಡಬೇಕು. ವರ್ಗಗಳ ಬೇಡಿಕೆ ಈಡೇರಿಸಲು ತಜ್ಞರ ಜೊತೆ ಚರ್ಚಿಸಿ, ತೀರ್ಮಾನ ಮಾಡಬೇಕು ಎಂದರು.
ಇದನ್ನು ಓದಿ: 20 ಲಕ್ಷ ರೂ ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಬಿಎಂಪಿ ಯೋಜನಾಧಿಕಾರಿ
ಸಿಎಂ ನನ್ನ ಬಗ್ಗೆ ಸಾಫ್ಟ್ ಆಗಿಲ್ಲ
ಕುಮಾರಸ್ವಾಮಿ ಗೆ ಸ್ವತಂತ್ರ ವಾಗಿ ಕೆಲಸ ಮಾಡಲು ಕಾಂಗ್ರೆಸ್ ಬಿಟ್ಟಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಯಡಿಯೂರಪ್ಪ ಸದನದಲ್ಲಿ ಮಾತನಾಡಿದ ಕುರಿತು ಪ್ರತಿಕ್ರಿಯಿಸಿದ ಅವರು, ಸಿಎಂ ಬಿಎಸ್ ಯಡಿಯೂರಪ್ಪ ನನ್ನ ವಿಷಯದಲ್ಲಿ ಮೃದು ಧೋರಣೆ ತಳೆದಿಲ್ಲ. ಆದರೆ, ಹಿಂದೆ ನಡೆದಿರುವ ಘಟನೆ ಕುರಿತು ಇರುವ ವಾಸ್ತವ ಸ್ಥಿತಿಯನ್ನು ಅವರು ಹೇಳಿದ್ದಾರೆ ಎಂದರು.
ಪ್ರೀತಂ ಗೌಡ ಕಾಲೆಳೆದ ಮಾಜಿ ಸಿಎಂ
ಹಾಸನ ವಿಮಾನ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳುವ ವಿಚಾರ ಕುರಿತು ಬಿಜೆಪಿ ಶಾಸಕ ಪ್ರೀತಂ ಗೌಡ ಬರೆದ ಪತ್ರ ಕುರಿತು ತಿರುಗೇಟು ನೀಡಿದ ಅವರು, ವಿಮಾನ ನಿಲ್ದಾಣ ಕಾಮಗಾರಿ ಸಂಬಂಧ ಹಾಸನ ಶಾಸಕರು ಪತ್ರ ಬರೆದಿರುವುದು ಅಭಿನಂದನೆಗಳು. ಈ ಕಾರ್ಯ ತಮ್ಮಿಂದಲೇ ಆಗಿದೆ ಎಂದು ಅವರು ಎಂದು ಕೊಂಡಿರುವುದು ಒಳ್ಳೆದು. ಹಾಸನ ಅಭಿವೃದ್ಧಿ ಬಗ್ಗೆ ಶಾಸಕರಿಗೆ ಅಷ್ಟೊಂದು ಕಾಳಜಿ ಇರುವುದು ಖುಷಿ ತಂದಿದೆ ಎಂದು ಪ್ರೀತಂಗೌಡ ಕುರಿತು ವ್ಯಂಗ್ಯವಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ