ಬೆಂಗಳೂರು: ಇಂದು ಕಾಂಗ್ರೆಸ್ ಸರ್ಕಾರದ (Congress Govt) ಮೊದಲೇ ಸಚಿವ ಸಂಪುಟ ಸಭೆ ನಡೆದಿದೆ. ನೂತನ ಸರ್ಕಾರದ ಬಗ್ಗೆ ಕರ್ನಾಟಕ (Karnataka) ನಾಡಿನ ನಾಡಿನ ಜನತೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಎಲ್ಲಾ 5 ಗ್ಯಾರಂಟಿಗಳು (Congress Guarantee) ಇಂದೇ ಜಾರಿಯಾಗುತ್ತವೆ ಎಂದುಕೊಂಡಿದ್ದರು. ಆದರೆ ಇಂದು ಕೇವಲ ಘೋಷಣೆಯಾಗಿದೆಯಷ್ಟೇ. ಯಾವುದೇ ಕ್ಲಾರಿಟಿ ಇಲ್ಲದೇ ಘೋಷಣೆ ಮಾಡಿದ್ದಾರೆ. ಯಾವ ಕ್ಲಾರಿಟಿ ಮಾಡದೇ ಘೋಷಣೆ ಮಾಡಿದ್ದಾರೆ. ಮುಂದಿನ ಕ್ಯಾಬಿನೆಟ್ (Cabinet) ಅಲ್ಲಿ ಜಾರಿ ಮಾಡುತ್ತೇವೆ ಅಂತಿದ್ದಾರೆ. ಇದರೊಂದಿಗೆ ಜನರ ನಿರೀಕ್ಷೆಯನ್ನು ಕಾಂಗ್ರೆಸ್ ಪಕ್ಷ ಹುಸಿ ಮಾಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bomami) ಆರೋಪಿಸಿದ್ದಾರೆ.
ಡಿಕೆಶಿ ಹೇಳಿಕೆ ಮತದಾರರಿಗೆ ಮಾಡಿದ ಅವಮಾನ
ಕಾಂಗ್ರೆಸ್ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ ಅವರು, 50 ಸಾವಿರ ಕೋಟಿ ಆದಾಯ ಹೆಚ್ಚು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅಂದಿದ್ದಾರೆ. ಕಳೆದ ವರ್ಷಕ್ಕಿಂತ ಆದಾಯ ಹೆಚ್ಚು ಮಾಡುತ್ತೇವೆ ಅಂತಿದ್ದಾರೆ. ಆದರೆ ಡಿಕೆ ಶಿವಕುಮಾರ್ ದಾರಿಯಲ್ಲಿ ಹೋಗುವವರಿಗೆ ಎಲ್ಲರಿಗೂ ಕೊಡಲು ಆಗುತ್ತಾ ಅಂತ ಪ್ರಶ್ನೆ ಮಾಡಿದ್ದಾರೆ.
ಆದರೆ ನಾನು ಅವರಿಗೆ ದಾರಿಯಲ್ಲಿ ಇದ್ದವರು, ಹೋಗುವವರು ಎಲ್ಲರೂ ಸೇರಿ ವೋಟ್ ಹಾಕಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತಾಡೋದು ಒಂದು ತರ, ಈಗ ದಾರಿಯಲ್ಲಿ ಹೋಗೋರು ಅಂತಾರೆ. ಡಿಕೆ ಶಿವಕುಮಾರ್ ಅವರ ಹೇಳಿಕೆ ಮತದಾರರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.
ಇದನ್ನೂ ಓದಿ: Free Bus: ಸರ್ಕಾರಿ ಬಸ್‌ಗಳಲ್ಲಿನ್ನು ಮಹಿಳೆಯರಿಗೆ ಉಚಿತ ಪ್ರಯಾಣ! ಆದ್ರೆ ಕಂಡೀಷನ್ಸ್ ಅಪ್ಲೈ!
ನಿಧಾನವಾಗಿ ಕಾಂಗ್ರೆಸ್ ನಿಜಬಣ್ಣ ನಿಧಾನಕ್ಕೆ ಗೊತ್ತಾಗುತ್ತೆ. ಈಗಾಗಲೇ ಬಿಪಿಎಲ್ ಲಿಸ್ಟ್ ಇದೆ, ಅದರೂ ಕಾಂಗ್ರೆಸ್ ಮನಸ್ಸು ಮಾಡಿಲ್ಲ. ರಾಜ್ಯ ಸರ್ಕಾರದ ಬಳಿ ಎಲ್ಲಾ ಮಾಹಿತಿ ಇದೆ. ಮನಸ್ಸಿದ್ದರೆ ಮಾರ್ಗ, ಆದರೆ ಗೆದ್ದ ನಂತರ ಯಾಕೋ ಕಾಂಗ್ರೆಸ್ ಮನಸ್ಸು ಮಾಡುತ್ತಿಲ್ಲ. ಮನಸ್ಸು ಇಲ್ಲ ಎಂದರೆ ಎಲ್ಲಾ ನೆಪ. ಈ ವರ್ಷದಿಂದ ಹೊರಬಂದ ಪದವಿದರ ನಿರುದ್ಯೋಗಿಗಳಿಗೆ ಅಂತ ಮಾತಾಡಿದ್ದಾರೆ. ಆದರೆ ಕಳೆದ ವರ್ಷ ಪದವಿ ಮುಗಿಸಿದವರಿಗೆ ಯೋಜನೆ ಇಲ್ಲ.
ಎಲ್ಲಾ ಮುಖ್ಯಮಂತ್ರಿಗಳು ಸೇರಿ 1 ಲಕ್ಷ ಕೋಟಿ ಸಾಲ ಮಾಡಿದ್ದರು. ಆದರೆ ಸಿದ್ದರಾಮಯ್ಯ ಸರ್ಕಾರ 5 ವರ್ಷದಲ್ಲಿ 1 ಲಕ್ಷ ಕೋಟಿ ಸಾಲ ಮಾಡಿದ್ದರು. ಈಗಾಗಲೇ ನಾನು ಸದನದಲ್ಲೇ ಸಾಲದ ಬಗ್ಗೆ ಮಾಹಿತಿ ನೀಡಿದ್ದೇನೆ. ಈ ರೀತಿ ಬಿಟ್ಟಿ ಭಾಗ್ಯಗಳಿಂದ ಅಭಿವೃದ್ಧಿಗೆ ತೊಂದರೆಯಾಗುತ್ತೆ. ಬೇರೆ ಬೇರೆ ಇಲಾಖೆಗಳಿಗೆ, ಯೋಜನೆಗಳಿಗೆ ಹೇಗೆ ದುಡ್ಡು ಹೊಂದಿಸುತ್ತಾರೆ. ಕಾಂಗ್ರೆಸ್ ಬರೀ ಸುಳ್ಳುಗಳನ್ನ ಮಾತನಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ