ಕಲಬುರಗಿ: ಯಾದಗಿರಿ (Yadagiri) ಹಾಗೂ ಕಲಬುರಗಿ (Kalaburagi) ಜಿಲ್ಲೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಬಿಜೆಪಿ ವಿಜಯಸಂಕಲ್ಪ ಯಾತ್ರೆ (Sankalp Yatra ) ನಡೆಯುತ್ತಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಎಸ್‌ವೈ, ಬಿಜೆಪಿಯ ಹಾಲಿ ಶಾಸಕರಿಗೆ ಶಾಕ್ ಕೊಟ್ಟಿದ್ದಾರೆ. 4 ರಿಂದ 6 ಶಾಸಕರಿಗೆ ಬಿಜೆಪಿ (BJP) ಟಿಕೆಟ್ ನೀಡಲ್ಲ, ನಾಲ್ಕೈದು ಶಾಸಕರನ್ನ ಬಿಟ್ಟು ಬೇರೆ ಎಲ್ಲರಿಗೂ ಟಿಕೆಟ್ ನೀಡಲಾಗುತ್ತೆ. ಯಾರು ಪಕ್ಷ ಬಿಡಲ್ಲ, ಬಿಡುವವರು ಬಿಟ್ಟು ಹೋಗಬಹುದು ಅಂತ ಹೊಸ ಬಾಂಬ್ ಸಿಡಿಸಿದ್ದಾರೆ. ಈ ನಡುವೆ ಬಿಎಸ್ ಯಡಿಯೂರಪ್ಪ ಅವರಿಗೆ ಮಾತಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel), ಯಡಿಯೂರಪ್ಪ ಹೇಳಿಕೆಯನ್ನು ನಾನು ಅಲ್ಲಗಳೆಯೋದಿಲ್ಲ. ಆದರೆ ನಮ್ಮಲ್ಲಿ ಟಿಕೆಟ್ ಫೈನಲ್ ಮಾಡುವುದು ಪಾರ್ಲಿಮೆಂಟರಿ ಬೋರ್ಡ್ (Parliamentary Board ). ಈಗ ಚರ್ಚೆ ಬೇಡ , ಎಲ್ಲವೂ ಸಂಸದಿಯ ಮಂಡಳಿ ಸಭೆಯಲ್ಲಿ ತೀರ್ಮಾನ ಆಗಲಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ಹೇಳಿಕೆ ಸಮ್ಮತಿ ಸೂಚಿಸಿದ್ದಾರೆ.
ಐವಾನ್ ಶಾಯಿ ಗೆಸ್ಟ್ ಹೌಸ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ ಅವರು, ಪಕ್ಷಕ್ಕೆ ಯಾರು ಬರುತ್ತಾರೆ ಅವರಿಗೆ ಸ್ವಾಗತ, ಅದೇ ರೀತಿ ಯಾರು ಹೋಗಬೇಕು ಎಂದುಕೊಂಡಿದ್ದಾರೆ ಅವರು ಹೋಗಬಹುದು. ಬಹುತೇಕ ಎಲ್ಲಾ ಶಾಸಕರಿಗೂ, ಅಂದರೆ ನಾಲ್ಕಾರು ಮಂದಿಗೆ ಹೊರತುಪಡಿಸಿ ಎಲ್ಲರಿಗೂ ಪಕ್ಷದ ಟಿಕೆಟ್ ಸಿಗಲಿದೆ ಎಂದು ಹೇಳಿದ್ದರು.
ನಮ್ಮ ಯಾತ್ರೆ ನೋಡುತ್ತಿದ್ದೀರಾ?
ರಾಜ್ಯಾದ್ಯಂತ ವಿಜಯಸಂಕಲ್ಪ ಯಾತ್ರೆ ಆರಂಭವಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಬೀದರ್ ಬಸವಕಲ್ಯಾಣದಿಂದ ಚಾಲನೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ 42 ಕ್ಷೇತ್ರದಲ್ಲಿ 30 ಕ್ಷೇತ್ರ ಗೆದ್ದೆ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ. ಕಾಂಗ್ರೆಸ್ ನಾಯಕರು ಟೀಕೆ ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದಾರೆ.
ರಮೇಶ್ ಕುಮಾರ್ ಅವರು ಜವಾಬ್ದಾರಿ ಸ್ಥಾನದಲ್ಲಿದ್ದಾರೆ, ಕಾಂಗ್ರೆಸ್ ಹಿರಿಯ ಶಾಸಕರೇ ಹೇಳಿದ್ದಾರೆ ನಾವು ಸಾಕಷ್ಟು ಮಾಡಿಕೊಂಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಉತ್ತರ ನೀಡಬೇಕು. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದಾರೆ. ಸಭೆಯಲ್ಲಿ 200 ಜನ ಸೇರುತ್ತಿಲ್ಲ, ನಮ್ಮ ಯಾತ್ರೆ ನೋಡುತ್ತಿದ್ದೀರಾ? 130ಕ್ಕೂ ಹೆಚ್ಚು ಸೀಟು ಗೆಲ್ಲುವ ಭರವಸೆ ಇದೆ. ಮತ್ತೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿದ್ದಾರೆ.
ಮೋದಿ ಮತ್ತೆ ಕರ್ನಾಟಕಕ್ಕೆ ಬರುತ್ತಾರೆ
ಇದೇ ವೇಳೆ ಮೋದಿ ಆಗಮನ ಕುರಿತಂತೆ ಟೀಕಿಸಿದ್ದ ಕಾಂಗ್ರೆಸ್ ಪಕ್ಷದ ನಾಯಕರಿಗೆ ತಿರುಗೇಟು ನೀಡಿರುವ ಬಿಎಸ್‌ವೈ ಅವರು, ಮೊದಲು ನಿಮ್ಮ ಪಕ್ಷದಲ್ಲಿ ನಾಯಕರು ಯಾರಿದ್ದಾರೆ ಹೇಳಿ ಸಿದ್ದರಾಮಯ್ಯ ಅವರೇ ಅಂತ ಪ್ರಶ್ನೆ ಮಾಡಿದರು. ರಾಹುಲ್ ಗಾಂಧಿ ಬಗ್ಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ.
ದಾವಣಗೆರೆಯಲ್ಲಿ ವಿಜಯಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭ ನಡೆಯಲಿದೆ. ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಸವಕಲ್ಯಾಣ ಇಡೀ ದೇಶ ಗಮನ ಸೆಳೆಯುವ ಸ್ಥಳ ಆಗಬೇಕು ಎನ್ನುವುದು ನಮ್ಮ ಅಪೇಕ್ಷೆ. ಕಲ್ಯಾಣ ಕರ್ನಾಟಕದಲ್ಲಿ ಪ್ರತ್ಯೇಕ ಸಚಿವಾಲಯದ ಬಗ್ಗೆ ಚರ್ಚೆ ಮಾಡುವೆ ಎಂದರು.
ಇದನ್ನೂ ಓದಿ: Shivalinge Gowda: ಶಾಸಕ ಶಿವಲಿಂಗೇಗೌಡ ಜೆಡಿಎಸ್ ತೊರೆದು ‘ಕೈ’ ಹಿಡಿಯೋದು ಬಹುತೇಕ ಫಿಕ್ಸ್! ಆಡಿಯೋ ವೈರಲ್
ಇದೇ ವೇಳೆ ಕೇಂದ್ರದ ನಾಯಕರು ಎಲ್ಲಿ ಹೇಳುತ್ತಾರೆ ಅಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ. ಶಿಕಾರಿಪುರ ಆಗಬಹುದು ಬೇರೆಯಾಗಬಹುದು. ಆದಷ್ಟು ಬೇಗ ಬಿಜೆಪಿ ಹುರಿಯಾಳುಗಳ ಪಟ್ಟಿ ಬಿಡುಗಡೆಯಾಗಲಿದೆ. ಹಾಲಿ ಶಾಸಕರ ಬಗ್ಗೆ ನಾಲ್ಕಾರು ಜನರನ್ನ ಬಿಟ್ಟು ಎಲ್ಲರನ್ನೂ ಟಿಕೆಟ್ ನೀಡಲಾಗುತ್ತದೆ.ಯಾರು ಪಕ್ಷ ಬಿಡಲ್ಲ, ಆದರೆ ಹೋಗುವವರು ಸಂತೋಷದಿಂದ ಹೋಗಲಿ, ಬಿಜೆಪಿಗೆ ಬರುವವರಿಗೆ ಸ್ವಾಗತ ಎಂದು ಹೇಳಿದರು.
ಇದಕ್ಕೂ ಮುನ್ನ ವಿಜಯಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಶಹಾಬಾದ್ ಪಟ್ಟಣಕ್ಕೆ ಆಗಮಿಸಿದ್ದ ಬಿಎಸ್ ಯಡಿಯೂರಪ್ಪ ಅವರಿಗೆ ನಗರದ ಬಸವೇಶ್ವರ ವೃತ್ತದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಶಾಸಕ ಬಸವರಾಜ್ ಮತ್ತಿಮೂಡ್ ಅವರು ಪಕ್ಷದ ನಾಯಕರಿಗೆ ಅದ್ದೂರಿ ಸ್ವಾಗತ ಕೋರಿದ್ದರು. ಈ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಸಾಥ್ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ