HOME » NEWS » State » EX CM HD KUMARASWAMY BLAME STATE GOVERNMENT REGARDING TRASFER MAFIA MAK

ಕೊರೋನಾ ಭೀತಿಯ ನಡುವೆಯೂ ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ವರ್ಗಾವಣೆ ದಂಧೆ; ಹೆಚ್‌ಡಿಕೆ ಆರೋಪ

ವರ್ಗಾವಣೆ ವಿಚಾರದಲ್ಲಿ ಒಕ್ಕಲಿಗರು, ಲಿಂಗಾಯಿತರು ಎಂಬ‌ ಮಾತಿಲ್ಲ. ಅಧಿಕಾರಿಗಳು ಯಾರು ದುಡ್ಡು ಕೊಡ್ತಾರೆ ಅವರನ್ನ‌ ಬೇಕಾದ ಜಾಗಗಳಿಗೆ ಕಳುಹಿಸಲಾಗುತ್ತಿದೆ ಎಂದು ಹೆಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

news18-kannada
Updated:May 10, 2020, 2:14 PM IST
ಕೊರೋನಾ ಭೀತಿಯ ನಡುವೆಯೂ ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ವರ್ಗಾವಣೆ ದಂಧೆ; ಹೆಚ್‌ಡಿಕೆ ಆರೋಪ
ಹೆಚ್​.ಡಿ. ಕುಮಾರಸ್ವಾಮಿ.
  • Share this:
ಬೆಂಗಳೂರು (ಮೇ 10); ಮಾರಾಣಾಂತಿಕ ಕೊರೋನಾ ಭೀತಿಯ ನಡುವೆಯೂ ರಾಜ್ಯದಲ್ಲಿ ವರ್ಗಾವಣೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಕೆಲವು ವರ್ಗಾವಣೆಗಳ ಕುರಿತು ಮಾತನಾಡಿರುವ ಅವರು, "ವರ್ಗಾವಣೆ ವಿಚಾರದಲ್ಲಿ ಒಕ್ಕಲಿಗರು, ಲಿಂಗಾಯಿತರು ಎಂಬ‌ ಮಾತಿಲ್ಲ. ಅಧಿಕಾರಿಗಳು ಯಾರು ದುಡ್ಡು ಕೊಡ್ತಾರೆ ಅವರನ್ನ‌ ಬೇಕಾದ ಜಾಗಗಳಿಗೆ ಕಳುಹಿಸಲಾಗುತ್ತಿದೆ.

ಇತ್ತೀಚೆಗೆ ಅಬಕಾರಿ ಇಲಾಖೆಯಲ್ಲಿ ತರಾತುರಿಯಲ್ಲಿ 70 ರಿಂದ 80 ಜನರನ್ನ ವರ್ಗಾವಣೆ ಮಾಡಲಾಗಿದೆ. ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ನಂತರ ಈ ವರ್ಗಾವಣೆ ವಿಚಾರವನ್ನು ನಿನ್ನೆಯಿಂದ ಸಿಲ್ಲಿಸಲಾಗಿದೆ. ಪಾಪ ವರ್ಗಾವಣೆಗಾಗಿ ಹಣ ಕೊಟ್ಟವನ ಕಥೆ ಏನಾಯ್ತು ಅಂತಾ ಯೋಚಿಸಬೇಕು. ಇಂತಹ ಪರಿಸ್ಥಿತಿಯನ್ನು ಯಾರೂ ಹೇಳೋರಿಲ್ಲ, ಕೇಳೋರೂ ಇಲ್ಲದಂತಾಗಿದೆ. ಇವು ನಡೆಯುತ್ತಿರುವ ರೀತಿ ಸರಿಯಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕರುನಾಡಿಗೆ ಕಾದಿದೆಯಾ ಮಹಾಕಂಟಕ; ರ್‍ಯಾಪಿಡ್ ಟೆಸ್ಟ್ ಶುರುವಾದ್ರೆ ಹೆಚ್ಚಾಗಲಿದೆಯಾ ಪಾಸಿಟಿವ್ ಪ್ರಕರಣ?
First published: May 10, 2020, 2:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories