• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • 9 ಜಿಲ್ಲೆಗಳಲ್ಲಿ ಕೈಗಾರಿಕಾ ಸಮುಚ್ಚಯ ನಿರ್ಮಿಸುವ ಯೋಜನೆ ಮೂಲೆಗುಂಪು; ಕುಮಾರಸ್ವಾಮಿ ಟೀಕಾಪ್ರಹಾರ

9 ಜಿಲ್ಲೆಗಳಲ್ಲಿ ಕೈಗಾರಿಕಾ ಸಮುಚ್ಚಯ ನಿರ್ಮಿಸುವ ಯೋಜನೆ ಮೂಲೆಗುಂಪು; ಕುಮಾರಸ್ವಾಮಿ ಟೀಕಾಪ್ರಹಾರ

ಜೆಡಿಎಸ್ ಜನತಾ ಪರ್ವ.

ಜೆಡಿಎಸ್ ಜನತಾ ಪರ್ವ.

ಪ್ರತಿಯೊಂದು ಕುಟುಂಬದ ಯುವಕರಿಗೆ ಉದ್ಯೋಗ ದೊರಕಬೇಕು. ನಿರುದ್ಯೋಗ ತೊಡೆದು ಹಾಕುವುದು ಜೆಡಿಎಸ್ ಗುರಿ. ಮೊದಲು ಎಲ್ಲರಿಗೂ ಕೆಲಸ ಸಿಗಲಿ. ಬದುಕು ಸಿಗಲಿ. ಆಮೇಲೆ ಹಿಂದೂ ರಾಷ್ಟ್ರದ ಬಗ್ಗೆ ಯೋಚನೆ ಮಾಡೋಣ ಎಂದು ಕುಮಾರಸ್ವಾಮಿ ಕರೆ ನೀಡಿದ್ದಾರೆ.

  • Share this:

    ಬೆಂಗಳೂರು (ಸೆಪ್ಟೆಂಬರ್ 30): ರಾಜ್ಯ ಬಿಜೆಪಿ ಸರಕಾರವೂ (State BJP Government) ತನ್ನ ಹಿಡನ್ ಅಜೆಂಡಾಗಳಿಗೆ ಜೋತುಬಿದ್ದು ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಟೀಕಾಪ್ರಹಾರ ನಡೆಸಿದ್ದಾರೆ. ಜನತಾ ಪರ್ವ 1.O (JDS Janata Parva) ಹಾಗೂ ಮಿಷನ್ 123 ಗುರಿಯೊಂದಿಗೆ ಬಿಡದಿಯ ತೋಟದಲ್ಲಿ ನಡೆಯುತ್ತಿರುವ ಸಂಘಟನಾ ಕಾರ್ಯಗಾರದಲ್ಲಿ ನಾಲ್ಕನೇ ದಿನದ ಕಾರ್ಯಕ್ರಮ ಆರಂಭಕ್ಕೆ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದ ಅವರು, "ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಬಿಜೆಪಿ ಸರಕಾರ ತೀವ್ರ ನಿರ್ಲಕ್ಷ್ಯ ತೋರಿದೆ. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ನಾನು ಜಾರಿಗೆ ತಂದ ಉದ್ಯೋಗ ಸೃಷ್ಟಿಯ ಕಾರ್ಯಕ್ರಮಗಳನ್ನು ಸರಕಾರ ಉಪೇಕ್ಷೆ ಮಾಡಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


    ಉದ್ಯೋಗ ಕೊಡುವುದಾಗಿ ಅಂತ ಬಿಜೆಪಿ ಸರಕಾರ ಹೇಳಿತ್ತು. ಆದರೆ ದುಡಿಯುವ ಕೈಗಳಿಗೆ ಕೆಲಸ ಕೊಡದೆ ನಿರುದ್ಯೋಗವನ್ನು ಉಡುಗೊರೆಯಾಗಿ ನೀಡಿದೆ. 9 ಜಿಲ್ಲೆಗಳಲ್ಲಿ ಕೈಗಾರಿಕಾ ಸಮುಚ್ಚಯ ಮಾಡುವ ನನ್ನ ನೇತೃತ್ವದ ಸಮ್ಮಿಶ್ರ ಸರಕಾರ ನಿರ್ಧಾರ ಮಾಡಿತ್ತು. ಆದರೆ, ಈ ಸರಕಾರ ಆ ಯೋಜನೆಯನ್ನು ಮೊಲೆಗುಂಪು ಮಾಡಿದೆ ಎಂದು ಹೆಚ್ ಡಿಕೆ ಹೇಳಿದರು.


    ಸರಕಾರ ಉದ್ಯೋಗ ಸೃಷ್ಟಿ ಮಾಡುತ್ತಿಲ್ಲ. ಬಿಜೆಪಿಗೆ ಹಿಂದೂ ರಾಷ್ಟ್ರ ಮಾಡಬೇಕು ಎಂಬ ಪ್ರಮುಖ ಉದ್ದೇಶ ಇದೆ. ಈ ಮೂಲಕ ಯುವಕರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ. ಯುವಕರು ಹಾಗೂ ಮಹಿಳೆಯರಿಗೆ ಸ್ವಾವಲಂಭಿಯಾಗಿ ಬದುಕುಬೇಕು. ಅದಕ್ಕೆ ಅವಕಾಶ ಮಾಡಿಕೊಡುವ ಕೆಲಸವನ್ನು ಸರಕಾರ ಮಾಡುತ್ತಿಲ್ಲ ಎಂದು ಅವರು ಟೀಕಿಸಿದರು.


    ಪ್ರತಿಯೊಂದು ಕುಟುಂಬದ ಯುವಕರಿಗೆ ಉದ್ಯೋಗ ದೊರಕಬೇಕು. ನಿರುದ್ಯೋಗ ತೊಡೆದು ಹಾಕುವುದು ಜೆಡಿಎಸ್ ಗುರಿ. ಮೊದಲು ಎಲ್ಲರಿಗೂ ಕೆಲಸ ಸಿಗಲಿ. ಬದುಕು ಸಿಗಲಿ. ಆಮೇಲೆ ಹಿಂದೂ ರಾಷ್ಟ್ರದ ಬಗ್ಗೆ ಯೋಚನೆ ಮಾಡೋಣ. ರಾಜ್ಯದ ಮೂಲೆ ಮೂಲೆಯಲ್ಲಿ ಯುವಕರು ಸಂಘಟನೆ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.


    2023ರಲ್ಲಿ ಯುವ ಶಕ್ತಿ, ಮಹಿಳಾ ಶಕ್ತಿ ಜನಪರ ಸರ್ಕಾರ ತರಬೇಕಾಗುತ್ತದೆ. ಯುವಕರಿಗೂ ಹೆಚ್ಚಿನ‌ ಆದ್ಯತೆ ನೀಡಬೇಕು. ನಮ್ಮ ಯುವಕರಿಗೆ ಇಂದು ಈ ಬಗ್ಗೆಯೇ ಸಂದೇಶ ನೀಡುವೆ. ಹಣದ ರಾಜಕಾರಣ ಮೆಟ್ಟಿ ನಿಲ್ಲಬೇಕು. ಜನರ ಹತ್ತಿರ ಹೋಗಿ ಜನರ ಸಮಸ್ಯೆಗಳನ್ನು ಆಲಿಸಬೇಕಾಗುತ್ತದೆ ಎಂದರಲ್ಲದೆ, ನಿಖಿಲ್ ಹಾಗೂ ಪ್ರಜ್ವಲ್ ಜಂಟಿ‌ ನಾಯಕತ್ವದಲ್ಲಿ ಯುವ ಜನತೆಯನ್ನು ಒಗ್ಗೂಡಿಸಿ ಮುಂದಿನ ಚುನಾವಣೆ ಎದುರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.


    ಇದನ್ನೂ ಓದಿ: Mantri Mall Lock: ಮತ್ತೆ "ಮಂತ್ರಿಮಾಲ್" ಕಿರಿಕ್! ತೆರಿಗೆ ಕಟ್ಟದೆ ಸತಾಯಿಸಿದ್ದಕ್ಕೆ "ಬೃಹತ್" ಬೀಗ!


    ಇಂದು ನಾಲ್ಕನೇ ದಿನದ ಕಾರ್ಯಗಾರ ನಡೆಯುತ್ತಿದೆ. ಇವತ್ತು ಕೊನೆಯ ದಿನ ಯುವ ಜನತಾ ದಳ‌ ಕಾರ್ಯಗಾರ. ಉತ್ಸಾಹದಲ್ಲಿ ಈ ಕಾರ್ಯಗಾರ ಆರಂಭವಾಗಿದೆ. ನಾವು 300 ಜನರಿಗೆ ಮಾತ್ರ ಆಹ್ವಾನ ಕೊಟ್ಟಿದ್ದೆವು. ಆದರೆ ಹೆಚ್ಚಿನ ಜನ ಇಂದು ಸೇರಿದ್ದಾರೆ. ಈ ಕಾರ್ಯಾಗಾರದಲ್ಲಿ ಮುಂದಿನ 2023 ರ ಗುರಿ ಏನಿದೆ ಅದಕ್ಕೆ ಯುವ ಜನತೆಯ ದುಡಿಮೆ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    Published by:MAshok Kumar
    First published: