Union Budget 2019 | ಎಲ್ಲವೂ ಸೂರ್ಯನ ಕೆಳಗಿದೆ, ಆದರೆ, ಹಿಡಿಯಲು ಏನೂ ಇಲ್ಲ; ಕೇಂದ್ರ ಬಜೆಟ್​ ಬಗ್ಗೆ ಸಿದ್ದರಾಮಯ್ಯ ಟೀಕೆ

2019-20ರ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಪತ್ರ ಸಂಪೂರ್ಣವಾಗಿ ರೈತರು,ಯುವಜನರು ಮತ್ತು ಗ್ರಾಮೀಣ ಭಾರತಕ್ಕೆ ಮಾರಕವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.

HR Ramesh | news18
Updated:July 5, 2019, 5:58 PM IST
Union Budget 2019 | ಎಲ್ಲವೂ ಸೂರ್ಯನ ಕೆಳಗಿದೆ, ಆದರೆ, ಹಿಡಿಯಲು ಏನೂ ಇಲ್ಲ; ಕೇಂದ್ರ ಬಜೆಟ್​ ಬಗ್ಗೆ ಸಿದ್ದರಾಮಯ್ಯ ಟೀಕೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
  • News18
  • Last Updated: July 5, 2019, 5:58 PM IST
  • Share this:
ಬೆಂಗಳೂರು: 2019-20ನೇ ಸಾಲಿನ ಕೇಂದ್ರ ಬಜೆಟ್ಅನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುವ ಮೂಲಕ ಬಡವರಿಗೆ ಈ ಬಜೆಟ್​ ಹೊರೆಯಾಗಿದೆ ಎಂದು ವಿರೋಧ ಪಕ್ಷಗಳ ನಾಯಕರು ಟೀಕೆ ಮಾಡಿದ್ದಾರೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಜೆಟ್​ಅನ್ನು ಆಕಾಶದಲ್ಲಿ ಚಂದಮಾಮನನ್ನು ತೋರಿಸುವ ಬಜೆಟ್​, ಜನರ ಕೈಗೆ ಚಿಪ್ಪುಕೊಡುವ ಬಜೆಟ್​ ಎಂದು ತೀವ್ರವಾಗಿ ಟೀಕಿಸಿದ್ದಾರೆ.

ಬಜೆಟ್ ಪ್ರಕಟವಾದ ಬಳಿಕ ಸಾಲು ಸಾಲು ಟ್ವೀಟ್​ ಮಾಡಿರುವ ಸಿದ್ದರಾಮಯ್ಯ ಅವರು, ಮಳೆ-ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರ ರೈತರ ಪರವಾಗಿ ಒಂದೇ ಒಂದು ಉತ್ತಮವಾದ ಯೋಜನೆಯನ್ನು ಜಾರಿಗೆ ತಂದಿಲ್ಲ. ಯುವಜನತೆ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸುವ ಭರವಸೆಯನ್ನು ನೀಡಿಲ್ಲ. ಕೇಂದ್ರ ಬಜೆಟ್​ನಲ್ಲಿ ಗ್ರಾಮೀಣ ಭಾಗ, ರೈತರು ಮತ್ತು ಯುವಜನತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ತೈಲ ಬೆಲೆಯನ್ನು ಏರಿಕೆ ಮಾಡಿ, ಜನಸಾಮಾನ್ಯರಿಗೆ ಬರೆ ಎಳೆದಿದ್ದಾರೆ ಎಂದು ಬಜೆಟ್​ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನು ಓದಿ: Union Budget 2019: ಇದು ಅತೀ ಕೆಟ್ಟ ಬಜೆಟ್​, ನಿರ್ಮಲಾ ಸೀತಾರಾಮನ್​ಗೆ ಅನುಭವದ ಕೊರತೆ; ಬಜೆಟ್​​ ಬಗ್ಗೆ ಪರಮೇಶ್ವರ್ ಕಿಡಿ

ಸಾಲ ಮನ್ನಾಕ್ಕಾಗಿ ದೇಶದ ರೈತರು ಒಕ್ಕೊರಲಿನಿಂದ ಮೊರೆ ಇಡುತ್ತಿದ್ದಾರೆ. ರಾಜ್ಯದ ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಈಗಿನ ಮೈತ್ರಿ ಸರ್ಕಾರಗಳೆರಡೂ ರೈತರ ಮೊರೆಗೆ ಓಗೊಟ್ಟು ಸಾಲ ಮನ್ನಾ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿದೆ. ಆದರೆ ನರೇಂದ್ರ ಮೋದಿ ಸರ್ಕಾರ ರೈತರ ಮೊರೆ ಕೇಳದೆ ಇರುವಷ್ಟು ಕಿವುಡಾಗಿದೆ.#Budget2019First published:July 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ